Iran-Israel conflict: ಗಲ್ಫ್ ಯುದ್ಧದ ಬಿಸಿ ಭಾರತೀಯರಿಗೂ ತಟ್ಟಿದೆ. ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾದ್ರೆ ನಮ್ಮ ಮುಂದಿರುವ ಆಯ್ಕೆಗಳೇನು? ಜನ ಏನ್ಮಾಡ್ಬೇಕು? ಸರ್ಕಾರ ಏನ್ಮಾಡ್ಬೇಕು? ಕೊರೋನಾ ಸ್ಥಿತಿ ಮತ್ತೆ ಮುಂದುವರಿಯುವ ಸಾಧ್ಯತೆ ಇದೆಯಾ? ಜನರ ಓಡಾಟ ಕಡಿಮೆ ಮಾಡಲು ಸರಕಾರ ಹಾಗೂ ಸಾರ್ವಜನಿಕರು ಜಂಟಿಯಾಗಿ ಏನು ಮಾಡಬಹುದು? ಇಲ್ಲಿವೆ ಕೆಲವು ಟಿಪ್ಸ್
Iran-Israel conflict ಯುದ್ಧದ ಬಿಸಿ ಭಾರತೀಯರಿಗೂ ತಟ್ಟಿದೆ. ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾದ್ರೆ ನಮ್ಮ ಮುಂದಿರುವ ಆಯ್ಕೆಗಳೇನು? ಜನ ಏನ್ಮಾಡ್ಬೇಕು? ಸರ್ಕಾರ ಏನ್ಮಾಡ್ಬೇಕು?
ಪೆಟ್ರೋಲ್ / ಡೀಸೆಲ್ ಅವಲಂಬನೆ ಕಡಿಮೆ ಮಾಡಲು:
1. ಮತ್ತೆ ವರ್ಕ್ ಫ್ರಂ ಹೋಂ ವ್ಯವಸ್ಥೆ ನೀಡಬೇಕು:
ಸಾಧ್ಯವಾದ ಎಲ್ಲ ಖಾಸಗಿ ಮತ್ತು ಐಟಿ ಕಂಪನಿಗಳಿಗೆ ಮತ್ತೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಅನುಮತಿಸಿದರೆ ದಿನನಿತ್ಯದ ಪ್ರಯಾಣ ಕಡಿಮೆಯಾಗುತ್ತದೆ. ಇದರಿಂದ ಟ್ರಾಫಿಕ್ ಕೂಡ ಕಡಿಮೆಯಾಗುತ್ತದೆ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಗಮನಾರ್ಹವಾಗಿ ಕಡಿಮೆಯಾಗಬಹುದು. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಇದು ಬಹಳ ಪರಿಣಾಮಕಾರಿ ಕ್ರಮವಾಗಬಹುದು.
2. ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಬೇಕು:
ಶಾಲಾ ಬಸ್‌ಗಳು, ವ್ಯಾನ್‌ಗಳು ಮತ್ತು ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಪ್ರಯಾಣವೂ ಸಾಕಷ್ಟು ಇಂಧನ ಬಳಸುತ್ತದೆ. ತಾತ್ಕಾಲಿಕವಾಗಿ ಶಾಲೆಗಳಿಗೆ ರಜೆ ನೀಡಿದರೆ ಅಥವಾ ಆನ್‌ಲೈನ್ ಕ್ಲಾಸ್‌ಗಳನ್ನು ನಡೆಸಿದರೆ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಸಿಲಿಂಡರ್ ಅಭಾವ ತಪ್ಪಿಸಲು ಜನ ಏನ್ಮಾಡಬಹುದು?
