- Home
- News
- State
- Karnataka News Live: ಸಿಕ್ಕಿದ್ದೇ ಚಾನ್ಸ್, ಗ್ಯಾಸ್ ವಿಚಾರ ಇಟ್ಕೊಂಡು ಹಗಲು ದರೋಡೆಗೆ ಇಳಿದ ಬೆಂಗಳೂರು ಹೋಟೆಲ್‌ಗಳು!
Karnataka News Live: ಸಿಕ್ಕಿದ್ದೇ ಚಾನ್ಸ್, ಗ್ಯಾಸ್ ವಿಚಾರ ಇಟ್ಕೊಂಡು ಹಗಲು ದರೋಡೆಗೆ ಇಳಿದ ಬೆಂಗಳೂರು ಹೋಟೆಲ್‌ಗಳು!

ಧಾರವಾಡ: ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ಗಾಲ್ಫ್ ಮೈದಾನದಲ್ಲಿದ್ದ ಬನ್ನಿ ಮಹಾಂಕಾಳಿದೇವಿ ದೇವಸ್ಥಾನ ಹಾಗೂ 5 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪುತ್ಥಳಿ ತೆರವು ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ರೈಲ್ವೆ ಕಚೇರಿಗೆ ಮುತ್ತಿಗೆ ಹಾಕಿ, ಡಿಆರ್ಎಂ ಕಚೇರಿಯಲ್ಲಿನ ನಾಮಫಲಕ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಆರ್ಪಿಎಫ್ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮಂಗಳವಾರ ವಾಯು ವಿಹಾರಕ್ಕೆ ಹೋದಾಗ ದೇಗುಲ ತೆರವು ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಮಧ್ಯಾಹ್ನ ಹಿಂದೂಗಳು ಒಗ್ಗೂಡಿ ತೆರವು ಜಾಗದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿದರು. ಆ ಬಳಿಕ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ ಕಚೇರಿಗೆ ಮುತ್ತಿಗೆ ಹಾಕಿ, ನಾಮಫಲಕ ಕಿತ್ತೊಗೆದರು.
ಹಿಂದೂ ದೇವಸ್ಥಾನ ತೆಗೆದಿರುವುದು ಮೂರ್ಖತನದ ಪರಮಾವಧಿ. ಶನಿವಾರದೊಳಗೆ ದೇವಸ್ಥಾನ ಹಾಗೂ ಪುತ್ಥಳಿ ಪುನರ್ ಸ್ಥಾಪಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
Karnataka News Live 11 March 2026ಸಿಕ್ಕಿದ್ದೇ ಚಾನ್ಸ್, ಗ್ಯಾಸ್ ವಿಚಾರ ಇಟ್ಕೊಂಡು ಹಗಲು ದರೋಡೆಗೆ ಇಳಿದ ಬೆಂಗಳೂರು ಹೋಟೆಲ್‌ಗಳು!
Karnataka News Live 11 March 2026ಗ್ರಾಮೀಣ ಭಾಗದ ನೀರಿನ ಸಮಸ್ಯೆಗೆ ಮುಂಜಾಗ್ರತೆ ವಹಿಸಿ - ಶಾಸಕ ಗೋಪಾಲಕೃಷ್ಣ ಬೇಳೂರು
ಈ ಬಾರಿ ಬಿಸಿಲು ಜೋರಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುಂಜಾಗ್ರತೆ ವಹಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.
Karnataka News Live 11 March 2026ದಾಂಡೇಲಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಸ್ವಿಫ್ಟ್ ಕಾರು - ಮೂವರು ಗಂಭೀರ
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ದಾಖಲಿಸಲಾಗಿದೆ.
