
ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
ನಿಮಗೆಲ್ಲಾ ಗೊತ್ತಿರೋ ಹಾಗೆ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಮಾಡೋ ಹೊತ್ತಿಲ್ಲಿ, ರಶ್ಮಿಕಾ ಇನ್ನೂ ಕಾಲೇಜು ಹುಡುಗಿ. ಆ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಪ್ರಪೋಸ್ ಮಾಡಿದಾಗ ಒಪ್ಪಿಕೊಂಡಿದ್ರು. ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ರು. ಇದು ರಶ್ಮಿಕಾದ್ದೇ ಸ್ಟೋರಿನಾ?
ಕಳೆದ ವಾರ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ದಿ ಗರ್ಲ್‌ಫ್ರೆಂಡ್ ಸಿನಿಮಾ ಸದ್ದು ಮಾಡ್ತಾ ಇದೆ. ಈ ಸಿನಿಮಾ ಕಥೆ ಕೂಡ ಸದ್ದು ಸುದ್ದಿ ಮಾಡ್ತಾ ಇದೆ. ಯಾಕಂದ್ರೆ ಇದ್ರಲ್ಲಿ ಕೋಪಿಷ್ಟ, ಗರ್ವಿಷ್ಟ ಬಾಯ್ಫ್ರೆಂಡ್ನ ನಾಯಕಿ ತೊರೆದು ಹೋಗುವ ಕಥೆ ಇದೆ. ಮತ್ತು ಇದು ಬಹುತೇಕ ನನ್ನ ಕಥೆ ತರಹವೇ ಇದೆ ಅಂದಿದ್ದಾರೆ ರಶ್ಮಿಕಾ.
ಕಳೆದ ವಾರ ರಶ್ಮಿಕಾ ನಟಿಸಿರೋ ನಾಯಕಿ ಪ್ರಧಾನ ಸಿನಿಮಾ ದಿ ಗರ್ಲ್‌ಫ್ರೆಂಡ್ ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾದ್ರೆ ಕನ್ನಡದವರೇ ಆದ ದೀಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್ ಸ್ಟೋರಿ.
ದಿ ಗರ್ಲ್ ಫ್ರೆಂಡ್ ಸಿನಿಮಾದ ಕಥೆ ಏನು ಅಂತ ನೋಡೋದಾದ್ರೆ ಮುಗ್ಧ ಯುವತಿ ಭೂಮಾದೇವಿ ಕಾಲೇಜು ಓದಲಿಕ್ಕೆ ಹೈದರಾಬಾದ್ಗೆ ಬರ್ತಾಳೆ. ತನ್ನ ಕಾಲೇಜಿನ ಬೇರೆ ಬ್ರ್ಯಾಂಚ್ ವಿದ್ಯಾರ್ಥಿ ವಿಕ್ರಮ್ ಜೊತೆ ಪರಿಚಯ, ಸ್ನೇಹ ಶುರುವಾಗಿ ಬಹಳ ಬೇಗ ಪ್ರೀತಿಯಲ್ಲಿ ಬೀಳ್ತಾರೆ. ಆದರೆ ವಿಕ್ರಮ್ ನ ಒರಟು ಗರ್ವಿಷ್ಟ ಸ್ವಭಾವ, ಟಾಕ್ಸಿಕ್ ವರ್ತನೆ ಆಕೆಗೆ ಸಹಿಸುವುದಕ್ಕೆ ಸಾಧ್ಯವಾಗೋದಿಲ್ಲ. ಅದನ್ನ ಯಾರ ಬಳಿ ಕೂಡ ಹೇಳಿಕೊಳ್ಳೋದಕ್ಕೆ ಸಾಧ್ಯವಾಗದೇ ರಿಲೇಷನ್ಶಿಪ್ ನ ಹೇಗೆ ಮುಂದುವರಿಸ್ತಾಳೆ, ಬ್ರೇಕಪ್ ನಂತರ ಏನೆಲ್ಲಾ ಆಗುತ್ತೆ ಅನ್ನೋದೇ ಸಿನಿಮಾ
‘ಇದು ನಂದೇ ಕಥೆ..’ ಎಂದ ರಶ್ಮಿಕಾ ಮಂದಣ್ಣ..!
