
ಮಲ್ಲಿಗೆ ಹೂ ತೂಕಕ್ಕಿಳಿದ ಸಿನಿ ಲೋಕದ ಚೆಲುವೆ ರಿತಿಕಾ ಸಿಂಗ್! ಈ ಬಳುಕುವ ಬಾಲೆ ಸೀಕ್ರೇಟ್ ಏನು?
ಇತ್ತೀಚಿಗೆ ಸಿನಿರಂಗದಿಂದ ಕೊಂಚಕಾಲ ದೂರವಾಗಿದ್ದ ಈ ಚೆಲುವೆ ಸಿಕ್ಕಾಪಟ್ಟೆ ದಪ್ಪ ಆಗಿದ್ರು. ತನ್ನ ತೂಕ, ಗಾತ್ರ ನೋಡಿ ಅರೇ ನಾನು ಹೀಗೇಕಾದೆ ಅಂತ ಬೇಸರಿಸಿಕೊಂಡಿದ್ದ ರಿತಿಕಾ, ಇಮ್ಮಿಡಿಯೇಟ್ ಆಗಿ ವರ್ಕೌಟ್ ಶುರುಮಾಡಿದ್ದಾರೆ. ಸತತ ವರ್ಕೌಟ್ ನಂತರ ಮತ್ತೆ ಮೊದಲಿನ ಲುಕ್ಗೆ ಮರಳಿದ್ದಾರೆ. ತನ್ನ ಈ ಸ್ಪೂರ್ತಿದಾಯಕ ವರ್ಕೌಟ್ ಜರ್ನಿನ ರಿತಿಕಾ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಾಲಾ ಖಡೂಸ್ ಸಿನಿಮಾದಲ್ಲಿ ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದ ರಿತಿಕಾ ಸಿಂಗ್ ಎನರ್ಜಿ ಕಂಡು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಅಬ್ಬಬ್ಬಾ ಎಲ್ಲಿಂದ ಹಿಡಿದುಕೊಂಡು ಬಂದ್ರಿ ಈ ಬೆಂಕಿ ಚೆಂಡನ್ನ ಅಂತ ಈ ಚಿತ್ರದ ಮೇಕರ್ಸ್ ಬಳಿ ಕೇಳಿದ್ರು. ಈಕೆ ನಟಿಯಲ್ಲ.. ನಟಿಯಾಗುವ ಮುನ್ನ ಪ್ರೊಫೇಷನಲ್ ಮಾರ್ಷಲ್ ಆರ್ಟ್ಸ್ ಸಾಹಸಿ. ಸೂಪರ್ ಫೈಟ್ ಲೀಗ್ನಲ್ಲಿ ಭಾಗವಹಿಸಿರೋ ಈ ಬ್ಯೂಟಿ ರಿಯಲ್ ರಿಯಲ್ ಆಗೇ ಪಂಚ್ ಮಾಡ್ತಾಳೆ. ಈ ಕೋಮಲ ಮೈಯ ಚೆಲುವೆ ಹೀಗೆ ಸಾಹಸ ಮಾಡೋದನ್ನ ನೋಡ್ತಿದ್ರೆ ಪಡ್ಡೆ ಹುಡಗರು ಬಾಯಿ ಬಿಟ್ಟುಕೊಂಡು ನೋಡ್ತಾರೆ. ರಿತಿಕಾ ತೆರೆ ಮೇಲೆ ಸಾಹಸಮಯ ಪಾತ್ರಗಳಲ್ಲಷ್ಟೇ ಅಲ್ಲ ಗ್ಲಾಮರಸ್ ಆಗಿ ಕೂಡ ಕಾಣಿಸಿಕೊಂಡಿದ್ದಾಳೆ. ರಿತಿಕಾ ಅಂದ್ರೆ ಸಿಡಿಯೋ ಬೆಂಕಿಉಂಡೆಯೂ ಹೌದು.. ಹುಚ್ಚಿಬ್ಬಿಸೋ ಸೌಂದರ್ಯದ ಸೆಲೆಯೂ ಹೌದು.