ಹಾರ್ಮುಜ್ ಜಲಸಂಧಿಯಲ್ಲಿ, ಭಾರತದ ಕಾಂಡ್ಲಾ ಬಂದರಿಗೆ ಬರುತ್ತಿದ್ದ ಥೈಲ್ಯಾಂಡ್‌ನ 'ಮಯೂರಿ ನಾರಿ' ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಘಟನೆಯು ಸಮುದ್ರಯಾನ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಅಮಾಯಕ ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದಿದೆ.
- Home
- News
- India News
- India Latest News Live: ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ!
India Latest News Live: ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ!

ಚಂಡೀಗಢ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ರೈತರೊಬ್ಬರ ಪುತ್ರಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು.
2023ರಲ್ಲಿ ರಾಹುಲ್ ಗಾಂಧಿಯವರು ಮೊದಲ ಬಾರಿಗೆ ಮದಿನಾ ಗ್ರಾಮದಲ್ಲಿ ರೈತ ಸಂಜಯ್ ಮಲಿಕ್ ಎನ್ನುವವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಎದುರಿಸಿರುವ ಕಷ್ಟಗಳ ಬಗ್ಗೆ ಆಲಿಸಿದ್ದರು. ಇದೇ ಬಾಂಧವ್ಯದಿಂದ ಅವರಿಗ ಆ ರೈತನ ಮಗಳ ಮದುವೆಗೆ ಸಾಕ್ಷಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿದು, ರೈತನ ಕುಟುಂಬಸ್ಥರು, ಗ್ರಾಮಸ್ಥರ ಜತೆಗೆ ಕೆಲ ಕಾಲ ಮಾತುಕತೆ ನಡೆಸಿದರು.
India Latest News Live 11 March 2026 ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ; ಪ್ರಚೋದನಕಾರಿ ಕೃತ್ಯಕ್ಕೆ ಭಾರತ ತೀವ್ರ ಖಂಡನೆ!
India Latest News Live 11 March 2026 ANR Biopic - ಅಕ್ಕಿನೇನಿ ಬಯೋಪಿಕ್ ಯಾವಾಗ? ನಾಗಾರ್ಜುನ-ನಾಗಚೈತನ್ಯರಲ್ಲಿ ಯಾರು ಹೀರೋ?
ಹಿಂದಿನ ತಲೆಮಾರಿನ ಹಲವು ನಟರ ಬಯೋಪಿಕ್‌ಗಳು ಈಗಾಗಲೇ ತೆರೆಕಂಡು ಸದ್ದು ಮಾಡಿವೆ. ಇದೀಗ ಅಕ್ಕಿನೇನಿ ನಾಗೇಶ್ವರ ರಾವ್ (ANR) ಅವರ ಬಯೋಪಿಕ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಯಾವಾಗ ಬರಲಿದೆ? ಯಾರು ನಟಿಸಲಿದ್ದಾರೆ? ಇದರಲ್ಲಿ ನಿಜವೆಷ್ಟು?
India Latest News Live 11 March 2026 ಬ್ಯೂಟಿಯಲ್ಲಿ ಆಲಿಯಾ, ಕರೀನಾಗಿಂತ ಕಡಿಮೆಯೇನಲ್ಲ, ಐಪಿಎಸ್ ಅಧಿಕಾರಿಯನ್ನೇ ವರಿಸಲಿರುವ ದೇಶದ ಬ್ಯೂಟಿಫುಲ್ IPS ಅಧಿಕಾರಿ!
ಉತ್ತರ ಪ್ರದೇಶದ ಸಂಭಾಲ್ ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಬರೇಲಿ ಎಸ್‌ಪಿ ಅನ್ಶಿಕಾ ವರ್ಮಾ ಅವರು ಮಾರ್ಚ್ 29 ರಂದು ವಿವಾಹವಾಗಲಿದ್ದಾರೆ. 2021ರಲ್ಲಿ ಗೋರಖ್‌ಪುರದಲ್ಲಿ ಭೇಟಿಯಾದ ಈ ಐಪಿಎಸ್ ಜೋಡಿಯ ವಿವಾಹವು ರಾಜಸ್ಥಾನದ ಜೋಧ್‌ಪುರದಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ.