ಹೌದು ದಿ ಗರ್ಲ್‌ಫ್ರೆಂಡ್ ಸಿನಿಮಾದ ಪ್ರಚಾರ ಮಾಡುವಾಗ ರಶ್ಮಿಕಾ ಒಂದು ಮಾತು ಹೇಳಿದ್ರು. ಈ ಸಿನಿಮಾದ ಕಥೆ ನನಗೆ ಬಹಳ ಹತ್ತಿರವಾದದ್ದು, ಹೆಚ್ಚು ಕಡಿಮೆ ಇದು ನಂದೇ ಕಥೆ ಅಂದಿದ್ರು.
ನಿಮಗೆಲ್ಲಾ ಗೊತ್ತಿರೋ ಹಾಗೆ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಮಾಡೋ ಹೊತ್ತಿಲ್ಲಿ, ರಶ್ಮಿಕಾ ಇನ್ನೂ ಕಾಲೇಜು ಹುಡುಗಿ. ಆ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಪ್ರಪೋಸ್ ಮಾಡಿದಾಗ ಒಪ್ಪಿಕೊಂಡಿದ್ರು. ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ರು.
ಆಧ್ರೆ ನಿಶ್ಚಿತಾರ್ಥ ಕೆಲವೇ ತಿಂಗಳಲ್ಲಿ ಮುರಿದು ಬಿದ್ದಿತ್ತು. ಮುಂದೆ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಹೆಸರು ಕೇಳಿ ಬರೋದಕ್ಕೆ ಶುರುವಾಯ್ತು. ಸದ್ಯ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ನಿಶ್ಚಿತಾರ್ಥ ಆಗಿದೆ. ಮುಂದಿನ ಫೆಬ್ರುವರಿ 26ಕ್ಕೆ ಇಬ್ಬರ ಮದುವೆ ಕೂಡ ಫಿಕ್ಸ್ ಆಗಿದೆ.
ಆದ್ರೆ ಈಗ ದಿ ಗರ್ಲ್‌ಫ್ರೆಂಡ್ ಸಿನಿಮಾ ಕಥೆ ನನ್ನದೇ ಕಥೆ ಅಂತ ರಶ್ಮಿಕಾ ಹೇಳಿರೋದು ಗುಲ್ಲೆಬ್ಬಿಸಿದೆ. ಹಾಗಿದ್ರೆ ಮಾಜಿ ಬಾಯ್ಫ್ರೆಂಡ್ನ ಗರ್ವಿಷ್ಟ, ಕೋಪಿಷ್ಟ ಅನ್ನೋ ಕಾರಣಕ್ಕೆ ರಶ್ಮಿಕಾ ರಿಜೆಕ್ಟ್ ಮಾಡಿದ್ರಾ ಅಂತ ಚರ್ಚೆ ಶುರುವಾಗಿದೆ.
ರಶ್ಮಿಕಾ , ರಕ್ಷಿತ್ನ ತೊರೆದಿದ್ದಕ್ಕೆ ಕಾರಣ ಹೇಳಿರಲಿಲ್ಲ. ಇದೀಗ ವಿಜಯ್ ದೇವರಕೊಂಡ ಜೊತೆ ಮದುವೆ ಆಗ್ತಿರೋ ಹೊತ್ತಲ್ಲಿ, ದಿ ಗರ್ಲ್‌ಫ್ರೆಂಡ್ ಮೂಲಕ ಕಾರಣ ಹೇಳಿದ್ರಾ..? ಬಿಟ್ಯಾಕ್ ಹೋದೆ ಅನ್ನೋ ಗುಟ್ಟು ಬಿಚ್ಚಿಟ್ರಾ..? ರಶ್ಮಿಕಾ ವರಸೆ ಹಾಗೇ ಇದೆ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...