- Home
- Life
- Relationship
- ಬ್ಯೂಟಿಯಲ್ಲಿ ಆಲಿಯಾ, ಕರೀನಾಗಿಂತ ಕಡಿಮೆಯೇನಲ್ಲ, ಐಪಿಎಸ್ ಅಧಿಕಾರಿಯನ್ನೇ ವರಿಸಲಿರುವ ದೇಶದ ಬ್ಯೂಟಿಫುಲ್ IPS ಅಧಿಕಾರಿ!
ಬ್ಯೂಟಿಯಲ್ಲಿ ಆಲಿಯಾ, ಕರೀನಾಗಿಂತ ಕಡಿಮೆಯೇನಲ್ಲ, ಐಪಿಎಸ್ ಅಧಿಕಾರಿಯನ್ನೇ ವರಿಸಲಿರುವ ದೇಶದ ಬ್ಯೂಟಿಫುಲ್ IPS ಅಧಿಕಾರಿ!
ಉತ್ತರ ಪ್ರದೇಶದ ಸಂಭಾಲ್ ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಬರೇಲಿ ಎಸ್‌ಪಿ ಅನ್ಶಿಕಾ ವರ್ಮಾ ಅವರು ಮಾರ್ಚ್ 29 ರಂದು ವಿವಾಹವಾಗಲಿದ್ದಾರೆ. 2021ರಲ್ಲಿ ಗೋರಖ್‌ಪುರದಲ್ಲಿ ಭೇಟಿಯಾದ ಈ ಐಪಿಎಸ್ ಜೋಡಿಯ ವಿವಾಹವು ರಾಜಸ್ಥಾನದ ಜೋಧ್‌ಪುರದಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ.

ಪವರ್‌ಫುಲ್ ಐಪಿಎಸ್ ಅಧಿಕಾರಿಗಳ ವಿವಾಹ
"ಪ್ರೀತಿ ಎಂಬುದು ಕೇವಲ ಪದಗಳಿಗಷ್ಟೇ ಸೀಮಿತವಲ್ಲ, ಮೌನದ ಉಪಸ್ಥಿತಿಯೂ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ" ಎಂಬ ಮಾತಿದೆ. ಇದನ್ನು ನಂಬಿರುವವರು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್. ಇವರು ಬರೇಲಿ ಜಿಲ್ಲೆಯ ಎಸ್‌ಪಿ ಅನ್ಶಿಕಾ ವರ್ಮಾ ಅವರೊಂದಿಗೆ ಮಾರ್ಚ್ 29 ರಂದು ಹಸೆಮಣೆ ಏರಲಿದ್ದಾರೆ. ಈ ಇಬ್ಬರು ಪವರ್‌ಫುಲ್ ಐಪಿಎಸ್ ಅಧಿಕಾರಿಗಳ ಮದುವೆಯ ದಿನಾಂಕ ಘೋಷಣೆಯಾದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.
2021ರಲ್ಲಿ ಮೊದಲ ಭೇಟಿ
ತಮ್ಮ ಪ್ರೇಮಕಥೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡ ಕೃಷ್ಣ ಕುಮಾರ್ ಬಿಷ್ಣೋಯ್, ಅನ್ಶಿಕಾ ವರ್ಮಾ ಅವರನ್ನು ಮೊದಲು ಭೇಟಿಯಾಗಿದ್ದು 2021ರಲ್ಲಿ ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಕೃಷ್ಣ ಕುಮಾರ್ ಅವರು ಗೋರಖ್‌ಪುರದಲ್ಲಿ ಎಸ್‌ಪಿ ಸಿಟಿಯಾಗಿ ನಿಯೋಜನೆಗೊಂಡಿದ್ದರು ಮತ್ತು ಅನ್ಶಿಕಾ ವರ್ಮಾ ಅಲ್ಲಿ ಎಎಸ್‌ಪಿ (ASP) ಆಗಿ ಸೇವೆ ಸಲ್ಲಿಸುತ್ತಿದ್ದರು.
