ನಟ ದರ್ಶನ್ ಭೇಟಿಯಾದ ತಾಯಿ ಮೀನಾ ತೂಗುದೀಪ: ಜೈಲಲ್ಲಿ ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಹೆತ್ತವ್ವ..!
ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ರನ್ನು ನೋಡಲು ತಾಯಿ ಮೀನಾ ಇದೇ ಮೊದಲ ಬಾರಿಗೆ ಜೈಲಿಗೆ ಆಗಮಿಸಿದ್ದರು. ಅಕ್ಕ ದಿವ್ಯಾ, ಭಾವ ಮಂಜುನಾಥ್, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ನಟನ ಆರೋಗ್ಯ ವಿಚಾರಿಸಿದರು. ಸುಮಾರು 20 ನಿಮಿಷಗಳ ಕಾಲ ಕುಟುಂಬ ಸದಸ್ಯರೊಂದಿಗೆ ದರ್ಶನ್ ಮಾತನಾಡಿದರು.