Asianet Suvarna News Asianet Suvarna News

ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?

ನನಸಾಗಿತ್ತು 140 ಕೋಟಿ ಭಾರತೀಯರ ಕನಸು
ಭಾರತ ತೋರಿಸಿತ್ತು ಚಂದ್ರನ ಮೇಲೆ ಪರಾಕ್ರಮ
ಎಚ್ಚರವಾಗ್ತಾರಾ ವಿಕ್ರಂ ಹಾಗೂ ಪ್ರಗ್ಯಾನ್..?

ಚಂದ್ರಯಾನ 3.. ಬಹುಷಃ ಯಾವೊಬ್ಬ ಭಾರತೀಯನೂ ಕೂಡ ಮರೆಯಲಾಗದ ದಿನ. ಕೋಟಿ ಕೋಟಿ ಭಾರತೀಯರ ಕನಸು ನನಸಾದ ದಿನ. ಆವತ್ತು ಭಾರತವನ್ನ ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡಿತ್ತು. ಅದಾದ ಮೇಲೆ ಚಂದ್ರನಲ್ಲಿ ತನ್ನ ತಿರುಗಾಟ ಶುರು ಮಾಡಿದ್ದ ಪ್ರಗ್ಯಾನ್ ರೋವರ್(Pragyan Rover) ಜಗತ್ತಿಗೆ ಭಾರತ ಅಂದ್ರೆ ಏನು ಇಸ್ರೋ(ISRO) ತಾಖತ್ತೇನು ಅನ್ನೋದನ್ನ ಸಾರಿತ್ತು. ಯಾರೂ ಕಂಡಿರದ ಚಂದ್ರನ ಭಾಗದಲ್ಲಿ ತನ್ನ ಸಂಶೋಧನಾತ್ಮಕ ಓಡಾಟದಿಂದ ಅನೇಕ ವಿಚಾರಗಳನ್ನ ತಿಳಿಸಿತ್ತು. ತದ ನಂತರ ನಿದ್ದೆಗೆ ಜಾರಿದ್ದ ವಿಕ್ರಂ(Vikram) ಹಾಗೂ ಪ್ರಗ್ಯಾನ್ ನನ್ನು ಏಳಿಸೋ ಕೆಲಸದಲ್ಲಿ ಇಸ್ರೋ ತಲ್ಲೀನವಾಗಿದೆ. ಅದು ಇಡೀ ಭಾರತವೇ ಹೆಮ್ಮೆ ಪಟ್ಟ ದಿನ. ಜಗತ್ತಿನ ಇತಿಹಾಸದ ಪುಟದಲ್ಲಿ ಭಾರತದ ಭೂಪಟ ರಾರಾಜಿಸಿದ ದಿನ. 140 ಕೋಟಿ ಭಾರತೀಯರು ಕಾತರದಿಂದ ಕಾದಿದ್ದ ಕನಸು ನನಸಾದ ದಿನ. ಚಂದ್ರಯಾನ-3 (Chandrayan-3) ಯಶಸ್ವಿಯಾಗಿ, ಚಂದ್ರನ ಮೇಲೆ ವಿಕ್ರಮ ಹೆಜ್ಜೆ ಇಟ್ಟ ದಿನ. ಚಂದಿರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ ಬರೆದಿತ್ತು. ಇಸ್ರೋ ವಿಜ್ಞಾನಿಗಳ ಶ್ರಮದಿಂದಚಂದ್ರನ ಮೇಲೆ ವಿಕ್ರಮನ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿತ್ತು.

ಇದನ್ನೂ ವೀಕ್ಷಿಸಿ:  ಕಾಳಿ ಹುಲಿ ಸಂರಕ್ಷಿತ ಪ್ರದೇಶ: ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಿದ ನಟ ರಿಷಬ್‌ ಶೆಟ್ಟಿ

Video Top Stories