MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕೇಂದ್ರ ಸರ್ಕಾರದಿಂದ ವಾಹನ ಮಾಲೀಕರಿಗೆ ಗುಡ್‌ನ್ಯೂಸ್, ವಾಹನ ಸಾಲ ತೀರಿದ ಕೂಡಲೇ ಹೈಪೊಥಿಕೇಷನ್ ಸ್ವಯಂ ರದ್ದು

ಕೇಂದ್ರ ಸರ್ಕಾರದಿಂದ ವಾಹನ ಮಾಲೀಕರಿಗೆ ಗುಡ್‌ನ್ಯೂಸ್, ವಾಹನ ಸಾಲ ತೀರಿದ ಕೂಡಲೇ ಹೈಪೊಥಿಕೇಷನ್ ಸ್ವಯಂ ರದ್ದು

 ವಾಹನ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ನಂತರ ಆರ್‌ಸಿ ಬ್ಯಾಂಕ್‌ನ ಹೆಸರನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.  ಇದರಿಂದಾಗಿ, ವಾಹನ ಮಾಲೀಕರು ಇನ್ನು ಮುಂದೆ ಹೈಪೊಥಿಕೇಷನ್ ರದ್ದುಗೊಳಿಸಲು ಬ್ಯಾಂಕ್ ಮತ್ತು ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

2 Min read
Author : Gowthami K
Published : Mar 05 2026, 05:30 PM IST
Share this Photo Gallery
  • FB
  • TW
  • Linkdin
  • Whatsapp
16
ಸಾಲವನ್ನು ಸಂಪೂರ್ಣವಾಗಿ ತೀರಿಸಿದ ಕೂಡಲೇ ಸ್ವಯಂಚಾಲಿತವಾಗಿ ರದ್ದು
Image Credit : State Bank of India/FB

ಸಾಲವನ್ನು ಸಂಪೂರ್ಣವಾಗಿ ತೀರಿಸಿದ ಕೂಡಲೇ ಸ್ವಯಂಚಾಲಿತವಾಗಿ ರದ್ದು

ನವದೆಹಲಿ: ವಾಹನ ಖರೀದಿಸಲು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ಕೂಡಲೇ, ವಾಹನದ ನೋಂದಣಿ ಪ್ರಮಾಣಪತ್ರ (ಆರ್‌ಸಿ)ಯಲ್ಲಿ ನಮೂದಾಗಿರುವ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಹೆಸರು ಸ್ವಯಂಚಾಲಿತವಾಗಿ ರದ್ದು ಆಗುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಿಂದ ಸಾಲ ತೀರಿಸಿದ ಬಳಿಕ ಬ್ಯಾಂಕ್‌ನ ಹೆಸರು ಆರ್‌ಸಿಯಿಂದ ತೆಗೆದುಹಾಕಿಸಲು ಪದೇಪದೆ ಬ್ಯಾಂಕ್ ಹಾಗೂ ಆರ್‌ಟಿಒ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿದ್ದ ವಾಹನ ಮಾಲೀಕರ ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ ದೊರೆಯಲಿದೆ. ಈ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಚಯಿಸಿದ್ದು, ಇದು ಮಾರ್ಚ್‌ 1ರಿಂದಲೇ ಜಾರಿಗೆ ಬಂದಿದೆ. ಪ್ರಾರಂಭಿಕ ಹಂತದಲ್ಲಿ ಕೆಲವು ಆಯ್ದ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಕೂಡ ಈ ವ್ಯವಸ್ಥೆಗೆ ಸೇರ್ಪಡೆಯಾಗಲಿವೆ.

26
ಏನು ಹೈಪೊಥಿಕೇಷನ್?
Image Credit : Google

ಏನು ಹೈಪೊಥಿಕೇಷನ್?

ವಾಹನ ಖರೀದಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವ ಸಂದರ್ಭದಲ್ಲಿ ಆ ವಾಹನವನ್ನು ಬ್ಯಾಂಕ್‌ಗೆ ಅಡಮಾನವಾಗಿ ಇಡಲಾಗುತ್ತದೆ. ಈ ಕಾನೂನು ಪ್ರಕ್ರಿಯೆಯನ್ನೇ ಹೈಪೊಥಿಕೇಷನ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ವಾಹನದ ಆರ್‌ಸಿ ದಾಖಲೆಯಲ್ಲಿ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಹೆಸರು ಕೂಡ ಸೇರಿಸಲಾಗುತ್ತದೆ. ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ ನಂತರ, ಆರ್‌ಸಿಯಿಂದ ಬ್ಯಾಂಕ್‌ನ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯಬೇಕು. ಇದಕ್ಕಾಗಿ ವಾಹನ ಮಾಲೀಕರು ಬ್ಯಾಂಕ್‌ನಿಂದ ಆಕ್ಷೇಪಣೆಯಿಲ್ಲದ ಪ್ರಮಾಣಪತ್ರ (ಎನ್‌ಒಸಿ) ಪಡೆದು, ಅದನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಿ ಹೈಪೊಥಿಕೇಷನ್ ರದ್ದು ಮಾಡಿಸಬೇಕಾಗುತ್ತಿತ್ತು. ಈ ಪ್ರಕ್ರಿಯೆ ಬಹಳ ಸಮಯ ತೆಗೆದುಕೊಳ್ಳುವುದರ ಜೊತೆಗೆ ಅನಗತ್ಯ ಓಡಾಟಕ್ಕೂ ಕಾರಣವಾಗುತ್ತಿತ್ತು.

