ಸುವರ್ಣ ನ್ಯೂಸ್ ಸೈಬರ್ ಅಂಗಳಕ್ಕೆ ಹಾರ್ದಿಕ ಸ್ವಾಗತ. ಹೌದು, ನೀವೀಗ ಕನ್ನಡ ನಾಡಿನ ಹಿರಿಯ ದಿನ ಪತ್ರಿಕೆ ಕನ್ನಡಪ್ರಭ, ನೇರ ದಿಟ್ಟ ನಿರಂತರ ವಾಹಿನಿ ಸುವರ್ಣ ಟಿವಿ ಮತ್ತು ಏಷ್ಯಾನೆಟ್ ನ್ಯೂಸ್ ನೆಟ್ವರ್ಕಿನ ಡಿಜಿಟಲ್ ಕನ್ನಡ ತಾಣದ ತ್ರಿವೇಣಿ ಸಂಗಮವೇ ಆಗಿರುವ ಈ ವೆಬ್ ಸೈಟಿನ "ನಮ್ಮ ಬಗ್ಗೆ" ಓದುತ್ತಿದ್ದೀರಿ.
ಸುದ್ದಿ, ಮಾಹಿತಿ ಮತ್ತು ಮನೋರಂಜನೆಯನ್ನು ಏಕಕಾಲಕ್ಕೆ ಉಣಬಡಿಸುವ ಕನ್ನಡ ಆನ್ ಲೈನ್ ಜಗತ್ತಿನ ಅತ್ಯಂತ ಪ್ರಭಾವಿ ಪೋರ್ಟಲ್ ಇದುವೆ. ಇಲ್ಲಿ ಕರ್ನಾಟಕದ ಮೂಲೆಮೂಲೆಗಳಿಂದ, ಭಾರತ ಮತ್ತು ವಿಶ್ವದ ನಾನಾ ಭಾಗಗಳಿಂದ ಹರಿದುಬರುವ ಕರಾರುವಾಕ್ಕಾದ, ವಿಶ್ವಾಸಾರ್ಹ ಸುದ್ದಿ-ವಿಡಿಯೋಗಳು ನಿಮ್ಮನ್ನು ಸದಾ ತುದಿಗಾಲಲ್ಲಿ ನಿಲ್ಲಿಸುವುದು ನಿಸ್ಸಂದೇಹ.
ಸುದ್ದಿ ಎಂದರೆ ಏನು, ಹಸಿಹಸಿ ರಾಜಕೀಯವೇ? ಒಣ ರಾಜಕಾರಣವೇ, ಅಪರಾಧಗಳ ಗಂಟುಮೂಟೆಯೇ? ಉಹೂಂ. ಸಿನಿಮಾ ಸಮಾಚಾರಗಳುಂಟು, ಉದ್ಯಮ-ವ್ಯಾಪಾರ ರಂಗದ ಮಾಹಿತಿಗಳುಂಟು, ಆಟೋಟಗಳ ನೇರ ವರದಿಗಳಿರುತ್ತವೆ. ಆರೋಗ್ಯ ಕ್ಷೇಮ ಸಮಾಚಾರಗಳು, ಸಾಹಿತ್ಯ- ಸಂಗೀತದ ಒಲುಮೆ. ಬದಲಾವಣೆಗೆ ಪಕ್ಕಾಗಿರುವ ಜೀವನ ಶೈಲಿಯ ತಾಜಾ ಚಿತ್ರಣಗಳಿಂದ ತುಂಬಿದ ಸುದ್ದಿ ಕುಟುಂಬ!
ಜತೆಜತೆಗೆ.. ಶಿಕ್ಷಣ, ಉದ್ಯೋಗ, ನೌಕರಿಗಾಗಿ ಹುಡುಕಾಟ, ತಂತ್ರಜ್ಞಾನದ ನವನವೀನ ಶಿಶುಗಳ ಪರಿಚಯ. ಅಭ್ಯುದಯದ ಹಾದಿಯಲ್ಲಿ ಏದುಸಿರು ಬಿಡುತ್ತಾ ಹೆಜ್ಜೆಹಾಕುತ್ತಿರುವ ನಮ್ಮ ಕರ್ನಾಟಕದ ಅನುಕ್ಷಣದ ನ್ಯೂಸ್ ರೀಲ್. ಸಾಮಾಜಿಕ ತಳಮಳಗಳ ಸೀಳುನೋಟಗಳನ್ನು ಓದುತ್ತ-ನೋಡುತ್ತ-ಕೇಳುತ್ತ ಇರುವುದಕ್ಕೆ ಅನುಪಮ ವೇದಿಕೆ ಸುವರ್ಣದ ಸುದ್ದಿಮೇಳ. ಇಷ್ಟು ಮತ್ತು ಇನ್ನಷ್ಟು ವಿಷಯ - ವಿಚಾರಗಳನ್ನು ತುಂಬಿಕೊಂಡ ತುಂಬಿದಕೊಡ ಸುವರ್ಣ ನ್ಯೂಸ್!