AI ಟೆಕ್ನಾಲಜಿಯ ಕರಾಳ ಮುಖ, ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ!

ಯುವಕರ ದಾರಿ ತಪ್ಪಿಸುತ್ತಿದೆಯಾ AI ಟೆಕ್ನಾಲಜಿ..? ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ..! ಯುವಕರನ್ನು ಕೊಲೆಗಾರರನ್ನಾಗಿಸುತ್ತಿದೆಯಾ AI ಟೆಕ್ನಾಲಜಿ? 

First Published Dec 18, 2024, 6:35 PM IST | Last Updated Dec 18, 2024, 6:35 PM IST

ಇಂದು ಜಗತ್ತನ್ನು ಎಐ ತಂತ್ರಜ್ಞಾನ ಆಳುತ್ತಿದೆ. ಈ ತಂತ್ರಜ್ಞಾನದಿಂದ ಜಗತ್ತಿನಲ್ಲಿ ಅಸಾಧ್ಯವಾದದ್ದು ಸಾಧ್ಯವಾಗುತ್ತಿದೆ. ಕಠೀಣವಾಗಿರೋದು ಸುಲಭವಾಗುತ್ತಿದೆ. ಹಾಗೆನೇ ಎಐ ಬಳಕೆಯಿಂದ ಅತೀ ಕಡಿಮೆ ಸಮಯದಲ್ಲಿ ದೊಡ್ಡ ದೊಡ್ಡ ಕೆಲಸಗಳು ಅದ್ಬುತವಾಗಿ ಆಗುತ್ತಿವೆ. ತಂತ್ರಜ್ಞಾನ ಯಾವುದೇ ಆಗಿರ್ಲಿ ಅದರ ಬಳಕೆ ನಮಗೆ ಸರಿಯಾಗಿ ತಿಳಿಯದೇ ಹೋದರೆ ಅದರಿಂದ ಹೆಚ್ಚಿನ ಪ್ರಮಾಣದ ಅಪಾಯವನ್ನು ನಾವು ಎದುರಿಸಬೇಕಾಗುತ್ತದೆ. ಎಐ ತಂತ್ರಜ್ಞಾನ ಕುರಿತು ಇಲ್ಲಿ ಆಗಿರೋದು ಅದೇ. ಈ ಎಐ ತಂತ್ರಜ್ಞಾನ ಹರೆಯದ ಯುವಕರ ಮೇಲೆ ಅತೀವ ಕೆಟ್ಟ ಪರಿಣಾಮ ಬೀರುತ್ತಿದೆ. ಎಐ ತಂತ್ರಜ್ಞಾನಕ್ಕೆ ಯುವಕರು ಹೆಚ್ಚು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ಅಮೆರಿಕದ ಒಬ್ಬ ಯುವಕ ಎಐ ತಂತ್ರಜ್ಞಾನ ಪ್ರಭಾವಕ್ಕೊಳಗಾಗಿ ಹೆತ್ತವರನ್ನೇ ಕೊಲೆ ಮಾಡಿದ್ದಾನೆ.