ಯಾವಾಗ ನಟ ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರಿದ್ರೋ ಆಗಿನಿಂದಲೂ ದರ್ಶನ್​​ ವಿರುದ್ದ ಗಟ್ಟಿಧ್ವನಿಯಲ್ಲಿ ರಮ್ಯಾ ಮಾತನಾಡ್ತಾ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಟ್ಟ ಕಾಮೆಂಟ್ ಮಾಡಿದ ಫ್ಯಾನ್ಸ್​ಗೂ ಬುದ್ದಿ ಕಲಿಸ್ತಾ ಇದ್ದಾರೆ. ಈಗ ಕೆಡಿ ಫ್ಯಾನ್ಸ್ ಕಂಗಾಲಾಗಿ ಹೋಗಿದ್ದಾರೆ. ಕೋರ್ಟ್ ಕಟಕಟೆವರೆಗೂ ಬಂದು ಈ ಕೆಡಿಗಳಿಗೆ ಶಿಕ್ಷೆ ಕೊಡಿಸೇ ಕೊಡಿಸ್ತಿನಿ ಅಂದಿದ್ದಾರೆ ರಮ್ಯಾ.

ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ (Ramya), ತನಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ದರ್ಶನ್ ಫ್ಯಾನ್ಸ್​ ವಿರುದ್ದ ಸಮರ ಸಾರಿದ್ದು ಗೊತ್ತೇ ಇದೆ. ಮಂಗಳವಾರ ಈ ಕೇಸ್​​ನ ವಿಚಾರಣೆ ಕೋರ್ಟ್ ಅಂಗಳದಲ್ಲಿ ನಡೆದಿದ್ದು, ರಮ್ಯಾ ಕೋರ್ಟ್ ಕಟಕಟೆಗೆ ಬಂದು ಸಾಕ್ಷಿ ಹೇಳಿದ್ದಾರೆ. ಅಶ್ಲೀಲ ಕಾಮೆಂಟ್ ಮಾಡಿದ ಕೆಡಿ ಫ್ಯಾನ್ಸ್​ಗೆ ಶಿಕ್ಷೆ ಕೊಡಿಸದೇ ಬಿಡೋದಿಲ್ಲ ಅಂತ ಅಬ್ಬರಿಸಿದ್ದಾರೆ.

ಕೋರ್ಟ್ ಕಟಕಟೆಗೆ ಬಂದ ಸ್ಯಾಂಡಲ್​ವುಡ್​ಕ್ವೀನ್; ಕೆಡಿ ಫ್ಯಾನ್ಸ್​ಗೆ ಶಿಕ್ಷೆ ಕೊಡಿಸದೇ ಬಿಡಲ್ಲ.. ರಮ್ಯಾ ರಾಂಗ್

ಯೆಸ್ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ನಡುವೆ ನಡೆದ ಜಟಾಪಟಿ ವಿಷ್ಯ ಗೊತ್ತೇ ಇದೆ. ದರ್ಶನ್​ ಬೇಲ್ ರದ್ದಾಗಿದ್ದಕ್ಕೆ , ರೇಣುಕಾಸ್ವಾಮಿ ಫ್ಯಾಮಿಲಿಗೆ ನ್ಯಾಯ ಸಿಕ್ಕಿದೆ ಅಂತ ರಮ್ಯಾ ಪೋಸ್ಟ್ ಹಾಕಿದ್ರು. ಅದಕ್ಕೆ ರಾಂಗ್ ಆದ ದರ್ಶನ್ ಫ್ಯಾನ್ಸ್ ತಮ್ಮ ಎಂದಿನ ಸ್ಟೈಲ್ ನಲ್ಲಿ ಡ್ಯಾಶ್ ಡ್ಯಾಶ್ ಅಂತ ರಮ್ಯಾನ ನಿಂದಿಸೋಕೆ ಶುರುಮಾಡಿದ್ರು.

ಅದ್ರಲ್ಲೂ ಕೆಲವು ಕೆಡಿ ಫ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ರಾಜಾರೋಷವಾಗಿ ನಿನ್ನನ್ನ ಅ*ತ್ಯಾಚಾರ ಮಾಡ್ತಿವಿ ಅಂತ ಬೆದರಿಕೆ ಹಾಕಿದ್ರು. ಇದನ್ನ ನೋಡಿ ಕೆಂಡಾಮಂಡಲ ಆಗಿದ್ದ ರಮ್ಯಾ ಸೀದಾ ಕಮೀಷನರ್ ಆಫೀಸ್​ಗೆ ತೆರಳಿ ಆ ಪುಂಡರ ವಿರುದ್ದ ದೂರು ಸಲ್ಲಿಸಿದ್ರು. ಆ ಕಾಮೆಂಟ್ ವೀರರನ್ನ ಹುಡುಕಿಕೊಂಡು ಬಂದು ಜೈಲಿಗೆ ಅಟ್ಟಲಾಗಿತ್ತು. ಇದೀಗ ಈ ಕೇಸ್​​ನ ವಿಚಾರಣೆ ಆರಂಭಗೊಂಡಿದೆ.

