'ನೈಟ್ ಟ್ರಾಫಿಕ್ ಬೇಡ' ಮೌನ ಪ್ರತಿಭಟನೆಗೆ ಯೂಸುಫ್ ಪಠಾಣ್ ಸಾಥ್

ಪರಿಸರವಾದಿ ಸುರೇಶ್ ಹೆಬ್ಳೀಕರ್, ಬಂಡೀಪುರ ಹೋರಾಟ ಕರ್ತೃ ರಾಜ್ ಕುಮಾರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯುತ್ತಿದ್ದು, ಬಂಡಿಪುರ ಟೋಲ್’ನಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಮಾಡಿಕೊಟ್ಟರೆ ಪ್ರಾಣಿಗಳ ಜೀವಕ್ಕೆ ಅಪಾಯ ಎಂದು ಪರಿಸರವಾದಿಗಳ ಆಂತಕ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ತನಕ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೋ, ಬೇಡವೋ ಎನ್ನುವ ಕುರಿತಂತೆ ಸುಪ್ರೀಂ ಕೋರ್ಟ್ ಇದೇ ನವೆಂಬರ್ 17ರಂದು ತೀರ್ಪು ನೀಡಲಿದೆ.