ರಸ್ತೆಯಲ್ಲಿ ಸಾಗುತ್ತಿದ್ದ ಲ್ಯಾಂಬೋರ್ಘಿನಿ ಕಾರನ್ನು ನೋಡಿ ಸ್ಕೂಟಿಯಲ್ಲಿದ್ದ ಬಾಲಕನೊಬ್ಬ ಆಸೆಪಟ್ಟಾಗ, ಉದ್ಯಮಿಯೊಬ್ಬರು ಅವನ ಆಸೆ ಪೂರೈಸಿದ್ದಾರೆ.ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಕನ ಲ್ಯಾಂಬೋರ್ಘಿನಿ ಪ್ರೀತಿ: ಆಸೆ ಈಡೇರಿಸಿದ ಉದ್ಯಮಿ

ಮಹಾನಗರಿಗಳ ರಸ್ತೆಗಳಲ್ಲಿ ಅಪರೂಪಕ್ಕೆ ಒಮ್ಮೆ ಎಂಬಂತೆ ಕಾಣಸಿಗುವ ಲ್ಯಾಂಬೋರ್ಘಿನಿ ಕಾರನ್ನು ನೋಡುವುದೇ ಒಂದು ಖುಷಿ ಈ ಐಷಾರಾಮಿ ಲ್ಯಾಂಬೋರ್ಘಿನಿ ಕಾರಿಗೆ ಫಿದಾ ಆಗದವರಿಲ್ಲ, ರಸ್ತೆಯಲ್ಲಿ ಚಲಿಸುವ ಈ ಕಾರನ್ನು ನೋಡಿ ಕೆಲವರು ಒಂದು ಫೋಟೋಗಾಗಿ ಕಾರನ್ನು ಹಿಂಬಾಲಿಸಿಕೊಂಡು ಹೋಗುವುದುಂಟು. ಈ ದುಬಾರಿ ಕಾರನ್ನು ಜನಸಾಮಾನ್ಯರು ಖರೀದಿಸುವುದು ಕನಸಿನ ಮಾತು. ಆದರೆ ಅನೇಕರು ಆ ಕಾರಿನಲ್ಲಿ ಒಮ್ಮೆಯಾದರು ಕುಳಿತು ಪ್ರಯಾಣಿಸಬೇಕು. ಫೋಟೋಕ್ಕೊಂದು ಪೋಸ್ ಕೊಡಬೇಕು ಎಂದೆಲ್ಲಾ ಆಸೆ ಪಡ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಕಾರಿನ ಬಗ್ಗೆ ಅನೇಕರಿಗೆ ಕ್ರೇಜ್ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ರೀತಿ ಇಲ್ಲೊಂದು ಕಡೆ ರಸ್ತೆಯಲ್ಲಿ ಸಾಗುತ್ತಿದ್ದ ಲ್ಯಾಂಬೋರ್ಘಿನಿ ನೋಡಿ ಅಮ್ಮನ ಹಿಂದೆ ಸ್ಕೂಟಿಯಲ್ಲಿ ಕುಳಿತು ಹೋಗುತ್ತಿದ್ದ ಬಾಲಕನಿಗೆ ಭಾರಿ ಆಸೆಯಾಗಿದೆ. ಸ್ಕೂಟಿ ಹಿಂದೆ ಕುಳಿತೇ ತಮ್ಮ ಪಕ್ಕದಲ್ಲೇ ಸಾಗುತ್ತಿದ್ದ ಲ್ಯಾಂಬೋರ್ಘಿನಿ ಕಾರನ್ನು ಬಾಲಕ ನೋಡುತ್ತಾ ಖುಷಿ ಪಟ್ಟಿದ್ದು, ಇದನ್ನು ಲ್ಯಾಂಬೋರ್ಘಿನಿ ಕಾರು ಚಾಲನೆ ಮಾಡುತ್ತಿದ್ದ ಉದ್ಯಮಿಯೂ ದೂರದಿಂದಲೇ ಗಮನಿಸುವುದರ ಜೊತೆಗೆ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಅದೇ ರೀತಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಬಾಲಕನ ಆಸಕ್ತಿಯನ್ನು ಗಮನಿಸಿ ಅವರನ್ನು ಮಾತನಾಡಿಸಿದ್ದಾರೆ.

