Mangaluru : ಸಿಂಧೂರ ಕಾಯಿ ಬಳಸಿ ಮನೆಯಲ್ಲೇ ತಯಾರಿಸಿ ಚಂದದ ಬಣ್ಣ..!

*  ಮೇಕಪ್ ಮಾಡ್ಕೊಂಡು ಸ್ಮಾರ್ಟ್ ಆಗೋದಕ್ಕೆ ಬಣ್ಣ ಬೇಕು 
*  ರಾಸಾಯನಿಕಯಕ್ತ ಬಣ್ಣ ಬಳಸಿ ಆರೋಗ್ಯ ಯಾಕೆ ಹಾಳು ಮಾಡೋದು?
*  ಸಾವಯವ ಬಣ್ಣ ಬಳಸಿ ಆರೋಗ್ಯವನ್ನೂ, ಸೌಂದರ್ಯವನ್ನೂ ಕಾಪಾಡಿ
 

Share this Video
  • FB
  • Linkdin
  • Whatsapp

ದಕ್ಷಿಣ ಕನ್ನಡ(ಮಾ.05): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಣಂಬೂರು ಪರಿಸದಲ್ಲಿ ಯಥೇಚ್ಛವಾಗಿ ಬೆಳೆಯುವ ಲಿಪ್ ಸ್ಟಿಕ್ ಟ್ರೀ ಅಂತ ಕರೆಯುವ ಈ ಮರದ ವೈಜ್ಞಾನಿಕ ಹೆಸರು ಅನೋಟಾ. ಬಣ್ಣದಕಾಯಿ, ಕುಂಕುಮಕಾಯಿ, ಸಿಂಧೂರಕಾಯಿ ಅಂತಾನೂ ಕರೆಯುತ್ತಾರೆ. ಇದರ ಕಾಯಿಯಲ್ಲಿರುವ ಬೀಜವೇ ನೈಸರ್ಗಿಕ ಬಣ್ಣ. ಹಿಂದೆ ಋಷಿಮುನಿಗಳ ಖಾವಿ ಬಟ್ಟೆ ತಯಾರಿಗೆ ಇದರ ಬಣ್ಣ ಬಳಸುತ್ತಿದ್ದರು. ತುಳಸಿಕಟ್ಟೆಗೆ ಬಣ್ಣ ಬಳಿಯಲು, ಗೋವಿನ ಹಬ್ಬದಲ್ಲಿ ಗೋವಿಗೆ ಬಣ್ಣ ಹಚ್ಚಲು ಇದನ್ನು ಬಳಸುತ್ತಿದ್ದರು.

Belagavi: ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ: ಜನಸಾಗರ ನೋಡಿ ಭಾವುಕರಾದ ವೀರಯೋಧ..!

ಬಳಿಕ ಲಿಪ್ ಸ್ಟಿಕ್ ಆಗಿಯೂ ಇದು ಬಳಕೆಗೆ ಬಂತು. ಈಗಲೂ ಪಶ್ಚಿಮ ಬಂಗಾಳ ಸೇರಿದಂತೆ ನಾರ್ತ್ ಈಸ್ಟ್ ರಾಜ್ಯಗಳಲ್ಲಿ ಇದನ್ನು ಬಣ್ಣದ ರೂಪದಲ್ಲಿ ಬಳಸುತ್ತಾರೆ. ವಿದೇಶಗಳಲ್ಲೂ ಇದು ವ್ಯಾಪಕವಾಗಿ ಬಳಕೆಯಲ್ಲಿದೆ. ಹಸಿರು ಹೃದಯಾಕಾರದ ಎಲೆ, ಬಿಳಿಯ ಹೂವು, ಬಳಿಕ ಕಾಯಾಗಿ ಬಲಿತ ಬಳಿಕ ಒಣಗುತ್ತದೆ. ಒಣಗಿದ ಬಳಿಕ ಅದರಲ್ಲಿಯ ಬೀಜವನ್ನ ಬಣ್ಣವಾಗಿ ಬಳಸಬಹುದು. ಕೆಲವರು ಖಾದ್ಯ ತಯಾರಿಸುವಾಗಲೂ ಈ ಬಣ್ಣ ಬಳಸುವುದಿದೆ. ಆಹಾರದ ಬಣ್ಣವಾಗಿ ಬಳಸುತ್ತಿದ್ದು, ಜಿಲೇಬಿಗೆ ಕೃತಕ ಬಣ್ಣದ ಬದಲಾಗಿ ಇದನ್ನು ಬಳಸುತ್ತಾರೆ. ಸ್ವಲ್ಪ ಪ್ರಮಾಣದ ಬೀಜಗಳನ್ನು ಬೆಚ್ಚಗಿನ ನೀರು, ಅಥವಾ ಹಾಲಿನಲ್ಲಿ ಕಲೆಸಿ ಸ್ವಲ್ಪ ಹೊತ್ತು ಬಿಟ್ಟು ಸೋಸಿದರೆ ಸಿಗುವ ಬಣ್ಣದ ನೀರನ್ನು ಜಿಲೇಬಿ ಹಿಟ್ಟಿಗೆ ಬಳಸಬಹುದು ಎನ್ನುತ್ತಾರೆ ಬಾಣಸಿಗರು. ಹಾಗೇ ಕೇಸರಿ ಬಾತು ರೀತಿಯ ಬಣ್ಣ ಬೇಕಾಗುವ ಭಕ್ಷ್ಯ, ಮತ್ತಿತರ ತಿಂಡಿಗಳಲ್ಲಿ ಬಳಸಬಹುದು. ಇದನ್ನು ಔಷಧವಾಗಿಯೂ ಕೆಲವೆಡೆ ಬಳಸುವುದಿದೆ.

ಗುಲಾಬಿ ಮತ್ತು ಕೆಂಪು ಹೀಗೆ ಎರಡು ಬಣ್ಣದ ಗಿಡಗಳು ನಮಗೆ ಸಾಮಾನ್ಯವಾಗಿ ನೋಡಲು ಸಿಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ನಾಡಿನಾದ್ಯಂತ ಹೋಳಿಹಬ್ಬ ಆಚರಣೆಯಾಗಲಿದೆ. ಒಟ್ಟಿನಲ್ಲಿ ಅತಿಯಾದ ರಾಸಾಯನಿಕ ಬಳಸಿದ ಬಣ್ಣಗಳ ಬಳಕೆ ಖರ್ಚಿಗೂ ದಾರಿ, ಆರೋಗ್ಯಕ್ಕೂ ಮಾರಿ. ಹಾಗಾಗಿ ಈ ಸಲ ರಾಸಾಯನಿಕ ಬಣ್ಣಗಳ ಬದಲಾಗಿ ಪ್ರಕೃತಿಯಲ್ಲಿ ಸಿಗುವ ಇಂತಹ ನೈಸರ್ಗಿಕ ಬಣ್ಣದಿಂದ ಮುಂಬರುವ ಹೋಳಿ ಹಬ್ಬವನ್ನು ಆಚರಿಸೋಣ. 

Related Video