Karnataka election:ದುನಿಯಾ ವಿಜಯ್‌, ಲೂಸ್‌ ಮಾದ ಜೊತೆ ಸಿದ್ದರಾಮಯ್ಯ ಅಬ್ಬರದ ಪ್ರಚಾರ

ಮಾಜಿ ಸಿಎಂ ಸಿದ್ದರಾಮಯ್ಯ ವರುಣದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ದುನಿಯಾ ವಿಜಯ್, ನಿಶ್ವಿಕಾ ನಾಯ್ಡು ಮತ್ತು ಲೂಸ್ ಮಾದ ಯೋಗಿ ಜೊತೆ ಸಿದ್ದರಾಮಯ್ಯ ಪ್ರಚಾರ ಮಾಡಿದರು.

Share this Video
  • FB
  • Linkdin
  • Whatsapp

ಮೈಸೂರು: ವರುಣದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡುತ್ತಿದ್ದು, ತಾರೆಯರ ದಂಡೇ ಹರಿದು ಬಂದಿದೆ. ದುನಿಯಾ ವಿಜಯ್‌, ಯೋಗೀಶ್‌ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಿದ್ದಾರೆ. ನಟರನ್ನ ನೋಡಲು ಅಭಿಮಾನಿಗಳ ದಂಡು ಹರಿದು ಬರುತ್ತಿದ್ದು, 23 ಗ್ರಾಮಗಳಲ್ಲಿ ಸಿದ್ದರಾಮಯ್ಯ ರೋಡ್ ಶೋ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ನಟ-ನಟಿಯರ ಮೇಲೆ ಬೆಂಬಲಿಗರು ಹೂಮಳೆಗರೆಯುತ್ತಿದ್ದರು. ಚುನಾವಣಾ ಪ್ರಚಾರ ನಡೆಯುತ್ತಿದ್ದರೂ ಸಿನಿಮಾ ತಾರೆಯರ ಅಭಿಮಾನಿಗಳು ವಾಹನ ಹತ್ತಿ ಸೆಲ್ಫೀಗಳನ್ನು ತೆಗೆದುಕೊಳ್ಳುತ್ತಿದ್ದರು. ಇನ್ನೂ ಬಿಜೆಪಿ ಪರವಾಗಿ ಸುದೀಪ್, ಜಗ್ಗೇಶ್, ಶೃತಿ, ತಾರಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ವರುಣಾದಲ್ಲಿ ಸಿದ್ದುಗೆ ಕಾಡ್ತಿದ್ಯಾ“ಲಿಂಗಾಯತ” ಭಯ.. ಲಿಂಗಾಯತರ ಕ್ಷಮೆ ಕೇಳಿದ್ದೇಕೆ ಸಿದ್ದರಾಮಯ್ಯ..?

Related Video