Karnataka News Live 11 March 2026ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ - ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ವಾಗ್ದಾಳಿ
ಸಾಲದ ಮೂಲಕ ರಾಜ್ಯ ಬಜೆಟ್ ಮಂಡಿಸಲಾಗಿದ್ದು, ಇದು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ತೋರಿಸುತ್ತದೆ. 2026-27ನೇ ಸಾಲಿನ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
Karnataka News Live 11 March 2026E-Khata ಲಂಚ ಆರೋಪ - ದಾಖಲೆ ಕೊಟ್ಟರೆ ಅಧಿಕಾರಿ ವಿರುದ್ಧ ಕ್ರಮ - ಡಿ.ಕೆ.ಶಿವಕುಮಾರ್
ಇ-ಖಾತಾ ನೀಡುವ ವಿಚಾರದಲ್ಲಿ ಯಾವುದೇ ಅಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ದಾಖಲೆ ನೀಡಿದರೆ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Karnataka News Live 11 March 202621 ಜಿಲ್ಲೆಯ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ - ಸಚಿವ ಪ್ರಿಯಾಂಕ್ ಖರ್ಗೆ
31 ಗ್ರಾಮಗಳಿಗೆ 96 ಟ್ಯಾಂಕರ್‌ಗಳ ಮುಖಾಂತರ ಹಾಗೂ 152 ಗ್ರಾಮಗಳಿಗೆ 154 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಒದಗಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
Karnataka News Live 11 March 2026ಮಲೆನಾಡು ಜಿಲ್ಲೆಗಳಲ್ಲಿ ರೈತರ ಕೋವಿ ಪರವಾನಗಿ ನೀಡಲು ಸೂಚಿಸ್ತೇನೆ - ಗೃಹ ಸಚಿವ ಡಾ.ಜಿ.ಪರಮೇಶ್ವರ್
ಕೃಷಿ ಬೆಳೆ ರಕ್ಷಣೆಗೆ ಸಂಬಂಧಿಸಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ರೈತರಿಗೆ ಕೋವಿ ಪರವಾನಗಿ ನೀಡಲು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
Karnataka News Live 11 March 2026ಹುಡುಗಿರಾ, ನಿಮ್ ಬಳಿ BMW ಇದ್ರೆ ಮಾತ್ರ ಅವನ ಬಳಿ Benz ಕೇಳಿ - Annayya Serial ಗುಂಡಮ್ಮ ಕಿಡಿ
'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟಿ ಪ್ರತೀಕ್ಷಾ ಶ್ರೀನಾಥ್, ಇಂದಿನ ಹೆಣ್ಣುಮಕ್ಕಳು ತಮ್ಮ ಭಾವಿ ಗಂಡನಿಂದ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಸಮಾನತೆಯ ವಿಷಯದಲ್ಲಿ ಗಂಡನ ಆರ್ಥಿಕ ಸ್ಥಿತಿಯ ಬಗ್ಗೆ ಮಾತ್ರ ಹೆಚ್ಚು ಬೇಡಿಕೆ ಇಡುವುದನ್ನು ವಿವರಿಸಿದ್ದಾರೆ.
Karnataka News Live 11 March 2026ಉತ್ತರಪ್ರದೇಶ - ಅಂತ್ಯಕ್ರಿಯೆಗೆ ತಯಾರಾಗಿದ್ದ ಕುಟುಂಬಕ್ಕೆ ಅಚ್ಚರಿ, ಉಸಿರಾಡದ ಮಹಿಳೆಗೆ ಜೀವ ಕೊಟ್ಟ ರಸ್ತೆಗುಂಡಿ!
Karnataka News Live 11 March 2026ವಿದೇಶದಲ್ಲಿ ನೆಲೆಸಿರುವವರ ಬೆಂಗಳೂರು ಮನೆಯಿಂದ 3 ಕೋಟಿ ಮೌಲ್ಯದ ವಜ್ರಾಭರಣ ಕದ್ದ 19ರ ಯುವಕ, ಅಮೆರಿಕದಿಂದಲೇ ಕಳ್ಳತನ ನೋಡಿದ ಮಾಲೀಕ!
ಬೆಂಗಳೂರಿನ ಯಲಹಂಕದಲ್ಲಿ ನಡೆದ 3 ಕೋಟಿ ರೂಪಾಯಿ ಮೌಲ್ಯದ ಮನೆಕಳ್ಳತನ ಪ್ರಕರಣದಲ್ಲಿ ರಾಜಸ್ಥಾನ ಮೂಲದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದು, ಆರು ತಿಂಗಳ ಕಾಲ ಮನೆಯ ಮೇಲೆ ನಿಗಾ ಇಟ್ಟು, ಸ್ಲೈಡ್ ಡೋರ್ ಮೂಲಕ ಒಳನುಗ್ಗಿ ಕಳ್ಳತನ ಮಾಡಿದ್ದ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
Karnataka News Live 11 March 2026ವಿಷ್ಣುವರ್ಧನ್ ಸರ್ ಥರ ನಾನೂ ಕೈಗೆ ಕಡಗ ಹಾಕಿಕೊಳ್ಳುತ್ತೇನೆ - ಗೋಲ್ಡನ್‌ಸ್ಟಾರ್ ಗಣೇಶ್
ನಾನು ವಿಷ್ಣು ಸಾರ್ ದೊಡ್ಡ ಅಭಿಮಾನಿ. ಅವರಂತೆಯೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎನ್ನುತ್ತಿದ್ದರು ಎಂದು ಗೋಲ್ಡನ್‌ಸ್ಟಾರ್ ಗಣೇಶ್ ಹೇಳಿದರು.
