ಮೊಡವೆಗಳನ್ನ ಬೇಗ ಒಣಗಿಸಲು ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಿಸಲು ಪಿಂಪಲ್ ಪ್ಯಾಚ್‌ಗಳು ಸಖತ್ ಹೆಲ್ಪ್ ಮಾಡುತ್ತವೆ. ಹಾಗಾದ್ರೆ, ಈ ಪಿಂಪಲ್ ಪ್ಯಾಚ್‌ಗಳ ಪ್ರಯೋಜನಗಳೇನು ಮತ್ತು ಅವುಗಳನ್ನು ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಇಲ್ಲಿದೆ ಮಾಹಿತಿ.

ಚರ್ಮದ ಆರೈಕೆ ಮಾಡುವುದು ಕೇವಲ ಮುಖದ ಮೇಲಿನ ಕೊಳೆಯನ್ನು ತೆಗೆಯುವುದಷ್ಟೇ ಅಲ್ಲ, ಬದಲಾಗಿ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. ಇತ್ತೀಚೆಗೆ ಹುಡುಗಿಯರಲ್ಲಿ ಒಂದು ವಿಶೇಷ ಸ್ಕಿನ್‌ಕೇರ್ ಪ್ರಾಡಕ್ಟ್ ಸಖತ್ ಪಾಪ್ಯುಲರ್ ಆಗ್ತಿದೆ. ಅದೇ 'ಪಿಂಪಲ್ ಪ್ಯಾಚಸ್' (Pimple Patches). ಬಹುತೇಕ ಯುವತಿಯರ ಬಾಯಲ್ಲಿ ಈಗ ಇದೇ ಹೆಸರು ಕೇಳಿಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಣ್ಣ, ಪಾರದರ್ಶಕ ಸ್ಟಿಕ್ಕರ್‌ಗಳಂತೆ ಕಾಣುವ ಈ ಪಿಂಪಲ್ ಪ್ಯಾಚ್‌ಗಳನ್ನು ಮುಖದ ಮೇಲೆ ಹಚ್ಚಿದರೆ ಮೊಡವೆಗಳು ಮುಚ್ಚಿಹೋಗುವುದಲ್ಲದೆ, ಮುಖದ ಅಂದವೂ ಹೆಚ್ಚುತ್ತದೆ. ಇವುಗಳನ್ನು ನೇರವಾಗಿ ಮೊಡವೆ ಅಥವಾ ಪಿಂಪಲ್ ಮೇಲೆ ಅಂಟಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ಯಾಚ್‌ಗಳನ್ನು ಹೈಡ್ರೋಕೊಲಾಯ್ಡ್ (Hydrocolloid) ಎಂಬ ವಸ್ತುವಿನಿಂದ ತಯಾರಿಸಲಾಗುತ್ತದೆ. ಈ ಪಿಂಪಲ್ ಸ್ಟಿಕ್ಕರ್‌ಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಅವುಗಳ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಪಿಂಪಲ್ ಪ್ಯಾಚ್‌ಗಳು ಯಾಕೆ ಇಷ್ಟೊಂದು ಜನಪ್ರಿಯ?
ಪಿಂಪಲ್ ಪ್ಯಾಚ್‌ಗಳಿಗೆ ಈಗ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇವು ಮೊಡವೆಯಿಂದ ಬರುವ ಕೀವು ಮತ್ತು ಕೊಳೆಯನ್ನು ಹೀರಿಕೊಂಡು, ಅದನ್ನು ಬೇಗನೆ ಒಣಗಲು ಸಹಾಯ ಮಾಡುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಮೊಡವೆ ಬೇಗನೆ ವಾಸಿಯಾಗುವುದಲ್ಲದೆ, ಚರ್ಮದ ಮೇಲೆ ಕಲೆಗಳು ಕೂಡ ಉಳಿಯುವುದಿಲ್ಲ.

ಪಿಂಪಲ್ ಪ್ಯಾಚ್‌ಗಳ ಪ್ರಯೋಜನಗಳೇನು?
-ಮೊಡವೆಗಳನ್ನು ಬೇಗನೆ ಒಣಗಿಸಲು ಈ ಪ್ಯಾಚ್‌ಗಳು ಸಹಾಯ ಮಾಡುತ್ತವೆ. ಇವು ಮೊಡವೆಯೊಳಗಿನ ದ್ರವ ಮತ್ತು ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಮುಖದ ಮೇಲಿನ ಕೆಂಪಾಗುವಿಕೆ ಮತ್ತು ಊತ ಕಡಿಮೆಯಾಗುತ್ತದೆ.

-ಪಿಂಪಲ್ ಪ್ಯಾಚ್ ಹಚ್ಚುವುದರಿಂದ ಬ್ಯಾಕ್ಟೀರಿಯಾದಿಂದ ರಕ್ಷಣೆ ಸಿಗುತ್ತದೆ. ಇದು ಮೊಡವೆಯನ್ನು ಹೊರಗಿನ ಧೂಳು, ಕೊಳೆ ಮತ್ತು ಬ್ಯಾಕ್ಟೀರಿಯಾದಿಂದ ದೂರವಿಡುತ್ತದೆ. ಇದರಿಂದ ಸೋಂಕಿನ ಅಪಾಯ ಬಹುತೇಕ ಇರುವುದಿಲ್ಲ.

-ಮುಖದ ಮೇಲೆ ಒಂದು ಮೊಡವೆಯಾದರೆ ಸಾಕು, ದಿನವಿಡೀ ಅದನ್ನು ಮುಟ್ಟಬೇಕು ಅನಿಸುತ್ತದೆ. ಈ ಅಭ್ಯಾಸವನ್ನು ತಡೆಯಲು ಪಿಂಪಲ್ ಪ್ಯಾಚ್‌ಗಳು ಉತ್ತಮ ಆಯ್ಕೆ. ಇದನ್ನು ಹಚ್ಚುವುದರಿಂದ ಮೊಡವೆಯನ್ನು ಮುಟ್ಟಲು ಅಥವಾ ಒಡೆಯಲು ಸಾಧ್ಯವಾಗುವುದಿಲ್ಲ, ಇದರಿಂದ ಕಲೆಗಳೂ ಆಗುವುದಿಲ್ಲ.

-ಈ ಪಿಂಪಲ್ ಪ್ಯಾಚ್‌ಗಳು ಪಾರದರ್ಶಕವಾಗಿಯೂ ಸಿಗುತ್ತವೆ. ಇವುಗಳನ್ನು ಹಚ್ಚಿದ ನಂತರ ಮೇಕಪ್ ಕೂಡ ಮಾಡಬಹುದು. ಹಗುರವಾದ ಮೇಕಪ್ ಕೆಳಗೆ ಇವು ಕಾಣಿಸುವುದೇ ಇಲ್ಲ, ಹಾಗಾಗಿ ಮುಖದಲ್ಲಿ ಮೊಡವೆ ಇರುವುದು ಗೊತ್ತಾಗುವುದೇ ಇಲ್ಲ.

ಪಿಂಪಲ್ ಪ್ಯಾಚ್ ಖರೀದಿಸುವಾಗ ಏನು ಗಮನಿಸಬೇಕು?

ಸ್ಯಾಲಿಸಿಲಿಕ್ ಆಸಿಡ್, ಟೀ ಟ್ರೀ ಆಯಿಲ್ ಅಥವಾ ಸೆಂಟೆಲ್ಲಾದಂತಹ ಅಂಶಗಳಿರುವ ಪಿಂಪಲ್ ಪ್ಯಾಚ್‌ಗಳನ್ನು ಖರೀದಿಸಿ. ಜೊತೆಗೆ, ಮೊಡವೆಯ ಗಾತ್ರಕ್ಕೆ ತಕ್ಕಂತೆ ಪ್ಯಾಚ್ ಆಯ್ಕೆ ಮಾಡಿಕೊಳ್ಳಿ. ಖರೀದಿಸುವಾಗ ಬ್ರ್ಯಾಂಡ್ ಬಗ್ಗೆ ಗಮನವಿರಲಿ ಮತ್ತು ನಿಮ್ಮ ಚರ್ಮಕ್ಕೆ ಅಲರ್ಜಿ ಆಗುತ್ತದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.