1. ಅಡುಗೆ ಶೈಲಿ ಬದಲಾವಣೆ (ಫೈರ್‌ಲೆಸ್ ಕುಕ್ಕಿಂಗ್)
ಗ್ಯಾಸ್ ಬಳಕೆ ಕಡಿಮೆ ಮಾಡಲು ಕೆಲವು ಆಹಾರ ಪದಾರ್ಥಗಳನ್ನು ಫೈರ್‌ಲೆಸ್ ಕುಕ್ಕಿಂಗ್ ಮೂಲಕ ತಯಾರಿಸಬಹುದು. ಉದಾಹರಣೆಗೆ ಸ್ಯಾಲಡ್‌ಗಳು, ಹಣ್ಣು ಆಧಾರಿತ ಆಹಾರಗಳು ಅಥವಾ ಮುಂಚಿತವಾಗಿ ತಯಾರಿಸಬಹುದಾದ ಪದಾರ್ಥಗಳನ್ನು ಬಳಸಬಹುದು. ಇದರಿಂದ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ.
2. ಕಾಂಟಿನೆಂಟಲ್ ಫುಡ್‌ಗಳನ್ನು ಹೆಚ್ಚು ಬಳಸುವುದು (ಸ್ಯಾಂಡ್ವಿಚ್ ಇತ್ಯಾದಿ)
ಸ್ಯಾಂಡ್ವಿಚ್, ಬ್ರೆಡ್ ಆಧಾರಿತ ಆಹಾರಗಳು, ಸ್ಯಾಲಡ್‌ಗಳು ಮತ್ತು ಬೇಯಿಸದೆ ತಿನ್ನಬಹುದಾದ ಪದಾರ್ಥಗಳನ್ನು ಕೆಲವೊಮ್ಮೆ ಬಳಸಿದರೆ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ. ಇಂತಹ ಆಹಾರ ಪದ್ಧತಿ ತಾತ್ಕಾಲಿಕವಾಗಿ ಸಿಲಿಂಡರ್ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
ಸರ್ಕಾರ ಏನ್ಮಾಡ್ಬೇಕು?
1. ಗೋಬರ್ ಗ್ಯಾಸ್ ಯೂನಿಟ್‌ಗಳನ್ನು ಸ್ಥಾಪಿಸಬೇಕು:
ಗ್ರಾಮೀಣ ಪ್ರದೇಶಗಳಲ್ಲಿ ಗೋಬರ್ ಗ್ಯಾಸ್ (ಬಯೋಗ್ಯಾಸ್) ಯೂನಿಟ್‌ಗಳನ್ನು ಸ್ಥಾಪಿಸಿದರೆ ಅಡುಗೆಗೆ ಬೇಕಾದ ಗ್ಯಾಸ್ ಅನ್ನು ಸ್ಥಳೀಯವಾಗಿ ಉತ್ಪಾದಿಸಬಹುದು. ಇದರಿಂದ ಎಲ್‌ಪಿಜಿ ಸಿಲಿಂಡರ್ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ಪರಿಸರಕ್ಕೂ ಇದು ಉತ್ತಮವಾಗಿದೆ.
2. ಇಂಡಕ್ಷನ್ ಸ್ಟವ್‌ಗಳಿಗೆ ಸಬ್ಸಿಡಿ ನೀಡಬೇಕು:
ಸರ್ಕಾರ ಇಂಡಕ್ಷನ್ ಸ್ಟವ್‌ಗಳನ್ನು ಕಡಿಮೆ ಬೆಲೆಗೆ ನೀಡಿದರೆ ಜನರು ಗ್ಯಾಸ್ ಬಳಕೆಯ ಬದಲು ವಿದ್ಯುತ್ ಆಧಾರಿತ ಅಡುಗೆ ಕಡೆ ಮುಖ ಮಾಡಬಹುದು. ಇದರಿಂದ ಎಲ್‌ಪಿಜಿ ಬಳಕೆ ಕಡಿಮೆಯಾಗಬಹುದು.