ಅನ್ಶಿಕಾ ಅವರ ಕೆಲಸದ ಬದ್ಧತೆಗೆ ಫಿದಾ ಆಗಿದ್ದ ಕೃಷ್ಣಕುಮಾರ್
ಅನ್ಶಿಕಾ ಅವರ ಕೆಲಸದ ಬದ್ಧತೆ ಮತ್ತು ಅವರ ವ್ಯಕ್ತಿತ್ವಕ್ಕೆ ಕೃಷ್ಣ ಕುಮಾರ್ ಮಾರುಹೋಗಿದ್ದರು. ಐದು ವರ್ಷಗಳ ಪರಿಚಯದ ನಂತರ ಈಗ 2026ರಲ್ಲಿ ವಿವಾಹವಾಗಲು ನಿರ್ಧರಿಸಿದ್ದಾರೆ.
ರಾಜಸ್ಥಾನದಲ್ಲಿ ವಿವಾಹ
ಈ ಐಪಿಎಸ್ ಜೋಡಿಯ ವಿವಾಹವು ರಾಜಸ್ಥಾನದ ಜೋಧ್‌ಪುರದಲ್ಲಿ ನಡೆಯಲಿದೆ. ಆದರೆ, ಮದುವೆಯ ಧಾರ್ಮಿಕ ವಿಧಿವಿಧಾನಗಳು ಕೃಷ್ಣ ಕುಮಾರ್ ಬಿಷ್ಣೋಯ್ ಅವರ ಪೂರ್ವಜರ ಗ್ರಾಮವಾದ ಬಾರ್ಮರ್ ಜಿಲ್ಲೆಯ ಧೋರಿಮನ್ನಾ ಗ್ರಾಮದಲ್ಲಿ ಪ್ರಾರಂಭವಾಗಲಿವೆ.
ಮಾರ್ಚ್ 29ಕ್ಕೆ ವಿವಾಹ
ಇಲ್ಲಿ ಹಳದಿ ಮತ್ತು ಮೆಹೆಂದಿ ಶಾಸ್ತ್ರಗಳು ವಿಜೃಂಭಣೆಯಿಂದ ನಡೆಯಲಿವೆ. ನಂತರ ಮಾರ್ಚ್ 29 ರಂದು ಜೋಧ್‌ಪುರದಲ್ಲಿ ಬಿಷ್ಣೋಯ್ ಸಮುದಾಯದ ಪುರಾತನ ಸಂಪ್ರದಾಯಗಳ ಪ್ರಕಾರ ವಿವಾಹ ಮಹೋತ್ಸವ ನೆರವೇರಲಿದೆ.
ಅನ್ಶಿಕಾ ವರ್ಮಾ ಉತ್ತರಪ್ರದೇಶವರು
ಮೂಲತಃ ಉತ್ತರ ಪ್ರದೇಶದ ಪ್ರಯಾಗ್‌ರಾಜ್ (ಅಲಹಾಬಾದ್) ನಿವಾಸಿಯಾದ ಅನ್ಶಿಕಾ ವರ್ಮಾ ಅವರು ನೋಯ್ಡಾದ ಗಾಲ್ಗೋಟಿಯಾಸ್ ಕಾಲೇಜಿನಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ. 2020ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 136ನೇ ಶ್ರೇಣಿ (Rank) ಪಡೆಯುವ ಮೂಲಕ ಐಪಿಎಸ್ ಅಧಿಕಾರಿಯಾದರು. ಪ್ರಸ್ತುತ ಇವರು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃಷ್ಣಕುಮಾರ್ ಸಂಭಾಲ್‌ನ ಎಸ್‌ಪಿ
ಇವರು 2018ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಸದ್ಯ ಸಂಭಾಲ್ ಜಿಲ್ಲೆಯ ಎಸ್‌ಪಿ ಆಗಿ ನಿಯೋಜನೆಗೊಂಡಿದ್ದಾರೆ. ಮೂಲತಃ ರಾಜಸ್ಥಾನದ ಬಾರ್ಮರ್ ಜಿಲ್ಲೆಯವರಾದ ಇವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ವಿಶೇಷವೆಂದರೆ, ಇವರು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಅಂತಾರಾಷ್ಟ್ರೀಯ ಭದ್ರತೆ (International Security) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

