ಮಹಿಳಾ ಆಟೋ ಡ್ರೈವರ್ಸ್ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಸ್ಟಾರ್ ಸುವರ್ಣ ವಾಹಿನಿ!
Star Suvarna Channel: 'ಸ್ಟಾರ್ ಸುವರ್ಣ' ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಸುವರ್ಣ ಸಖಿ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು..

ಸಾಧನೆಯ ಶಿಖರವನ್ನು ಮುಟ್ಟುತ್ತಿರುವ ನಾರಿ
ಮಹಿಳೆ ಎಂದರೆ ಕೇವಲ ಒಂದು ಶಬ್ದವಲ್ಲ, ಅದು ಶಕ್ತಿ, ಪ್ರೀತಿ, ತಾಳ್ಮೆ, ತ್ಯಾಗದ ಪ್ರತೀಕ. ಆಧುನಿಕ ಸಮಾಜದಲ್ಲಿರುವ ಕಟ್ಟುಪಾಡುಗಳನ್ನು ಕೂಡ ಮೀರಿ ಪ್ರತಿ ಕ್ಷೇತ್ರದಲ್ಲಿಯೂ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ.
ಈಗ ಹುಡುಗೀರು ಆಟೋ ಓಡಿಸ್ತಾರೆ
ಮೊದಲೆಲ್ಲ ಪುರುಷರೇ ಆಟೋ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ತಾನು ಕೂಡ ಯಾವುದಕ್ಕೂ ಕಮ್ಮಿಯಿಲ್ಲ ಎಂದಿ ಮಹಿಳಾ ಆಟೋ ಮಣಿಯರು ರಸ್ತೆಗೆ ಕಾಲಿಟ್ಟಿದ್ದಾರೆ.
ಸವಾಲು ಮೆಟ್ಟಿ ನಿಂತರು!
ಇದೆಲ್ಲದರ ಜೊತೆ ತಮ್ಮ ಕಷ್ಟ, ನೋವು, ಕುಟುಂಬ ಎಲ್ಲವನ್ನು ಬದಿಗಿಟ್ಟು, ಸಮಾಜದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಿದ್ದಾರೆ.
ಕಿಟ್ ನೀಡಿದ ವಾಹಿನಿ
ಬೆಂಗಳೂರಿನ ಒಂದಷ್ಟು ಮಹಿಳಾ ಆಟೋ ಚಾಲಕಿಯರಿಗೆ ಸ್ಟಾರ್ ಸುವರ್ಣ ವಾಹಿನಿಯು ಗೌರವಿಸಿ, ಕಿಟ್ ನೀಡುವುದರೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಬೀತು ಪಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

