
ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್, ಒಪ್ಪಲಿಲ್ಲ ಅಂದ್ರೆ ಡ್ರಗ್ಸ್..!
ಅವರ ಕೆಲಸವೇ ಚೆಂದದ ಹೆಣ್ಣುಮಕ್ಕಳನ್ನ ಇನ್ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು, ತಮ್ಮ ಮೇಲೆ ನಂಬಿಕೆ ಬರುವಂತೆ ಮಾಡೋದು. ನಂತರ ಆಫ್ಟರ್ ಪಾರ್ಟಿ ಅಂತ ಹೇಳಿಕೊಂಡು ಆ ಯುವತಿಯರನ್ನ ವಿಲ್ಲಾಗೆ ಕರೆದುಕೊಂಡು ಹೋಗಿ ಕುಡಿಯೋ ಜ್ಯೂಸ್ನಲ್ಲಿ ಡ್ರಗ್ಸ್ ಹಾಕಿ ರೇ*ಪ್ ಮಾಡೋದು
ಆಕೆಗೆ ಇನ್ನೂ 19 ವರ್ಷ. ದೂರದ ಊರಿಂದ ಬಂದು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೊದಲ ವರ್ಷದ ಡಿಗ್ರಿ ಓದುತ್ತಿದ್ದಳು. ಇನ್‌ಸ್ಟಾಗ್ರಾಂನಲ್ಲಿ ಹುಡುಗನ ಪರಿಚಯವಾಗಿ ಲವ್ನಲ್ಲಿ ಬಿದ್ದಿದ್ದಳು. ಆವತ್ತು ವ್ಯಾಲೆಂಟೈನ್ಸ್ ಡೇ. ಹುಡುಗ ಪಾರ್ಟಿ ಮಾಡೋಣ ಬಾ ಅಂತ ಕರೆದ. ಆಕೆ ಕೂಡ ಖುಷಿ ಖುಷಿಯಿಂದ ಆತ ಹೇಳಿದ್ದ ಜಾಗಕ್ಕೆ ಹೋದಳು. ಆದ್ರೆ ಅಲ್ಲಿ ಮತ್ತೊಬ್ಬನ ದರ್ಶನವಾಯ್ತು.
Add Asianetnews Kannada as a Preferred Source

ಎಲ್ಲರೂ ಸೇರಿ ಪಾರ್ಟಿ ಮಾಡಿದ್ರು. ಆದ್ರೆ ಪಾರ್ಟಿ ಮುಗಿಯುವ ಹೊತ್ತಿಗೆ ಆಕೆ ಮೊದಲಿನಂತಿರಲಿಲ್ಲ. ಆಕೆಗೆ ಅಲ್ಲಿ ಮೋಸವಾಗಿತ್ತು. ಆಕೆಯ ಮೇಲೆ ಗ್ಯಾಂಗ್ ರೇ*ಪ್ ಆಗಿತ್ತು. ತನ್ನ ಹುಡುಗನೇ ಆಕೆಗೆ ಮೋಸ ಮಾಡಿದ್ದ. ಆದ್ರೆ ಇದೊಂದು ಘಟನೆಯ ನಂತರವೇ ನೋಡಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮಾಂಸ ದಂಧೆ ಪ್ರಕರಣ ಹೊರಜಗತ್ತಿಗೆ ಗೊತ್ತಾಗಿದ್ದ. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಗ್ಯಾಂಗ್ ರೇ*ಪ್ ಪ್ರಕರಣದ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್