India Latest News Live 11 March 2026 ಅಮೆರಿಕಾದಲ್ಲಿ ತೈಲ ಸಂಸ್ಕರಣಾಗಾರ ಸ್ಥಾಪಿಸಲಿರುವ ರಿಲಯನ್ಸ್ - ಇದು US ಇತಿಹಾಸದಲ್ಲೇ ಅತಿದೊಡ್ಡ ಒಪ್ಪಂದ ಎಂದ ಟ್ರಂಪ್
ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕಾದಲ್ಲಿ ಭಾರಿ ಮೊತ್ತದ ಹೂಡಿಕೆ ಮಾಡಿದೆ. ಟೆಕ್ಸಾಸ್‌ನಲ್ಲಿ $300 ಬಿಲಿಯನ್ ಮೌಲ್ಯದ ತೈಲ ಸಂಸ್ಕರಣಾಗಾರವನ್ನು ಸ್ಥಾಪಿಸುತ್ತಿದ್ದು,. ಕಳೆದ 50 ವರ್ಷಗಳಲ್ಲಿ ಅಮೆರಿಕಾದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹೊಸ ಸಂಸ್ಕರಣಾಗಾರ ಇದಾಗಿದೆ.
India Latest News Live 11 March 2026 ನಾಳೆಯಿಂದ ಸನಾತನ ಪ್ರೀಮಿಯರ್ ಲೀಗ್, ಪ್ರತಿ ರನ್ ಬಂದಾಗಲೂ ಆಸಿಡ್ ದಾಳಿ ಸಂತ್ರಸ್ಥರಿಗೆ 500 ರೂಪಾಯಿ ದೇಣಿಗೆ!
ದೇವಕಿನಂದನ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ 'ಸನಾತನ ಪ್ರೀಮಿಯರ್ ಲೀಗ್' (SPL) ಎಂಬ ರಾಷ್ಟ್ರೀಯ ಟಿ10 ಟೂರ್ನಿ ಆರಂಭವಾಗಿದೆ. ಐಪಿಎಲ್ ಮಾದರಿಯ ವೇದಿಕೆ ನೀಡುವುದು ಮತ್ತು ಪ್ರತಿ ರನ್‌ಗೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುವುದು ಇದರ ಮುಖ್ಯ ಉದ್ದೇಶ.
India Latest News Live 11 March 2026 ICC Team of the Tournament - ವರ್ಲ್‌ಕಪ್ ಗೆದ್ದ ನಾಯಕ ಸೂರ್ಯಕುಮಾರ್‌ಗೆ ಟೀಮ್ ಆಫ್ ಟೂರ್ನಮೆಂಟ್‌ನಲ್ಲಿ ಸ್ಥಾನವಿಲ್ಲ!
India Latest News Live 11 March 2026 ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?
ಕರೀನಾ ಕಪೂರ್ ಪ್ರೀತಿಸಿ ಮದುವೆಯಾದ ಸೈಫ್ ಅಲಿ ಖಾನ್ ಲಕ್ಷಾಂತರ ಹಿಂದೂಗಳನ್ನು ಕೊಂದ ಐತಿಹಾಸಿಕ ವ್ಯಕ್ತಿ ತೈಮೂರ್ ಹೆಸರನ್ನು ತಮ್ಮ ಮಗನಿಗೆ ಇಟ್ಟು ವಿವಾದ ಸೃಷ್ಟಿಸಿದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಹೆಸರಿನ ಹಿಂದಿನ ಕಾರಣದ ಬಗ್ಗೆ ಕರೀನಾ ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.
India Latest News Live 11 March 2026 IPL 2026 ವೇಳಾಪಟ್ಟಿ ಪ್ರಕಟ - ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ, ಮಾ.28ಕ್ಕೆ ಹಾಲಿ ಚಾಂಪಿಯನ್ ಆರ್‌ಸಿಬಿಗೆ ಇವರೇ ಎದುರಾಳಿ!
India Latest News Live 11 March 2026 ನಿರ್ದೇಶಕ ರಾಘವೇಂದ್ರ ರಾವ್ ಅವರ ಆ ದೊಡ್ಡ ಆಸೆ ಈಡೇರಲೇ ಇಲ್ಲ; ಮಾತು ಕೊಟ್ಟ ಸ್ಟಾರ್ ನಟಿ ಯಾರು?
ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ವೃತ್ತಿಜೀವನದಲ್ಲಿ ಒಂದು ಆಸೆ ಈಡೇರಲೇ ಇಲ್ಲ. ಆ ಆಸೆಯನ್ನು ಈಡೇರಿಸುವುದಾಗಿ ಒಬ್ಬ ಸ್ಟಾರ್ ನಟಿ ಮಾತು ಕೊಟ್ಟಿದ್ದರು. ಆದರೆ, ಆ ಮಾತನ್ನು ಉಳಿಸಿಕೊಳ್ಳುವ ಮೊದಲೇ ಅವರು ಇಹಲೋಕ ತ್ಯಜಿಸಿದರು. ಹಾಗಾದರೆ ಆ ನಟಿ ಯಾರು? ಆ ಕಥೆ ಏನು? ಇಲ್ಲಿದೆ ವಿವರ.
