ನವದೆಹಲಿ: ತಮಿಳುನಾಡಿನ ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿನ ಸಂಪೂರ್ಣ ಸ್ವದೇಶಿ ನಿರ್ಮಿತ ಪ್ರೋಟೋಟೈಪ್ ಫಾಸ್ಟ್ ಬೀಡರ್ ರಿಯಾಕ್ಟರ್ (ಪಿಎಫ್ ಬಿಆರ್) ಇದೀಗ ನಿರ್ಣಾಯಕ ಹಂತ ತಲುಪಿದ್ದು, ಪರಮಾಣು ವಿದಳನ ಪ್ರಕ್ರಿಯೆ ಆರಂಭಿಸಿದೆ. ಇದನ್ನು ಪರಮಾಣು ವಿದ್ಯುತ್ ಉತ್ಪಾದನೆಯ ದೊಡ್ಡ ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ರಷ್ಯಾ ಬಳಿಕ ಈ ಸಾಧನೆ ಮಾಡಿದ 2ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇಂಧನ ದಹಿಸುತ್ತಲೇ ಇಂಧನ ಸೃಷ್ಟಿಸುವ ಘಟಕ ಇದಾಗಿದ್ದು, ಫಾಸ್ಟ್ ಬೀಡರ್ ಘಟಕ ಹೊಂದಿದ ವಿಶ್ವದ 2ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.ಯಾಕೆ ಮಹತ್ವ?ತ.ನಾಡಿನ ಕಲ್ಪಾಕಂ ಘಟಕ ಸಂಪೂರ್ಣ ಸ್ವದೇಶಿ ವಿನ್ಯಾಸ, ಮತ್ತು ಸ್ವದೇಶಿ ನಿರ್ಮಿತವಾಗಿದೆ.ಘಟಕದಲ್ಲಿ ಯುರೇನಿಯಂ ಬಳಕೆ ಬಳಿಕ ಲಭ್ಯವಾಗುವ ಪ್ಲುಟೋನಿಯಂ ಮರು ಬಳಕೆ ಮಾಡಲಾಗುತ್ತದೆ.ವಿದ್ಯುತ್ ಉತ್ಪತ್ತಿಗೆ ಕಡಿಮೆ ಯುರೇನಿಯಂ ಸಾಕಾಗುವುದು ಹಾಗೂ ತ್ಯಾಜ್ಯವೂ ಕಡಿಮೆಸದ್ಯ ರಿಯಾಕ್ಟರ್ನಲ್ಲಿ ಅಣು ವಿದಳನ ಕ್ರಿಯೆ ಸುಸ್ಥಿರ ಹಂತಕ್ಕೆ ತಲುಪಿದೆ. ಈ ಎಲ್ಲಾ ಕಾರಣಗಳಿಂದ ಇದು ಮಹತ್ವ ಪಡೆದಿದೆ.