Related Articles

Related image1
ಐದು ವರ್ಷ ಬಳಿಕ ಬಡ್ಡಿ ಶೇ.0.5 ಕಡಿತ, ಗೃಹ, ವಾಹನ ಸಾಲ ಅಗ್ಗ!
Related image2
ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್​: FD ಇಡುವವರಿಗೆ ಬ್ಯಾಡ್​ ನ್ಯೂಸ್​: ಇಲ್ಲಿದೆ ಡಿಟೇಲ್ಸ್​...
36
ಆನ್‌ಲೈನ್ ಮೂಲಕ ಸ್ವಯಂ ರದ್ದು
Image Credit : Esaar India

ಆನ್‌ಲೈನ್ ಮೂಲಕ ಸ್ವಯಂ ರದ್ದು

ಈ ತೊಂದರೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸಾಲ ತೀರಿದ ಮಾಹಿತಿಯನ್ನು ಬ್ಯಾಂಕ್ ಆನ್‌ಲೈನ್ ಮೂಲಕ ನವೀಕರಿಸಿದ ತಕ್ಷಣವೇ ಆರ್‌ಸಿಯಿಂದ ಹೈಪೊಥಿಕೇಷನ್ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ. ಈ ವ್ಯವಸ್ಥೆ ಯುಎಲ್‌ಐ (Unified Lending Interface) ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿವೃದ್ಧಿಪಡಿಸಿದ ಡಿಜಿಟಲ್ ಸಾಲ ವ್ಯವಸ್ಥೆಯಾಗಿದೆ. ಇದರ ಮೂಲಕ ಬ್ಯಾಂಕ್‌ಗಳು, ಯುಎಲ್‌ಐ ವ್ಯವಸ್ಥೆ ಮತ್ತು ಸರ್ಕಾರದ ವಾಹನ ಡೇಟಾಬೇಸ್‌ ನಡುವೆ ಸುರಕ್ಷಿತ ಹಾಗೂ ತ್ವರಿತ ಮಾಹಿತಿಯ ವಿನಿಮಯ ಸಾಧ್ಯವಾಗುತ್ತದೆ.

46
ಇ-ವಾಹನ್ ಪೋರ್ಟಲ್ ಮೂಲಕ ಮಾಹಿತಿ
Image Credit : Axis bank

ಇ-ವಾಹನ್ ಪೋರ್ಟಲ್ ಮೂಲಕ ಮಾಹಿತಿ

ಸಾಲ ತೀರಿದ ನಂತರ ಬ್ಯಾಂಕ್ ಸಂಬಂಧಿತ ಮಾಹಿತಿಯನ್ನು ಅಪ್‌ಡೇಟ್ ಮಾಡಿದ ಕೂಡಲೇ, ವಾಹನದ ನೋಂದಣಿ ದಾಖಲೆಗಳಲ್ಲಿ ಹೈಪೊಥಿಕೇಷನ್ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನ ಮಾಲೀಕರಿಗೆ VAHAN Portal ಮೂಲಕ ಎಸ್‌ಎಂಎಸ್‌ ಸಂದೇಶ ಕಳುಹಿಸಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಸಂಪೂರ್ಣ ಪ್ರಕ್ರಿಯೆ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಡಿಜಿಟಲ್ ಮೂಲಕ ನಡೆಯಲಿದೆ. ಇದರಿಂದ ಪ್ರಕ್ರಿಯೆಯ ವೇಗ ಹೆಚ್ಚುವುದರ ಜೊತೆಗೆ ಪಾರದರ್ಶಕತೆಯೂ ಸುಧಾರಣೆಯಾಗಲಿದೆ. ಸರ್ಕಾರದ ‘ಜೀವನ ಸುಲಭತೆ’ (Ease of Living) ಯೋಜನೆಯ ಭಾಗವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

