ವ್ಯಾಟ್ಸಾಪ್‌ನಲ್ಲಿ APK ಫಾರ್ಮ್ಯಾಟ್‌ನಲ್ಲಿ ಹೊಸ ವರ್ಷ ಶುಭಾಶಯ ಬಂದರೆ ಡೌನ್ಲೋಡ್ ಮಾಡಬೇಡಿ!

ಎಚ್ಚರ ಬಳಕೆದಾರರೆ, ಹೊಸ ಸೈಬರ್ ಕ್ರೈಂ ಮೂಲಕ ವಂಚನೆಗೆ ಕೆಲವರು ಸಜ್ಜಾಗಿದ್ದಾರೆ. ಹೀಗಾಗಿ ಹೊಸ ವರ್ಷದ ಶುಭಾಶಯ ಸೇರಿದಂತೆ ಇತರ ಕೆಲವು ನೆಪದ ಮೂಲಕ ನಿಮಗೆ APK ಫಾರ್ಮ್ಯಾಟ್‌ನಲ್ಲಿ ಶುಭಾಶಯಗಳು ಬಂದರೆ ಡೌನ್ಲೋಡ್ ಮಾಡಬೇಡಿ

First Published Dec 31, 2024, 4:42 PM IST | Last Updated Dec 31, 2024, 4:42 PM IST

ಉಡುಪಿ(ಡಿ.31) ಹೊಸ ವರ್ಷದ ಸಂದರ್ಭ ಬಳಸಿಕೊಂಡು ವಂಚನೆ ಮಾಡುವ ಸೈಬರ್ ಕ್ರೈಂ ಪತ್ತೆಯಾಗಿದೆ. ಹೊಸ ವರ್ಷದ ಶುಭಾಶಯ ಸೇರಿದಂತೆ ಅನಾಮಿಕರಿಂದ ಬರುವ ಎಪಿಕೆ ಫಾರ್ಮ್ಯಾಟ್‌ನಲ್ಲಿರುವ ಯಾವುದೇ ಫೈಲ್‌ಗಳನ್ನು ಓಪನ್ ಅಥವಾ ಡೌನ್ಲೋಡ್ ಮಾಡಬೇಡಿ. ಇದು ಸೈಬರ್ ವಂಚಕರ ಕೃತ್ಯವಾಗಿರುವ ಸಾಧ್ಯತೆ ಹೆಚ್ಚು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ  ಡಾ.ಅರುಣ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಹೊಸವರ್ಷಾಚರಣೆ ವೇಳೆ ಕೆಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಿದ್ದಾರೆ.