ಆಸ್ಟ್ರೇಲಿಯಾದ ಬೋಂಡಿ ಬೀಚ್ನಲ್ಲಿ 15 ಜನರ ಹತ್ಯೆ ನಡೆಸಿದ ಭಯೋತ್ಪಾದಕ ಅಪ್ಪ-ಮಗ, ಹನುಕ್ಕಾ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯಹೂದಿಗಳ ಮೇಲೆ ಗುಂಡಿನ ದಾಳಿಗೂ ಮೊದಲು ಬಾಂಬ್ ಎಸೆದಿದ್ದರು ಎಂಬ ವಿಷಯ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಹೊಸದಾಗಿ ಸಿವಿಲ್ ಪಿಎಸ್ಐ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಗೃಹ ಇಲಾಖೆ ಕೆಂಪು ಬಾವುಟ ತೋರಿಸಿದ್ದು, ನೂತನ ವರ್ಷ ಸ್ವಾಗತದ ಸಂಭ್ರಮದ ಹೊತ್ತಿನಲ್ಲೇ ಉದ್ಯೋಕಾಂಕ್ಷಿಗಳಿಗೆ ಕಹಿ ಸಂದೇಶ ಲಭಿಸಿದಂತಾಗಿದೆ.
ಉಪಗ್ರಹಗಳ ಮೂಲಕ ಕುಗ್ರಾಮಗಳಿಗೂ ಅಂತರ್ಜಾಲ ತಲುಪಿಸುವ ಉದ್ದೇಶ ಹೊಂದಿರುವ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ರ ಸ್ಟಾರ್ಲಿಂಕ್ ಉಪಗ್ರಹಗಳ ಪುಂಜವನ್ನು ಧ್ವಂಸಗೊಳಿಸಲು ರಷ್ಯಾ ಹೊಸ ಆಯುಧವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ನ್ಯಾಟೋದ 2 ಸದಸ್ಯ ರಾಷ್ಟ್ರಗಳ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿವೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಅಂತ್ಯವಾಗಿದ್ದು, 7-8 ತಿಂಗಳಲ್ಲಿ ಇದು ಜಾರಿಗೆ ಬರಲಿದೆ. ವಿಶೇಷವೆಂದರೆ, ಇದು ಭಾರತದ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಮೊದಲ ವ್ಯಾಪಾರ ಒಪ್ಪಂದವಾಗಿದೆ.
ಮನರೇಗಾ ಯೋಜನೆಯನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ರಾಮ್ ಜಿ ಯೋಜನೆಯ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದು, ಜ.16ರಂದು ‘ಪ್ರತಿರೋಧ ದಿನ’ವನ್ನಾಗಿ ಆಚರಿಸಿ ಪ್ರತಿಭಟನೆ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಕ್ಕಾಗಿ ಜನರು ಪಶ್ಚಾತ್ತಾಪ ಪಡುವಂತ್ತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಐಎಂಎಫ್ನಿಂದ ಸಾಲ ಪಡೆಯುವ ಷರತ್ತಿನ ಸಲುವಾಗಿ, ದಿವಾಳಿಯಾಗಿರುವ ಸರ್ಕಾರಿ ಒಡೆತನದ ವಿಮಾನಯಾನ ಸಂಸ್ಥೆ ಪಿಐಎನ ಖಾಸಗೀಕರಣಕ್ಕೆ ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
2011ರ ಫುಕುಶಿಮಾ ದುರಂತದ ಬಳಿಕ ಸ್ಥಗಿತವಾಗಿದ್ದ ಜಗತ್ತಿನ ಅತಿ ದೊಡ್ಡ ಅಣುವಿದ್ಯುತ್ ಸ್ಥಾವರವನ್ನು15 ವರ್ಷಗಳ ನಂತರ ಮತ್ತೆ ಆರಂಭಿಸಲು ಜಪಾನ್ ಮುಂದಾಗಿದೆ. -ವಿದೇಶಿ ಇಂಧನ ಅವಲಂಬನೆ ಕಡಿತಗೊಳಿಸಲು ಹೊಸ ಕ್ರಮ
ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇದರ ನಡುವೆ ಬೈರತಿ ಹಾಗೂ ಅವರ ಆಪ್ತರಿಗೆ ಇದೀಗ ‘ಕೋಕಾ’ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ನವದೆಹಲಿಯಲ್ಲಿನ ತನ್ನ ರಾಯಭಾರ ಕಚೇರಿಯಲ್ಲಿ ಭಾರತೀಯರಿಗೆ ದೂತಾವಾಸ ಕಚೇರಿ ಸೇವೆ ಮತ್ತು ವೀಸಾ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುತ್ತೇವೆ ಎಂದು ಬಾಂಗ್ಲಾದೇಶ ಸರ್ಕಾರ ಸೋಮವಾರ ಘೋಷಿಸಿದೆ.