
ನಾನ್ ಬೇಲೆಬಲ್ ವಾರೆಂಟ್; 51 ವರ್ಷದ ನಟಿ Malaika Arora ಯಾವಾಗ ಬೇಕಿದ್ರೂ ಜೈಲಿಗೆ ಹೋಗ್ತಾರೆ!
ತಮ್ಮ ಫಿಟ್ನೆಸ್ ಮತ್ತು ವೈಯಕ್ತಿಕ ಜೀವನದ ಕಾರಣದಿಂದಾಗಿ ಆಗಾಗ ಸುದ್ದಿಯಲ್ಲಿರುವ ನಟಿ ಮಲೈಕಾ ಅರೋರಾ ಸದ್ಯ ಸಂಕಷ್ಟವೊಂದಕ್ಕೆ ಸಿಲುಕಿಕೊಂಡಿದ್ದಾರೆ.
ಮುಂಬೈನಲ್ಲಿ ನಡೀತಾ ಇರೋ ವೇವ್ಸ್ ಸಭೆಯಲ್ಲಿ ಜಾಗತಿಕ ಸಿನಿಮಾರಂಗದ ಗಣ್ಯರೆಲ್ಲಾ ಭಾಗಿಯಾಗಿದ್ದಾರೆ,. ಭಾರತೀಯ ಸಿನಿರಂಗದಿಂದ ರಜನಿಕಾಂತ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ದಿಗ್ಗಜರೆಲ್ಲಾ ಭಾಗಿಯಾಗಿದ್ದಾರೆ. ಇನ್ನೂ ಈ ಜಾಗತಿಕ ಸಿನಿ ಸಮ್ಮೇಳನದಲ್ಲಿ ಪೆಹಲ್ಗಾಮ್ ದಾಳಿಯ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದು, ಉಗ್ರರ ಕೃತ್ಯವನ್ನ ಖಂಡಿಸಿದ್ದಾರೆ. ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ಕಾಶ್ಮೀರದಲ್ಲಿ ಶಾಂತಿ ನೆಲೆಯೂರುವಂತೆ ಮಾಡಲಿದ್ದಾರೆ ಅನ್ನೋ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.
ಅಜಯ್ ದೇವಗನ್ ನಟನೆಯ ರೈಡ್-2 ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬಂದಿದೆ. 10 ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಈ ಸಿನಿಮಾ ತೆರೆಗೆ ಬಂದಿದ್ದು ಮೊದಲ ದಿನ 10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇತ್ತೀಚಿಗೆ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ನೀರಸ ಪ್ರದರ್ಶನ ನೀಡ್ತಾ ಇದ್ದು, ರೈಡ್-2ಗೆ ಬಂದಿರೋ ರೆಸ್ಪಾನ್ಸ್ ನೋಡಿ ಬಾಲಿವುಡ್ ಮಂದಿ ಥ್ರಿಲ್ ಆಗಿದ್ದಾರೆ. ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ನಾನ್ ಬೇಲೆಬಲ್ ವಾರೆಂಟ್ ಹೊರಡಿಸಿದೆ. ಬಿ ಟೌನ್ ಸುಂದರಿ ಮಲೈಕಾಗೆ ಬಂಧನದ ಭೀತಿ ಕಾಡ್ತಾ ಇದೆ. ಯಾಕೆ?