ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!

ಹಣವಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಜೋಡಿ  ಪೊಲೀಸರ ಬಲೆಗೆ ಬಿದ್ದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಸಂಪರ್ಕಿಸಿ, ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ ಈ ಕಿರಾತಕರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

Share this Video
  • FB
  • Linkdin
  • Whatsapp

ಅವರಿಬ್ಬರು ಚಾಲಾಕಿಗಳು.. ಅವನು ಹೆಂಡತಿಯನ್ನ ಬಿಟ್ಟಿದ್ರೆ ಈಕೆ ಗಂಡನನ್ನ ಬಿಟ್ಟು ಬಂದಿದ್ದಳು.. ಇಬ್ಬರೂ ಅದೊಂದು ಮನೆಹಾಳ್​ ಕೆಲಸಕ್ಕಾಗಿ ಒಂದಾಗಿದ್ರು.. ಫಿನಾನ್ಸ್​​ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಆತ ದುಡ್ಡಿರೋ ಕುಳಗಳ ಕಾಂಟ್ಯಾಕ್ಟ್​​​ ಪಡೆದು ಗೆಳತಿಗೆ ಕೊಡ್ತಿದ್ದ. ಇನ್ನೂ ಆಕೆ ಆ ಸೌಂಡ್​​ ಪಾರ್ಟಿಗಳಿಗೆ ಸೋಷಿಯಲ್​ ಮೀಡಿಯಾದಲ್ಲಿ ಮೆಸೆಜ್​ ಮಾಡಿ ಹತ್ತಿರವಾಗ್ತಿದ್ದಳು. ನಂತರ ಕ್ಲೋಸ್​​ ಆಗಿ ಮೂವ್​ ಮಾಡಿ ಹೋಟೆಲ್​ ರೂಮ್​ಗೆ ಕರೆಯುತ್ತಿದ್ದಾಳೆ.. ಈಕೆಯ ಚೆಂದದ ಮಾತನ್ನ ಕೇಳಿ ಸಿರಿವಂತರು ಹೋಟೆಲ್​ ರೂಮ್​ಗೆ ಹೋದ್ರೆ ಮುಗೀತು.. ಆತನನ್ನ ಬರ್ಬಾತ್​ ಮಾಡಿಬಿಟ್ಟಿಡ್ತಿದ್ರು.. ಆದ್ರೆ ಎಲ್ಲದಕ್ಕೂ ಒಂದು ಎಂಡ್​​ ಅಂತ ಇರಬೇಕಲ್ವಾ.. ಇವತ್ತು ಕಿಲಾಡಿ ಜೋಡಿ ತಗ್ಲಾಕಿಕೊಂಡಿದೆ.. ಆದ್ರೆ ತಗ್ಲಾಕಿಕೊಂಡ ರೀತಿ ಮಾತ್ರ ರೋಚಕ.. ಹೀಗೆ ಉದ್ಯಮಿಗಳನ್ನೇ ಟಾರ್ಗೆಟ್​​ ಮಾಡಿಕೊಂಡು ಹನಿಟ್ರ್ಯಾಪ್​​ ಮಾಡ್ತಿದ್ದ ಆಂಟಿಯ ಕಥೆಯೇ ಇವತ್ತಿನ ಎಫ್​.ಐ.ಆರ್​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದ್ರೆ ಇಂಥದ್ದೇ ಮತ್ತೊಂದು ಗ್ಯಾಂಗ್​​ ಇದೇ ಬೆಳಗಾವಿಯ ಮಹಿಳಾ ಅಧಿಕಾರಿಯೊಬ್ಬರನ್ನ ಟ್ರಾಪ್​ ಮಾಡಿತ್ತು.. ದೀಪಾ ಅನ್ನೋ ಐನಾತಿ ಹೆಣ್ಣು ಮಗಳು ಶ್ರೀಮಂತರನ್ನ ಟ್ರಾಪ್​ ಮಾಡಿ ಲಕ್ಷ ಲಕ್ಷ ಹಣ ಪೀಕುತ್ತಿದ್ದಳು.. ಆದ್ರೆ ಈಕೆ ಪೊಲೀಸರ ಕೈಗೆ ತಗ್ಲಾಕಿಕೊಳ್ಳೋದಕ್ಕೆ ಕಾರಣವಾಗಿದ್ದು 20 ದಿನಗಳ ಹಿಂದೆ ಇದೇ ಬೆಳಗಾವಿಯಲ್ಲಿ ನಡೆದಿದ್ದ ಅದೊಂದು ಘಟನೆ.. ಹೌದು, ಕೆಲ ದಿನಗಳ ಹಿಂದೆ ಕೆಲವರು ಮಹಿಳಾ ಅಧಿಕಾರಿಯ ಮನೆಗೆ ನುಗ್ಗಿ ಯಾರೂ ಇಲ್ಲದಿದ್ದಾಗ ರೂಮಿನಲ್ಲಿ ಕ್ಯಾಮರಾ ಇಟ್ಟು, ಬೆಡ್​ ರೂಮ್​​​​​​​​ ಸೀನ್​​​​​​​​​​​​​ ಕ್ಯಾಪ್ಚರ್​​ ಮಾಡಿದ್ರು.. ನಂತರ ಖಾಸಗಿ ವಿಡಿಯೋಗಳನ್ನ ಇಟ್ಟುಕೊಂಡು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು.. ಆದ್ರೆ ಆ ದಿಟ್ಟ ಹೆಣ್ಣುಮಗಳು ಪೊಲೀಸರಿಗೆ ಮಾಹಿತಿ ನೀಡಿದ್ರು.. ಆವತ್ತು ಪೊಲೀಸರು ಆ ಕಿರಾತಕರ ಜನ್ಮ ಜಾಲಾಡಿದ್ರು.. 

ಇದಕ್ಕೇ ಅಲ್ವಾ ಹೆಳೋದು.. ಈ ಕಲಿಯುಗದಲ್ಲಿ ಯಾರನ್ನೂ ನಂಬಬಾರದು ಅಂತ.. ಆದ್ರೆ ತಪ್ಪು ಮಾಡಿದವರು ಒಂದಿಲ್ಲೊಂದು ದಿನ ತಗ್ಲಾಕಿಕೊಳ್ಳಲೇಬೇಕು ಅನ್ನೋದಕ್ಕೆ ಇವತ್ತಿನ ಎರಡು ಸ್ಟೋರಿಗಳೇ ಸಾಕ್ಷಿ 

Related Video