46ನೇ ಸೆಷೆನ್ಸ್ ಕೋರ್ಟ್​​ನಲ್ಲಿ ರಮ್ಯಾ Vs ಕೆಡಿ ಫ್ಯಾನ್ಸ್ ಕೇಸ್

ಹೌದು, ಮಂಗಳವಾರದಿಂದ 46ನೇ ಸೆಷೆನ್ಸ್ ಕೋರ್ಟ್​​ನಲ್ಲಿ ರಮ್ಯಾ Vs ಕೆಡಿ ಫ್ಯಾನ್ಸ್ ಕೇಸ್ ಹಿಯರಿಂಗ್ ಶುರುವಾಗಿದೆ. ಈ ಕೇಸ್​ನಲ್ಲಿ 12ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ ಆಧರಿಸಿ ಆರೋಪಿಗಳ ವಿರುದ್ಧ ಕೋರ್ಟ್ ಚಾರ್ಜ್ ಫ್ರೇಮ್ ಮಾಡಿದೆ.

ಕೋರ್ಟ್ ಮುಂದೆ ಎಲ್ಲಾ ಅರೋಪಿಗಳು ಹಾಜರಾದ್ರೆ, ರಮ್ಯಾ ಕೂಡ ಕೋರ್ಟ್ ಕಟಕಟೆಗೆ ಬಂದು ನಡೆದಿದ್ದನ್ನ ನ್ಯಾಯಮೂರ್ತಿಗಳ ಎದುರು ವಿವರಿಸಿದ್ದಾರೆ. ವೃತ್ತಿ ಜೀವನ ಮತ್ತು ರಾಜಕೀಯ ಜೀವನದ ಬಗ್ಗೆ ರಮ್ಯಾ ಹೇಳಿದ್ದು, ಇನ್ಸ್ಟಾಗ್ರಾಂ ಅಕೌಂಟ್ ಬಗ್ಗೆಯೂ ಕೋರ್ಟ್​ನಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಆರೋಪಿಗಳು ಇನ್ಸ್ಟಾಗ್ರಾಂ ಮೂಲಕ ಕಳುಹಿಸಿದ್ದ ಸಂದೇಶದ ಬಗ್ಗೆಯೂ ರಮ್ಯಾ ಮಾಹಿತಿ ನೀಡಿದ್ದಾರೆ.

ರೇ*ಪ್ ಬೆದರಿಕೆ.. ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ..!

ಹೌದು ಈ ಕೇಸ್​ನಲ್ಲಿ ಅ*ತ್ಯಾಚಾರ ಬೆದರಿಕೆ ಬಂದಿದ್ದರಿಂದ ಇದನ್ನ ಸೂಕ್ಷ್ಮ ಪ್ರಕರಣ ಅಂತ ಪರಿಗಣಿಸಲಾಗಿದೆ. ಸೋ ಮುಚ್ಚಿದ ಕೊಠಡಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ಖುದ್ದು ರಮ್ಯಾ ಈ ಬಗ್ಗೆ ಮಾತನಾಡಿದ್ದಾರೆ.

ದಾಸನ ವಿರುದ್ದ ಅಲ್ಲ.. ಇದು ಹೆಣ್ಣಮಕ್ಕಳ ಪರ ಹೋರಾಟ..!

ಹೌದು ಅವರನ್ನ ನೋಡಿದ್ರೆ ಪಾಪ ಅನ್ನಿಸುತ್ತೆ. ಆದ್ರೆ ಅವರನ್ನ ಸುಮ್ಮನೆ ಬಿಡಲ್ಲ ಯಾಕಂದ್ರೆ ಇದು ದರ್ಶನ್ ಫ್ಯಾನ್ಸ್ ವಿರುದ್ದ ಹೋರಾಟ ಅಲ್ಲ. ಹೆಣ್ಣುಮಕ್ಕಳನ್ನ ನಿಂದಿಸುವವರ ವಿರುದ್ದದ ಹೋರಾಟ ಅಂದಿದ್ದಾರೆ ರಮ್ಯಾ

ಅಸಲಿಗೆ ರಮ್ಯಾ ದರ್ಶನ್ ಜೊತೆಗೆ ಒಂದು ಕಾಲದಲ್ಲಿ ಚೆನ್ನಾಗೆ ಇದ್ರು. ವಿಜಯಲಕ್ಷ್ಮೀ ಜೊತೆಗೂ ಗೆಳೆತನ ಇತ್ತು. ದಾಸನ ಜೊತೆಗೆ ದತ್ತ ಅನ್ನೋ ಸಿನಿಮಾ ಕೂಡ ಮಾಡಿದ್ರು.

ಆದ್ರೆ ಯಾವಾಗ ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರಿದ್ರೋ ಆಗಿನಿಂದಲೂ ದರ್ಶನ್​​ ವಿರುದ್ದ ಗಟ್ಟಿಧ್ವನಿಯಲ್ಲಿ ರಮ್ಯಾ ಮಾತನಾಡ್ತಾ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಟ್ಟ ಕಾಮೆಂಟ್ ಮಾಡಿದ ಫ್ಯಾನ್ಸ್​ಗೂ ಬುದ್ದಿ ಕಲಿಸ್ತಾ ಇದ್ದಾರೆ.

ಒಟ್ಟಾರೆ ಪದ್ಮಾವತಿ ಪಂಚ್ ಗೆ ಕೆಡಿ ಫ್ಯಾನ್ಸ್ ಕಂಗಾಲಾಗಿ ಹೋಗಿದ್ದಾರೆ. ಕೋರ್ಟ್ ಕಟಕಟೆವರೆಗೂ ಬಂದು ಈ ಕೆಡಿಗಳಿಗೆ ಶಿಕ್ಷೆ ಕೊಡಿಸೇ ಕೊಡಿಸ್ತಿನಿ ಅಂತ ಅಬ್ಬರಿಸ್ತಾ ಇದ್ದಾರೆ ಲೇಡಿ ಟೈಗರ್ ರಮ್ಯಾ.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..