ಕನ್ನಡ ನಟಿ ಹಾಗೂ ಗಾಯಕಿ ಅದಿತಿ ಸಾಗರ್ ‘ಹೆಗ್ಗಣ ಮುದ್ದು’ ಡ್ರಾಮಾ ಥ್ರಿಲ್ಲರ್ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ನಟನೆ, ಸಂಗೀತ, ಚಿತ್ರಕಲೆ, ವಿಭಿನ್ನ ಪಾತ್ರಗಳ ಆಸೆ ಹಾಗೂ ಸಿನಿಮಾಗಳಲ್ಲಿನ ಮಹಿಳಾ ಪಾತ್ರಗಳ ಬಗ್ಗೆ ಅದಿತಿ ಸಾಗರ್ ಮನದ ಮಾತು ಹಂಚಿಕೊಂಡಿದ್ದಾರೆ.
‘ಕಾಮನ್ ಮ್ಯಾನ್’ ಸಿನಿಮಾದಲ್ಲಿ ವಕೀಲನಿಂದ ಮುಖ್ಯಮಂತ್ರಿಯಾಗುವ ಪಾತ್ರದಲ್ಲಿ ನಟಿಸಿರುವ ಗೌರಿಶಂಕರ್, ಸಿನಿಮಾ ಮೇಲಿನ ನಿರೀಕ್ಷೆ, ‘ಕೆರೆಬೇಟೆ’ ಬಳಿಕದ ಪಯಣ, ಕಮರ್ಷಿಯಲ್ ಸಕ್ಸಸ್ ಹಾಗೂ ಎರಡು ದಶಕಗಳ ಚಿತ್ರರಂಗದ ಹೋರಾಟದ ಬಗ್ಗೆ ಮಾತನಾಡಿದ್ದಾರೆ.
‘ಟಾಸ್’ ಕನ್ನಡ ಸಿನಿಮಾದ ಕಥೆ, ಅಪ್ಪ-ಮಗನ ಬಾಂಧವ್ಯ, ರಂಗಭೂಮಿ ಹಿನ್ನೆಲೆ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೆಂಬಲದ ಬಗ್ಗೆ ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್ ಮಾತನಾಡಿದ್ದಾರೆ. ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವ ವಿಶ್ವಾಸವನ್ನೂ ಹಂಚಿಕೊಂಡಿದ್ದಾರೆ.
‘ಸಿಟಿ ಲೈಟ್ಸ್’ ಸಿನಿಮಾದ ಕಥೆ, ರಿಯಲ್ ಘಟನೆ, ವಿನಯ್ ರಾಜ್ಕುಮಾರ್-ಮೋನಿಷಾ ಜೋಡಿ ಹಾಗೂ ಮಗಳ ನಟನೆ ಬಗ್ಗೆ ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ಸಿನಿಮಾ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.
ವಿನಯ್ ರಾಜ್ಕುಮಾರ್ ಮತ್ತು ಮೋನಿಷಾ ವಿಜಯ್ ಕುಮಾರ್ ಅಭಿನಯದ ‘ಸಿಟಿ ಲೈಟ್ಸ್’ ಸಿನಿಮಾ ಬೆಂಗಳೂರಿನ ಮತ್ತೊಂದು ಮುಖವನ್ನು ತೆರೆದಿಡಲಿದೆ. ಸಿನಿಮಾ ಕುರಿತು ಇಬ್ಬರೂ ಹಂಚಿಕೊಂಡ ಅನುಭವ ಇಲ್ಲಿದೆ.
‘ಅಮೆರಿಕಾ ಅಮೆರಿಕಾ 2’ ಸಿನಿಮಾ 1997ರ ‘ಅಮೆರಿಕಾ ಅಮೆರಿಕಾ’ ಚಿತ್ರದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿದ್ದಲ್ಲ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ವಿದೇಶದ ಬದುಕಿನ ಕುರಿತು ಅವರು ಮಾತನಾಡಿದ್ದಾರೆ.
‘ಅಮೆರಿಕಾ ಅಮೆರಿಕಾ 2’ ಕುರಿತು ಪೃಥ್ವಿ ಅಂಬಾರ್ ಮಾತು: ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಜೊತೆಗಿನ ಕೆಮಿಸ್ಟ್ರಿ, ಪ್ರೇಕ್ಷಕರನ್ನು ಸಿನಿಮಾ ಇಷ್ಟಪಡುವಂತೆ ಲಾಬಿ ಮಾಡಲು ಸಾಧ್ಯವಿಲ್ಲ ಎನ್ನುವ ತಮ್ಮ ನಂಬಿಕೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡ ನಟ.
‘ಅಮೆರಿಕಾ ಅಮೆರಿಕಾ 2’ ಬಿಡುಗಡೆಗೂ ಮುನ್ನ ನಟ ನಿರೂಪ್ ಭಂಡಾರಿ ಮಾತು: ‘ರಂಗಿತರಂಗ’ದ ದಿನಗಳಿಂದ ಇಂದಿನ ಆಧುನಿಕ ಪ್ರೇಮ ಸಂಬಂಧಗಳವರೆಗೆ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ನಟ.
ನಟಿ ಶ್ರುತಿ ಹರಿಹರನ್ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.
ನಟಿ ಶಾನ್ವಿ ಶ್ರೀವಾಸ್ತವ ತಮ್ಮ ಹತ್ತು ವರ್ಷಗಳ ಸಿನಿ ಪಯಣ, ಸಿನಿಮಾ ಆಯ್ಕೆ ಮತ್ತು ‘ಅಮೆರಿಕಾ ಅಮೆರಿಕಾ 2’ ಚಿತ್ರದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.
Get exclusive celebrity interviews (ವಿಶೇಷ ತಾರಾ ಸಂದರ್ಶನಗಳು) on Asianet Suvarna News. In-depth conversations revealing insights about your favorite stars. ನಿಮ್ಮ ನೆಚ್ಚಿನ ತಾರೆಯರ ಜೀವನ, ವೃತ್ತಿ ಮತ್ತು ಅಭಿಪ್ರಾಯಗಳ ಕುರಿತಾದ ಆಳವಾದ ಮತ್ತು ವಿಶೇಷ ಸಂದರ್ಶನಗಳು.