ಆ ಬಾಲಕ ಫೋಟೋಗಾಗಿ ತಾಯಿಯ ಬಳಿಯೂ ಗಾಡಿ ನಿಲ್ಲಿಸುವಂತೆ ಕೇಳಿದ್ದು, ಮಗನ ಆಸೆ ನೋಡಿ ತಾಯಿಯೂ ತಮ್ಮ ಸ್ಕೂಟಿಯನ್ನು ಅಡ್ಡ ಹಾಕಿದ್ದಾರೆ. ಇತ್ತ ಲ್ಯಾಂಬೋರ್ಘಿನಿ ಚಲಾಯಿಸುತ್ತಿದ್ದ ಉದ್ಯಮಿಯೂ ಆ ಬಾಲಕನನ್ನು ಮಾತನಾಡಿಸಿ ಲ್ಯಾಂಬೋರ್ಘಿನಿ ಕಾರಲೊಂದು ರೈಡ್ ಬೇಕಾ ಎಂದು ಕೇಳಿದ್ದಾರೆ. ಆದರೆ ಆ ಬಾಲಕ ರೈಡ್ ಬೇಡ ಕೇವಲ ಕಾರಿನಲ್ಲಿ ಕುಳಿತು ಒಂದು ಫೋಟೋ ಬೇಕು ಎಂದು ಹೇಳಿದ್ದಾನೆ. ಅದರಂತೆ ಆ ಉದ್ಯಮಿ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಕಾರಿನಲ್ಲಿ ಕುಳಿತು ಫೋಟೋಗೆ ಪೋಸ್‌ ಕೊಡಲು ಅವಕಾಶ ನೀಡಿದ್ದಾರೆ. ಇತ್ತ ಸ್ಕೂಟಿ ರಸ್ತೆ ಪಕ್ಕ ನಿಲ್ಲಿಸಿದ ತಾಯಿ ಮಗನಿಗಾಗಿ ಒಂದು ಫೋಟೋ ತೆಗೆದುಕೊಳ್ಳುವುದಾಗಿ ಆ ಉದ್ಯಮಿ ಬಳಿ ಕೇಳುವುದನ್ನು ವೀಡಿಯೋದಲ್ಲಿ ನೋಡಬಹುದು. ಈ ವೇಳೆ ಉದ್ಯಮಿ ಬಾಲಕನಿಗೆ ರೈಡ್ ಬೇಕಾ ಅಂತ ಕೇಳಿದಾಗ ಬೇಡ ಒಂದು ಫೋಟೋ ಸಾಕು ಎಂದು ಹೇಳುವುದನ್ನು ಕೇಳಬಹುದು.

ಇದನ್ನೂ ಓದಿ: 13 ವರ್ಷಗಳ ಯಾತನೆಗೆ ಮುಕ್ತಿ: ಇದೇ ಮೊದಲ ಬಾರಿ ದಯಾಮರಣಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್‌

ಅಂದಹಾಗೆ ಈ ವೀಡಿಯೋವನ್ನು ಸೆರಾಮಿಕ್ ಪ್ರೊ ಇಂಡಿಯಾದ ಸ್ಥಾಪಕ ನಿಶಾಂತ್ ಸಾಬು(Nishant Saboo) ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕರು ಬಾಲಕನಿಗರ ಒಂದು ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಿದ್ದಕ್ಕೆ ಅವರಿಗೆ ಧನ್ಯವಾದ ಹೇಳಿದ್ದಾರೆ. ನಿಮ್ಮದು ಚಿನ್ನದಂತೆ ಹೃದಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಲಕ್ಸುರಿ ಕಾರನ್ನು ಹೊಂದಿರುತ್ತಾರೆ. ಆದರೆ ಎಲ್ಲರೂ ಹೀಗೆ ಬೇರೆಯವರ ಬಗ್ಗೆ ಯೋಚಿಸಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವೊಬ್ಬರು ಒಳ್ಳೆಯ ವ್ಯಕ್ತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ...

ಇದನ್ನೂ ಓದಿ: ಅಯ್ಯೋ ವಿಧಿಯೇ ಅಮ್ಮನಿಗೆ ಜೀವ ನೀಡಿ ಉಸಿರು ಚೆಲ್ಲಿದ ಮಗ ಲಿವರ್ ದಾನದ ಬಳಿಕ ಮಗ ಸಾವು ಬದುಕುಳಿದ ತಾಯಿ

View post on Instagram