India Latest News Live 11 March 2026 ಟಿ20 ವಿಶ್ವಕಪ್ ಗೆದ್ದ ಪ್ಲೇಯರ್‌ಗೆ ಸಿಗದ ವಿಮಾನ ಟಿಕೆಟ್, ರೈಲಿನಲ್ಲಿ ರಹಸ್ಯವಾಗಿ ಪ್ರಯಾಣ ಬೆಳೆಸಿದ ಸ್ಟಾರ್ ಆಟಗಾರ!
2026ರ ಟಿ20 ವಿಶ್ವಕಪ್ ಗೆದ್ದ ನಂತರ, ವಿಮಾನ ಟಿಕೆಟ್ ಸಿಗದ ಕಾರಣ ಆಲ್ ರೌಂಡರ್ ಶಿವಂ ದುಬೆ ಅಹಮದಾಬಾದ್‌ನಿಂದ ಮುಂಬೈಗೆ 3ನೇ ಎಸಿ ರೈಲಿನಲ್ಲಿ ಪ್ರಯಾಣಿಸಿದರು. ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಮಾಸ್ಕ್, ಕ್ಯಾಪ್ ಧರಿಸಿ ಗುರುತು ಮರೆಮಾಚಿದ್ದರು.
India Latest News Live 11 March 2026 Trisha Krishnan - ತ್ರಿಷಾ ಜೊತೆ ನಟಿಸಿ ಸ್ಟಾರ್ ಆದ ಆ ಹೀರೋ ಯಾರು? ಈಗೇನ್ಮಾಡ್ತಿದ್ದಾರೆ?
ಕೆಲವೊಂದು ಜೋಡಿಗಳು ಬೆಳ್ಳಿತೆರೆ ಮೇಲೆ ಸಖತ್ ಹಿಟ್ ಆಗುತ್ತವೆ. ಹೀರೋಗಳಿಂದ ಹೀರೋಯಿನ್‌ಗಳು, ಹೀರೋಯಿನ್‌ಗಳಿಂದ ಹೀರೋಗಳು ಸ್ಟಾರ್‌ಡಮ್ ಪಡೆಯುವುದು ಸಾಮಾನ್ಯ. ಇದೇ ರೀತಿ, ಸ್ಟಾರ್ ನಟಿ ತ್ರಿಷಾ ಜೊತೆ ನಟಿಸಿದ್ದರಿಂದಲೇ ಒಬ್ಬ ನಟ ತೆಲುಗಿನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದು ನಿಮಗೆ ಗೊತ್ತಾ?
India Latest News Live 11 March 2026 ಫರ್ಮಾನ್ ಖಾನ್ ಜೊತೆ ದಿಢೀರ್ ವಿವಾಹವಾದ ವೈರಲ್ ಗರ್ಲ್ ಮೋನಾಲಿಸಾ, ಅಂತರ್‌ಧರ್ಮೀಯ ಮದುವೆಗೆ ಕೇರಳ ಸಚಿವರ ಸಾಕ್ಷಿ!
India Latest News Live 11 March 2026 Ustaad Bhagat Singh ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿ ಯಾರು? - ವಯಸ್ಸಿನ ಅಂತರ 30 ವರ್ಷವಂತೆ!
ಸೌತ್ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ತಮ್ಮ 'ಉಸ್ತಾದ್ ಭಗತ್ ಸಿಂಗ್' ಚಿತ್ರದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿರುವ ನಾಯಕಿ ಯಾರು ಮತ್ತು ಅವರಿಬ್ಬರ ವಯಸ್ಸಿನ ಅಂತರ ಎಷ್ಟು ಎಂಬ ಚರ್ಚೆ ಜೋರಾಗಿದೆ.
India Latest News Live 11 March 2026 20 ಕೋಟಿ ವೆಚ್ಚದಲ್ಲಿ ಮದುವೆ ಆಗಿ ನಾಲ್ಕೇ ವರ್ಷದಲ್ಲಿ ಡೈವೋರ್ಸ್, ಗಂಡನಿಂದ ಹನ್ಸಿಕಾ ಮೋಟ್ವಾನಿ ಪಡೆದ ಜೀವನಾಂಶ ಎಷ್ಟು?
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೈಲ್ ಕಟೂರಿಯಾ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದು, ಹನ್ಸಿಕಾ ಯಾವುದೇ ಜೀವನಾಂಶವನ್ನು ಪಡೆದಿಲ್ಲ ಎಂಬುದು ವಿಶೇಷ. ಭಿನ್ನಾಭಿಪ್ರಾಯಗಳೇ ಡೈವೋರ್ಸ್‌ಗೆ ಕಾರಣ ಎನ್ನಲಾಗಿದೆ.