56
ಆರಂಭದಲ್ಲಿ ಕೆಲವು ಬ್ಯಾಂಕ್‌ಗಳು ಮಾತ್ರ
Image Credit : HDFC bank

ಆರಂಭದಲ್ಲಿ ಕೆಲವು ಬ್ಯಾಂಕ್‌ಗಳು ಮಾತ್ರ

ಪ್ರಸ್ತುತ ಈ ವ್ಯವಸ್ಥೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಚೋಳಮಂಡಲಂ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಸುಂದರಂ ಫೈನಾನ್ಸ್ ಮುಂತಾದ ಐದು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಜಾರಿಗೆ ತಂದಿವೆ. ಮುಂದಿನ ಹಂತಗಳಲ್ಲಿ ದೇಶದ ಇನ್ನಷ್ಟು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಈ ವ್ಯವಸ್ಥೆಯಲ್ಲಿ ಸೇರಿಕೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

66
ತಜ್ಞರಿಂದ ಸ್ವಾಗತ
Image Credit : freepik

ತಜ್ಞರಿಂದ ಸ್ವಾಗತ

ಈ ಉಪಕ್ರಮವನ್ನು ಸಾರಿಗೆ ಸೇವಾ ತಜ್ಞ ಅನಿಲ್ ಛಿಕಾರ ಸ್ವಾಗತಿಸಿದ್ದು, “ವಾಹನ ಖರೀದಿಸುವಾಗ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಡಮಾನ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುತ್ತವೆ. ಆದರೆ ಸಾಲ ಮರುಪಾವತಿ ಆದ ನಂತರ ಹೈಪೊಥಿಕೇಷನ್ ತೆಗೆದುಹಾಕುವಲ್ಲಿ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಹೊಸ ವ್ಯವಸ್ಥೆ ಇದಕ್ಕೆ ಪರಿಣಾಮಕಾರಿ ಪರಿಹಾರ ಒದಗಿಸುತ್ತದೆ” ಎಂದು ತಿಳಿಸಿದ್ದಾರೆ. ಹೊಸ ವ್ಯವಸ್ಥೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಸಾಲ ತೀರಿಸಿದ ಬಳಿಕ ಆರ್‌ಸಿಯಲ್ಲಿ ಬ್ಯಾಂಕ್ ಹೆಸರು ತೆಗೆದುಹಾಕಿಸಲು ಬ್ಯಾಂಕ್ ಮತ್ತು ಆರ್‌ಟಿಒ ಕಚೇರಿಗಳ ಸುತ್ತಾಡುವ ಅಗತ್ಯ ಬಹಳ ಮಟ್ಟಿಗೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವ್ಯವಹಾರ
ಬ್ಯಾಂಕ್
ಕಾರುಗಳು
ಬೈಕರ್
ಆಟೋಮೊಬೈಲ್

Latest Videos
Recommended Stories
Recommended image1
Viral Video: ಮಗಳನ್ನು ಚುಡಾಯಿಸುತ್ತಿದ್ದ ಪುಂಡನಿಗೆ ಕಾಲೇಜು ಕ್ಯಾಂಪಸ್‌ನಲ್ಲೇ ಅಪ್ಪನಿಂದ ಧರ್ಮದೇಟು!
Recommended image2
ಯುದ್ಧದಿಂದ ಕುವೈತ್‌ನಲ್ಲಿ ಸಿಲುಕಿದ ಪತ್ನಿ, ಕಳೆದ 5 ದಿನದಿಂದ ಶವಾಗಾರದಲ್ಲಿದೆ ಗಂಡನ ಮೃತದೇಹ
Recommended image3
ರಶ್ಮಿಕಾ ಪರ ನಿಂತ Gen Z ಪಾರ್ಟಿ.. ರಶ್ಮಿಕಾ ಈಸ್ ಗ್ರೇಟ್.. ಕರ್ನಾಟಕ ಕ್ರಶ್ ಟು 'ನ್ಯಾಷನಲ್ ಕ್ರಶ್' ಆಗಿದ್ದು ಸಣ್ಣ ಸಾಧನೆಯಲ್ಲ!
Related Stories
Recommended image1
ಐದು ವರ್ಷ ಬಳಿಕ ಬಡ್ಡಿ ಶೇ.0.5 ಕಡಿತ, ಗೃಹ, ವಾಹನ ಸಾಲ ಅಗ್ಗ!
Recommended image2
ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್​: FD ಇಡುವವರಿಗೆ ಬ್ಯಾಡ್​ ನ್ಯೂಸ್​: ಇಲ್ಲಿದೆ ಡಿಟೇಲ್ಸ್​...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved