- Home
- Automobile
- Car News
- ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಿದ ಹೆಮ್ಮೆಯ ಟಾಟಾ, ಫೆಬ್ರವರಿಯ ಗರಿಷ್ಠ ಸೇಲ್ ಕಾರು ಲಿಸ್ಟ್
ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಿದ ಹೆಮ್ಮೆಯ ಟಾಟಾ, ಫೆಬ್ರವರಿಯ ಗರಿಷ್ಠ ಸೇಲ್ ಕಾರು ಲಿಸ್ಟ್
ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಿದ ಹೆಮ್ಮೆಯ ಟಾಟಾ, ಫೆಬ್ರವರಿಯ ಗರಿಷ್ಠ ಸೇಲ್ ಕಾರು ಲಿಸ್ಟ್, ಮಾರುತಿ ಡಿಸೈರ್, ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಜಾ ಸೇರಿದಂತೆ ಎಲ್ಲಾ ಕಾರುಗಳನ್ನು ಹಿಂದಿಕ್ಕಿದ ಟಾಟಾದ ಕಾರು ಯಾವುದು?

ನಂ.1 ಪಟ್ಟಕ್ಕೇರಿದ ಟಾಟಾ
ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಆಗಿರು ಕ್ರಾಂತಿಯಿಂದ ಹಲವು ಆಕರ್ಷಕ ವಿನ್ಯಾಸದ ಕಾರುಗಳ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೈಗೆಟುಕುವ ದರದಲ್ಲಿ 5 ಸ್ಟಾರ್ ಸುರಕ್ಷತೆಯ ಕಾರುಗಳು ಲಭ್ಯವಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರಿಗೆ ಭಾರಿ ಬೇಡಿಕೆ ಇದೆ. ಕಡಿಮೆ ಬೆಲೆ, ಕಡಿಮೆ ನಿರ್ವಹಣೆ ವೆಚ್ಚ, ಉತ್ತಮ ಮೈಲೇಜ್ ಸೇರಿದಂತೆ ಹಲವು ಕಾರಣಗಳು ಇದೆ. ಆದರೆ ಇದೀಗ ಮಾರುತಿ, ಹ್ಯುಂಡೈ ಎಲ್ಲವನ್ನು ಟಾಟಾ ಮೋಟಾರ್ಸ ಹಿಂದಿಕ್ಕಿ ನಂಬರ್ 1 ಪಟ್ಟಕ್ಕೇರಿದೆ.
ಫೆಬ್ರವರಿಯ ಕಾರು ಮಾರಾಟ
2026ರ ಫೆಬ್ರವರಿ ತಿಂಗಳಲ್ಲಿ ಕಾರು ಮಾರಾಟದ ಲಿಸ್ಟ್ ಬಹಿರಂಗವಾಗಿದೆ. ಪ್ರತಿ ಬಾರಿ ಮಾರುತಿ ಸುಜುಕಿಯ ಕಾರುಗಳ ನಂಬರ್ 1 ಸ್ಥಾನ ಪಡೆದಿರುತ್ತದೆ. ಆದರೆ ಇದೀಗ ಭಾರತೀಯರು ಟಾಟಾ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದರ ಪರಿಣಾಮ ಟಾಟಾ ನೆಕ್ಸಾನ್ ಫೆಬ್ರವರಿ ತಿಂಗಳಲ್ಲಿ ಗರಿಷ್ಠ ಮಾರಾಟದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಫೆಬ್ರವರಿಯಲ್ಲಿ ನೆಕ್ಸಾನ್ ಮಾರಾಟ
ಫೆಬ್ರವರಿ 2026ರಲ್ಲಿ ಟಾಟಾ ನೆಕ್ಸಾನ್ 19,430 ಕಾರುಗಳು ಮಾರಾಟಗೊಂಡಿದೆ. ಈ ಮೂಲಕ ಮೊದಲ ಸ್ಥಾನ ಪಡೆದಿದೆ. 2025ರ ಫೆಬ್ರವರಿ ತಿಂಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ 4081 ಕಾರುಗಳು ಮಾರಾಟವಾಗಿದೆ. ಮೊದಲ ಸ್ಥಾನ ಟಾಟಾ ನೆಕ್ಸಾನ್ ಆಕ್ರಮಿಸಿಕೊಂಡರೆ ಎರಡನೇ ಸ್ಥಾನಕ್ಕೆ ಮಾರುತಿ ಸುಜುಕಿ ಡಿಸೈರ್ ಕಾರು ಕುಸಿದಿದೆ.
ಫೆಬ್ರವರಿ 2026ರ ಟಾಪ್ 5 ಕಾರು (ಮಾರಾಟ)
- ಟಾಟಾ ನೆಕ್ಸಾನ್ ಹಾಗೂ EV, 19430
- ಮಾರುತಿ ಡಿಸೈರ್, 19326
- ಟಾಟಾ ಪಂಚ್, 18748
- ಹ್ಯುಂಡೈ ಕ್ರೆಟಾ, 17,938
- ಮಾರುತಿ ಬ್ರೆಜಾ, 17,863
ಎಸ್‌ಯುವಿ ಕಾರುಗಳ ಪ್ರಾಬಲ್ಯ
ಭಾರತದದ ಮಾರುಕಟ್ಟೆಯಲ್ಲಿ ಮತ್ತೆ ಎಸ್‌ಯುವಿ ಕಾರುಗಳೇ ಪ್ರಾಬಲ್ಯ ಸಾಧಿಸುತ್ತಿದೆ. ಪ್ರಮುಖವಾಗಿ ನೆಕ್ಸಾನ್, ಟಾಟಾ ಪಂಚ್, ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಜಾ ಕಾರುಗಳು ಟಾಪ್ 5 ಮಾರಾಟ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೆಕ ಸೆಡಾನ್ ಕಾರು ಡಿಸೈರ್.
ಫೆಬ್ರವರಿ 2026ರಲ್ಲಿ ಕಾರುಗಳ ಒಟ್ಟು ಮಾರಾಟ
- ಮಾರುತಿ ಸುಜುಕಿ, 147672
- ಮಹೀಂದ್ರ, 53,324
- ಟಾಟಾ ಮೋಟಾರ್ಸ್, 52318
- ಹ್ಯುಂಡೈ, 28432
- ಕಿಯಾ, 20058