Karnataka News Live 11 March 2026Love Mocktail 3 - ನಮ್ಮ ಚಿತ್ರ ಚೆನ್ನಾಗಿದೆ, ದೊಡ್ಡ ಚಿತ್ರದ ಭಯ ನಮಗಿಲ್ಲ - ಡಾರ್ಲಿಂಗ್ ಕೃಷ್ಣ
ನಾನು ಬರೆದ ಕತೆಗೆ ಪ್ರತಿಯೊಬ್ಬರು ಜೀವ ತುಂಬಿದ್ದಾರೆ. ತುಂಬಾ ಚೆನ್ನಾಗಿ ಬಂದಿದೆ. ಆ ಧೈರ್ಯದಿಂದಲೇ ಮಾರ್ಚ್ 19ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು ಡಾರ್ಲಿಂಗ್ ಕೃಷ್ಣ.
Karnataka News Live 11 March 2026ವಿದ್ಯಾರ್ಥಿಗಳಿಗೆ ಸಂಕಷ್ಟ ಶುರು, ಲ್ಯಾಪ್‌ಟಾಪ್ ಬೆಲೆಯಲ್ಲಿ ಭಾರೀ ಏರಿಕೆ!
Karnataka News Live 11 March 2026ಇಂದಿರಾ ಕ್ಯಾಂಟೀನ್‌ಗೂ ತಟ್ಟಿದ LPG ಸಿಲಿಂಡರ್ ಬಿಸಿ; ಬಡವರ ಹೊಟ್ಟೆಗೆ ಕೇವಲ 'ಮೊಸರನ್ನ'ವೇ ಗತಿ!
ಧಾರವಾಡದ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದ ಕಾರಣ, ಮಧ್ಯಾಹ್ನದ ಬಿಸಿ ಊಟವನ್ನು ನಿಲ್ಲಿಸಲಾಗಿದೆ. ಇದರಿಂದಾಗಿ, ಊಟಕ್ಕೆ ಬಂದ ನೂರಾರು ಬಡವರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಕೇವಲ ಮೊಸರನ್ನ ತಿಂದು ತೃಪ್ತಿಪಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
Karnataka News Live 11 March 2026ಕ್ಷಮಿಸಿದ್ರೂ ತಿದ್ದಿಕೊಳ್ಳಲಿಲ್ಲ - ಇನಿಯನ ಜೊತೆಗಿನ ಪಲ್ಲಂಗದಾಟಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಹೆಂಡ್ತಿ
ಶ್ರೀರಂಗಪಟ್ಟಣದ ಸಿಡಿಎಸ್ ನಾಲೆಯಲ್ಲಿ ಪತ್ತೆಯಾಗಿದ್ದ ಅರ್ಚಕ ಸಿದ್ದಲಿಂಗಪ್ಪನ ಶವದ ಪ್ರಕರಣವು ಕೊಲೆ ಎಂದು ಸಾಬೀತಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು, ಪತ್ನಿ ಶಾಲಿನಿ ತನ್ನ ಪ್ರಿಯಕರ ಹರೀಶ್ ಜೊತೆ ಸೇರಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
Karnataka News Live 11 March 2026ಕಾಲು ಮುರಿದ್ರೂ ವ್ಹೀಲ್ ಚೇರ್ ಮೇಲೆ Naa Ninna Bidalaare ಶೂಟಿಂಗ್! ವಿಡಿಯೋ ಶೇರ್ ಮಾಡಿದ ನಟಿ ನೀತಾ
Karnataka News Live 11 March 2026ದೋಸೆ ಹಿಟ್ಟಿಗೆ ಹೆಚ್ಚು ನೀರು ಹಾಕಿಬಿಟ್ರಾ? 4 ಟ್ರಿಕ್ಸ್ ಬಳಸಿ ತಕ್ಷಣ ಗಟ್ಟಿ ಮಾಡಿ
ದೋಸೆ ಹಿಟ್ಟು ಕೈತಪ್ಪಿ ತೆಳುವಾದರೆ, ಅದನ್ನು ಸರಿಪಡಿಸಲು ಹಲವು ಸುಲಭ ಉಪಾಯಗಳಿವೆ. ಅಡುಗೆಮನೆಯ ಕೆಲ ಪದಾರ್ಥಗಳನ್ನು ಬಳಸಿ ಹಿಟ್ಟನ್ನು ಗಟ್ಟಿಗೊಳಿಸಬಹುದು. ಈ ವಿಧಾನಗಳು ದೋಸೆಯನ್ನು ಗರಿಗರಿಯಾಗಿ ಅಥವಾ ಮೃದುವಾಗಿ ಮಾಡಲು ಸಹ ಸಹಕರಿಸುತ್ತವೆ.