
Mekedatu Padayatre : ಅಣ್ಣಾಮಲೈಗೆ ಬಿಜೆಪಿ ಕುಮ್ಮಕ್ಕು - 2 ವರ್ಷ ಸರ್ಕಾರ ಏನ್ ಮಾಡಿದೆ..?
ಸದ್ಯ ಕಾಂಗ್ರೆಸ್ ಹಮ್ಮಿಕೊಂಡ ಮೇಕೆದಾಟು ಪಾದಯಾತ್ರೆಗೆ ಕೊರೊನಾ ನಿಯಮಾವಳಿಗಳು ಅಡ್ಡಿಯಾಗಿವೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ. ನಿಷೇಧಾಜ್ಞೆ ಜಾರಿಗೊಳಿಸಿದರೆ ನಾವಿಬ್ಬರೇ ನಡೆಯುತ್ತೇವೆ. ನಾನು ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದೆ. ಎರಡು ವರ್ಷದಿಂದ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಜ.06): ಸದ್ಯ ಕಾಂಗ್ರೆಸ್ (Congress) ಹಮ್ಮಿಕೊಂಡ ಮೇಕೆದಾಟು (Mekedatu) ಪಾದಯಾತ್ರೆಗೆ ಕೊರೊನಾ (Corona) ನಿಯಮಾವಳಿಗಳು ಅಡ್ಡಿಯಾಗಿವೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ. ನಿಷೇಧಾಜ್ಞೆ ಜಾರಿಗೊಳಿಸಿದರೆ ನಾವಿಬ್ಬರೇ ನಡೆಯುತ್ತೇವೆ. ನಾನು ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆಗೆ ಡಿಪಿಆರ್ (DPR) ಮಾಡಿದ್ದೆ. ಎರಡು ವರ್ಷದಿಂದ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
Weekend Curfew ವೀಕೆಂಡ್ ಕರ್ಫ್ಯೂ ಬಗ್ಗೆ ಸಂಪುಟ ಸಭೆಯಲ್ಲಿ ಸಿಎಂ ಮಹತ್ವದ ತೀರ್ಮಾನ
ತಮಿಳುನಾಡಿಗೆ ಬಿಜೆಪಿ (BJP) ಕುಮ್ಮಕ್ಕು ನೀಡುತ್ತಿದೆ. ಅಣ್ಣಾಮಲೈಗೆ ಕುಮ್ಮಕ್ಕು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ನಾವು ನಿಯಮಾವಳಿಗಳನ್ನು ಪಾಲಿಸಿಯೇ ನಡೆಯುತ್ತೇವೆ ಎಂದಿದ್ದಾರೆ.