India Latest News Live 11 March 2026 ಈ ಬಾರಿ ಯುಗಾದಿ- ಅಮವಾಸ್ಯೆ ಒಂದೇ ದಿನ - ಪಿತೃ ತರ್ಪಣ, ಹಬ್ಬದ ಆಚರಣೆ ಮುಹೂರ್ತದ ಡಿಟೇಲ್ಸ್ ಇಲ್ಲಿದೆ
India Latest News Live 11 March 2026 ಹರೀಶ್ ರಾಣಾಗೆ ದಯಾಮರಣ - ಈ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆದಿದ್ದು 42 ವರ್ಷ ಕೋಮಾದಲ್ಲಿದ್ದ ದಾದಿ ಅರುಣಾಕಥೆ!
ಈ ಲೇಖನವು, 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ನರ್ಸ್ ಅರುಣಾ ಶಾನಬಾಗ್ ದುರಂತ ಕಥೆಯು ಭಾರತದಲ್ಲಿ ನಿಷ್ಕ್ರಿಯ ದಯಾಮರಣದ ಕಾನೂನು ಚರ್ಚೆಗೆ ಹೇಗೆ ಕಾರಣವಾಯಿತು?. ಇತ್ತೀಚೆಗೆ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ನೀಡಿದ ತೀರ್ಪು, 'ಘನತೆಯಿಂದ ಸಾಯುವ ಹಕ್ಕಿನ' ಕುರಿತ ಈ ಚರ್ಚೆ ಮುನ್ನೆಲೆಗೆ ತಂದಿದೆ.
India Latest News Live 11 March 2026 ರೈಲು ಪ್ರಯಾಣಿಕರ ಗಮನಕ್ಕೆ - ಎಲ್‌ಪಿಜಿ ಸಿಲಿಂಡರ್ ಅಭಾವ; ರೈಲಿನಲ್ಲಿ ಊಟ ಸಿಗುವುದು ಅನುಮಾನ?
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಸೃಷ್ಟಿಯಾಗಿದ್ದು, ಭಾರತೀಯ ರೈಲ್ವೆಯ ಅಡುಗೆ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ, ಐಆರ್‌ಸಿಟಿಸಿ ತನ್ನ ಅಡುಗೆ ಗುತ್ತಿಗೆದಾರರಿಗೆ ಪರ್ಯಾಯ ವಿಧಾನಗಳನ್ನು ಬಳಸಲು ಸೂಚಿಸಿದೆ.
India Latest News Live 11 March 2026 Hansika Divorce - ಗಂಡನಿಂದ ದೂರವಾದ ಪುನೀತ್ ರಾಜ್‌ಕುಮಾರ್ ಹೀರೋಯಿನ್ - 4 ವರ್ಷದ ದಾಂಪತ್ಯ ಜೀವನ ಅಂತ್ಯ!
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ, ಉದ್ಯಮಿ ಸೊಹೇಲ್ ಖತೂರಿಯಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು, ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ.
India Latest News Live 11 March 2026 ಎರಡು ತಿಂಗಳ ಬಳಿಕ ಬಂತು ಲಾಕ್‌ಡೌನ್ - ಇಲ್ಲಿದೆ ಅನುಪಮಾ ಪರಮೇಶ್ವರನ್ ಸಿನಿಮಾದ ಡೀಟೇಲ್ಸ್
ನಟಿ ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಸಿನಿಮಾ ಥಿಯೇಟರ್‌ಗೆ ಬಂದ ಎರಡು ತಿಂಗಳ ನಂತರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಸ್ಟ್ರೀಮ್ ಆಗುತ್ತಿದೆ.
India Latest News Live 11 March 2026 ಖಾನ್ ಸಾಹೇಬ್ರ ಫೋನ್ ರಿಂಗ್ಗೆ ವಿಮಾನ ಗಡಗಡ - ಫ್ಲೈಟ್ ದಿಕ್ಕೇ ಬದಲಾಯ್ತು- ಜೀವ ಭಯದಲ್ಲಿ ಪ್ರಯಾಣಿಕರು ತತ್ತರ
ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ, ಮುಸ್ಲಿಂ ಪ್ರಯಾಣಿಕರೊಬ್ಬರ ಫೋನ್ ರಿಂಗ್ ಆಗಿದ್ದರಿಂದ ಆತಂಕ ಸೃಷ್ಟಿಯಾಯಿತು. ಈ ಘಟನೆಯಿಂದಾಗಿ ವಿಮಾನವನ್ನು ಅಟ್ಲಾಂಟಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಭದ್ರತಾ ತಪಾಸಣೆಯ ನಂತರ ಸತ್ಯಾಂಶ ಬಯಲಾಯಿತು.