3. ವಿದ್ಯುತ್ ಬಿಲ್‌ಗೆ ಸಬ್ಸಿಡಿ ನೀಡಬೇಕು
ಜನರು ಇಂಡಕ್ಷನ್ ಸ್ಟವ್ ಅಥವಾ ಇತರ ವಿದ್ಯುತ್ ಸಾಧನಗಳನ್ನು ಬಳಸಲು ಉತ್ತೇಜಿಸಲು ವಿದ್ಯುತ್ ಬಿಲ್‌ಗಳಿಗೆ ಸಬ್ಸಿಡಿ ನೀಡಬಹುದು. ಇದರಿಂದ ಜನರು ಗ್ಯಾಸ್ ಬಳಕೆಯಿಂದ ವಿದ್ಯುತ್ ಬಳಕೆಯ ಕಡೆಗೆ ಪ್ರೇರಣೆ ಸಿಗುತ್ತದೆ. ಕರ್ನಾಟಕದಲ್ಲೇನೋ ಉಚಿತ ವಿದ್ಯುತ್ ಇದೆ ಬಿಡಿ. ಆದರೆ, ಬೇರೆಡೆ ಸಬ್ಸಿಡಿ ನೀಡಲು ಗಮನಿಸಿದರೆ ಒಳಿತು.
4. ಸೋಲಾರ್ ಸ್ಟವ್‌ಗಳನ್ನು ಪ್ರೋತ್ಸಾಹಿಸಬೇಕು
ಸೋಲಾರ್ ಸ್ಟವ್‌ಗಳು ಸೂರ್ಯನ ಬೆಳಕನ್ನು ಬಳಸಿಕೊಂಡು ಅಡುಗೆ ಮಾಡಲು ಸಹಾಯ ಮಾಡುತ್ತವೆ. ಗ್ರಾಮೀಣ ಹಾಗೂ ಸೂರ್ಯನ ಬೆಳಕು ಹೆಚ್ಚು ಇರುವ ಪ್ರದೇಶಗಳಲ್ಲಿ ಇದನ್ನು ಪ್ರೋತ್ಸಾಹಿಸಿದರೆ ಗ್ಯಾಸ್ ಬಳಕೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.
5. ಗ್ಯಾಸ್ ಗೀಝರ್ ಬಳಕೆ ತಾತ್ಕಾಲಿಕವಾಗಿ ನಿಷೇಧಿಸಬೇಕು
ಗ್ಯಾಸ್ ಸಿಲಿಂಡರ್ ಕೊರತೆ ಇರುವ ಸಮಯದಲ್ಲಿ ಗ್ಯಾಸ್ ಗೀಝರ್‌ಗಳ ಬಳಕೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸುವುದು ಅಥವಾ ನಿಷೇಧಿಸುವುದು ಒಂದು ಪರಿಣಾಮಕಾರಿ ಕ್ರಮವಾಗಬಹುದು. ಅನೇಕ ಮನೆಗಳಲ್ಲಿ ಅಡುಗೆಗೆ ಬೇಕಾದ ಗ್ಯಾಸ್ ಜೊತೆಗೆ ನೀರನ್ನು ಬಿಸಿಮಾಡಲು ಕೂಡ ಗ್ಯಾಸ್ ಬಳಸಲಾಗುತ್ತದೆ. ಇದರಿಂದ ಗ್ಯಾಸ್ ಬಳಕೆ ಹೆಚ್ಚಾಗಿ ಸಿಲಿಂಡರ್‌ಗಳ ಬೇಡಿಕೆ ಹೆಚ್ಚುತ್ತದೆ.
ಆದ್ದರಿಂದ ತಾತ್ಕಾಲಿಕವಾಗಿ ಗ್ಯಾಸ್ ಗೀಝರ್ ಬಳಕೆಯನ್ನು ಕಡಿಮೆ ಮಾಡಲು ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ಮಾರ್ಗಸೂಚಿಗಳನ್ನು ನೀಡಬಹುದು. ಜನರು ವಿದ್ಯುತ್ ಗೀಝರ್, ಸೌರ ನೀರು ಬಿಸಿಮಾಡುವ ವ್ಯವಸ್ಥೆ (ಸೋಲಾರ್ ವಾಟರ್ ಹೀಟರ್) ಬಳಸಲು ಉತ್ತೇಜಿಸಬಹುದು.
ಇದರಿಂದ ಅಡುಗೆಗೆ ಬೇಕಾದ ಗ್ಯಾಸ್ ಉಳಿಯುತ್ತದೆ ಮತ್ತು ಸಿಲಿಂಡರ್ ಕೊರತೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.


