
ಇರಾನ್ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
ಇರಾನ್ ಭೂಮಿಯ 500 ಮೀಟರ್ ಆಳದಲ್ಲಿ ನಿಗೂಢ 'ಮಿಸೈಲ್ ಸಿಟಿ'ಗಳನ್ನು ನಿರ್ಮಿಸಿದೆ. ಈ ಅದೃಶ್ಯ ಕ್ಷಿಪಣಿ ನಗರಗಳು ಅಮೆರಿಕ ಮತ್ತು ಇಸ್ರೇಲ್‌ನಂತಹ ಬಲಿಷ್ಠ ರಾಷ್ಟ್ರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಯುದ್ಧದ ಆರ್ಥಿಕ ಹೊರೆಯನ್ನು ಹೆಚ್ಚಿಸಿವೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ಒಂದು ವಾರವೇ ಕಳೆದಿದೆ.. ಈ ವಾರದಲ್ಲಿ ವಾರ್ ತೀವ್ರತೆ ಎಷ್ಟಿದೆ ಅನ್ನೋದು ಅರ್ಥವಾಗ್ತಾ ಇದೆ.. ಸಾಮಾನ್ಯವಾಗಿ, ಅಮೆರಿಕಾ ಆರ್ಭಟಕ್ಕೆ ಇರಾನ್ ತಲೆ ಬಾಗುತ್ತೆ ಅಂದ್ಕೊಂಡಿದ್ರೂ.. ಹೂಹು.. ಹಿರಿತಲೆಯೇ ಉರುಳಿಬಿದ್ರೂ ಇರಾನ್ ಮಾತ್ರ ಅಲುಗಾಡ್ತಿಲ್ಲ.. ಈ ಕ್ಷಣಕ್ಕೂ ಅಮೆರಕಾ ವಿರುದ್ಧ ಅಬ್ಬರಿಸ್ತಲೇ ಇದೆ.. ಕದನ ವಿರಾಮಕ್ಕೂ ಒಪ್ಪದೆ ಮುನ್ನುಗ್ತಾ ಇದೆ.. ಇದಕ್ಕೆ ಕಾರಣವಾಗಿದ್ದು, ಏನು ಗೊತ್ತಾ? ಇರಾನಿನ, ಸುಮಾರು 500 ಮೀಟರ್ ಆಳದಲ್ಲಿರೋ ನಿಗೂಢ ನಗರ ಅಂದ್ರೆ ನಂಬ್ತೀರಾ? ಆದ್ರೆ ಅದೇ ನಿಜ.. ಆದ್ರೆ ಅಲ್ಲಿ ಇರೋದು ಜನರಲ್ಲ.. ಸಾವಿರಾರು ಮೃತ್ಯು ದೂತರು..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