SSLC Exam Update: ಎಸ್‌ಎಸ್‌ಎಲ್‌ಸಿ(SSCL) ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯಮಟ್ಟದ 1ನೇ ಸಂಕಲನಾತ್ಮಕ ಮೌಲ್ಯಮಾಪನವನ್ನು (ಎಸ್‌ಎ-1) ಸೆ.23 ರಿಂದ 30 ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.
ಬೆಂಗಳೂರು (ಸೆ.18): ಎಸ್‌ಎಸ್‌ಎಲ್‌ಸಿ(SSCL) ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯಮಟ್ಟದ 1ನೇ ಸಂಕಲನಾತ್ಮಕ ಮೌಲ್ಯಮಾಪನವನ್ನು (ಎಸ್‌ಎ-1) ಸೆ.23 ರಿಂದ 30 ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರಿಪರೇಟರಿ ಮಾದರಿಯಲ್ಲೇ ಎಸ್‌ಎ-1 ಪರೀಕ್ಷೆ
ಪೂರ್ವ ಸಿದ್ಧತಾ ಪರೀಕ್ಷೆಯ ಮಾದರಿಯಲ್ಲೇ . ಎಸ್‌ಎ 1 ನಡೆಸಲು ಸೂಚಿಸಿದ್ದು, ಇದಕ್ಕೆ ಏಕರೂಪವಾದ ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದಲೇ ಸಿದ್ಧಪಡಿಸಿ ನೀಡಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ವೇಳಾಪಟ್ಟಿ ಪ್ರಕಾರ, ಸೆ.23 ಪ್ರಥಮ ಭಾಷೆ, 24ರಂದು ವಿಜ್ಞಾನ, 25ಕ್ಕೆ ತೃತೀಯ ಭಾಷೆ, 26ರಂದು ಸಮಾಜ ವಿಜ್ಞಾನ, 28ಕ್ಕೆ ಗಣಿತ, 29ರಂದು ದ್ವಿತೀಯ ಭಾಷೆ ಮತ್ತು ಕೊನೆಯ ದಿನ ಸೆ.30ರಂದು ದೈಹಿಕ ಶಿಕ್ಷಣ/ವೃತ್ತಿ ಶಿಕ್ಷಣ/ಮೌಲ್ಯ ಶಿಕ್ಷಣ ವಿಷಯಗಳಿಗೆ ಎಸ್‌ಎ-1 ನಡೆಯಲಿದೆ
ಸೆ.23ರಿಂದ 30 ವರೆಗೆ ನಡೆಯಲಿದೆ ಪರೀಕ್ಷೆ
ಮಂಡಳಿ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆಗಳನ್ನು ಆಯುಕ್ತರ ಕಚೇರಿ ಮೇಲ್ವಿಚಾರಣೆಯಲ್ಲಿ ವೇಳಾಪಟ್ಟಿಯಂತೆ ಆಯಾ ಪರೀಕ್ಷಾ ದಿನ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರ ಲಾಗಿನ್‌ಗೆ ಕಳುಹಿಸಿಕೊಡಲಾಗುತ್ತದೆ. ಅವರು ಅದನ್ನು ಡೌನ್‌ಲೋಡ್ ಮಾಡಿ ಮುದ್ರಿಸಿಕೊಂಡು ಎಸ್‌ಎ-1 ಪರೀಕ್ಷೆ ನಡೆಸಬೇಕೆಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಬಗ್ಗೆ ಭಯ, ಆತಂಕ ಹೋಗಲಾಡಿಸುವುದು ಹಾಗೂ ವಾರ್ಷಿಕ ಪರೀಕ್ಷೆಯನ್ನು ಎಷ್ಟು ಕಟ್ಟುನಿಟ್ಟಾಗಿ ಹಾಗೂ ಪಾರದರ್ಶವಾಗಿ ನಡೆಸಲಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟು ಅಕ್ರಮಗಳ ಬಗ್ಗೆ ಆಲೋಚಿಸದೆ ಉತ್ತಮ ರೀತಿಯಲ್ಲಿ ಪರೀಕ್ಷೆಗೆ ಸಿದ್ಧಗೊಳ್ಳುವಂತೆ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


