ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇವತ್ತು ದಿಢೀರ್ ಅಂತಾ ಬಿಸಿಎಂ ಹಾಸ್ಟೆಲ್ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಮಾತನ್ನಾಡಿ, ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ ಎಂಬ ಭರವಸೆಯನ್ನ ನೀಡಿದರು.
- Home
- News
- State
- Karnataka News Live: ಬಿಸಿಎಂ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಮುದ್ದೆ ಸವಿದು ಕೊಟ್ಟ ಮಾತು ಏನು ಗೊತ್ತಾ?
Karnataka News Live: ಬಿಸಿಎಂ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಮುದ್ದೆ ಸವಿದು ಕೊಟ್ಟ ಮಾತು ಏನು ಗೊತ್ತಾ?

ಬಳ್ಳಾರಿ: ಬಳ್ಳಾರಿಯಲ್ಲಿ ಬಿಜೆಪಿ ನಡೆಸಿದ ಬಳ್ಳಾರಿ ಚಲೋ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ವತಿಯಿಂದ ಸಮಾವೇಶ ಆಯೋಜಿಸುವ ಕುರಿತು ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲೇ ಬಳ್ಳಾರಿಯಲ್ಲಿ ಕಾಂಗ್ರೆಸ್ನ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಶಾಸಕ ಬಿ. ನಾಗೇಂದ್ರ ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಹಾಗೂ ಸರ್ಕಾರದ ಸಾಧನೆ ಜನರಿಗೆ ತಿಳಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗುತ್ತಿದೆ. ಸಾವಿರಾರು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, ಈ ಸಾಧನೆ ಜನರ ಮುಂದಿಡುವುದು ಸಮಾವೇಶದ ಉದ್ದೇಶವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೂಚನೆ ಮೇರೆಗೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ.
ಸಮಾವೇಶಕ್ಕೆ ಮುಖ್ಯಮಂತ್ರಿ ಶಿವಕುಮಾರ ಅವರಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಈ ಕುರಿತು ಎಲ್ಲ ನಾಯಕರೊಂದಿಗೆ ಮತ್ತಷ್ಟು ಚರ್ಚೆ ನಡೆಸಿದ ಬಳಿಕ ಸಮಾವೇಶದ ದಿನಾಂಕ ನಿಗದಿಪಡಿಸಲಾಗುವುದು. ಸಮಾವೇಶದ ಸಿದ್ಧತೆ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.
Karnataka News Live 13 September 2026ಬಿಸಿಎಂ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಮುದ್ದೆ ಸವಿದು ಕೊಟ್ಟ ಮಾತು ಏನು ಗೊತ್ತಾ?
Karnataka News Live 13 September 2026BRICS - ಮಿಸ್ಟರ್ ಮುನೀರ್ ನೀನು ಲಾಯಕ್ಕಿಲ್ಲ!; ಪಾಕಿಸ್ತಾನದ ಬಣ್ಣ ಬಯಲು ಮಾಡಿ ಪಿಎಂ ಮೋದಿ 'ಅಸಲಿ ಕಿಂಗ್' ಎಂದ ಇರಾನ್ ಪತ್ರಕರ್ತ!
ಇರಾನಿನ ಪತ್ರಕರ್ತ ಬಾಸಿಮ್ ಲಾಲೆಹ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರನ್ನು ತರಾಟೆಗೆ ತೆಗೆದುಕೊಂಡು, ಪಾಕಿಸ್ತಾನದ ವಿಫಲ ರಾಜತಾಂತ್ರಿಕತೆಯನ್ನು ಬಯಲು ಮಾಡಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 13 September 2026ಸೂರ್ಯವಂಶಿನಾ ಬೆಂಚ್‌ನಲ್ಲಿ ಕೂರಿಸಿ ಬ್ಯಾಟಿಂಗ್‌ಗೆ ಬಂದ ಸಂಜು, ಮತ್ತೆ ನಂಬಿಕೆ ಹುಸಿ ಮಾಡಿ ಪೆವಿಲಿಯನ್‌ಗೆ ಓಡಿದ್ರು
ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದರೂ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಗಲ್ಲ. ಅವಕಾಶ ಸಿಕ್ಕರೆ ಅದನ್ನ ಎರಡು ಕೈಗಳಿಂದ ಹಾಗೆಯೇ ಬಾಚಿಕೊಳ್ಳಬೇಕು ಎಂಬ ಮಾತಿದೆ. ಆದರೆ ಈ ಸಂಜು ಸ್ಯಾಮ್ಸನ್‌ಗೆ ಅದೆಷ್ಟು ಅವಕಾಶ ನೀಡಬೇಕೋ ಗೊತ್ತಿಲ್ಲ. ಈ ಸ್ಟೋರಿ ಓದಿ.
Karnataka News Live 13 September 2026BRICS ಡಿನ್ನರ್ ಕಂಟ್ರೋವರ್ಸಿ ಶೆಡೌನ್; ಕಲಾಂ ಕುರಿತು ಐಸ್‌ಲ್ಯಾಂಡ್ ಮಾಜಿ ಅಧ್ಯಕ್ಷ ಹೇಳಿದ ಆ ಮಾತು ಫುಲ್ ವೈರಲ್!
ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ನಾಯಕರಿಗೆ ಸಸ್ಯಾಹಾರಿ ಭೋಜನ ನೀಡಿದ್ದಕ್ಕೆ ಎದ್ದಿದ್ದ ವಿವಾದಕ್ಕೆ, ಐಸ್‌ಲ್ಯಾಂಡ್‌ನ ಮಾಜಿ ಅಧ್ಯಕ್ಷರು ತೆರೆ ಎಳೆದಿದ್ದಾರೆ. ಈ ಕುರಿತು ಸಂಪೂರ್ಣ ವಿವರವನ್ನು ನೋಡಿಕೊಂಡು ಬರೋಣ ಬನ್ನಿ.
Karnataka News Live 13 September 2026Cricket - 18 ದಿನಗಳ ಹಿಂದಷ್ಟೇ ವಿಶ್ವ ದಾಖಲೆ, ಈಗ ಪ್ಲೇಯಿಂಗ್-11ನಿಂದ ಔಟ್! ವೈಭವ್‌ಗೆ ಮುಳುವಾಗಿದ್ದೇನು? ಇಲ್ಲಿದೆ ಅಸಲಿ ಕಾರಣ!
18 ದಿನಗಳ ಹಿಂದೆ ವಿಶ್ವ ದಾಖಲೆ ಬರೆದಿದ್ದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಪ್ಲೇಯಿಂಗ್-11ನಿಂದ ಅಚ್ಚರಿಯ ರೀತಿಯಲ್ಲಿ ಕೈಬಿಡಲಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ
Karnataka News Live 13 September 2026Mysuru - ಗಣೇಶನ ಗಲಾಟೆಯಲ್ಲಿ ಟ್ರೆಂಡ್ ಆದ ಪೊಲೀಸ್; ಹಳೇ ಹೋರಾಟ ನೆನಪಿಸಿ ಹೊಸ ಟ್ವಿಸ್ಟ್ ಕೊಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ!
ಟಿ. ನರಸೀಪುರದಲ್ಲಿ ಗಣೇಶೋತ್ಸವದ ವೇಳೆ ಆರಂಭವಾದ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇನ್ಸ್‌ಪೆಕ್ಟರ್ ಅಮಾನತಿಗೆ ಪಟ್ಟು ಹಿಡಿದು ಸಿಂಹ ಧರಣಿ ನಡೆಸಿದರೆ, ಇತ್ತ ಸಿಂಹ ಅವರೇ ಹಳೆಯ ದಲಿತ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.
Karnataka News Live 13 September 2026ಯಾರೋ ಇವೆಲ್ಲ, ಬಾರ್ ಮುಂದೆಯೇ ಕೂತು ಗುಂಡು ತುಂಡು ಪಾರ್ಟಿ, ರೊಚ್ಚಿಗೆದ್ದ ಜನ
ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತ ಬಾರ್ ಮುಂಭಾಗವೇ ಕೂತು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ. ಹಬ್ಬದ ನೆಪದಲ್ಲಿ ಬಾರ್ ಮುಂದೆ ಕೂತು ಮೋಜು ಮಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
Karnataka News Live 13 September 2026Cricket - ಬಾತ್‌ರೂಮ್‌ಗೆ ಹೋಗಿ ಬಿಕ್ಕಿ ಬಿಕ್ಕಿ ಅಳ್ತೀನಿ!; ಕಣ್ಣೀರಿಡುತ್ತಲೇ ಮನದಾಳದ ಸತ್ಯ ಒಪ್ಪಿಕೊಂಡ ಸ್ಮೃತಿ ಮಂಧನಾ
ಮೈದಾನದಲ್ಲಿ ಸದಾ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗುವ ಈ ಧೈರ್ಯಶಾಲಿ ಬ್ಯಾಟರ್, ಇತ್ತೀಚೆಗೆ ಪ್ರಸಿದ್ಧ ಯೂಟ್ಯೂಬರ್ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಭಾವನಾತ್ಮಕ ಸತ್ಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 13 September 2026ಅಕ್ಷಯ್ ಕುಮಾರ್ ಕನ್ನಡದಲ್ಲಿ ವಿಷ್ಣುವರ್ಧನ್ ಜೊತೆ ಮಾಡಿದ ಏಕೈಕ ಸಿನಿಮಾವುದು - ಕ್ಲೈಮ್ಯಾಕ್ಸ್ ಅದ್ಭುತ!
ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ನಟಿಸಿದ 1993ರ ‘ವಿಷ್ಣು ವಿಜಯ’ ಸಿನಿಮಾ ಕಥೆ ಇಲ್ಲಿದೆ. ಅಕ್ಷಯ್ ಕುಮಾರ್ ಅವರ ಏಕೈಕ ಕನ್ನಡ ಸಿನಿಮಾ, ಮಾಫಿಯಾ ವಿರುದ್ಧದ ಪೊಲೀಸ್ ಹೋರಾಟ ಹಾಗೂ ಚಿತ್ರದ ವಿಶೇಷತೆಗಳ ಮಾಹಿತಿ ತಿಳಿಯಿರಿ.
Karnataka News Live 13 September 2026ಡೈನೋಸಾರ್, ದೈತ್ಯ ಜೀವಿ, ದೇವಸ್ಥಾನಗಳು - ರಾಜಮೌಳಿ ಸಿನಿಮಾದ ಫೋಟೋ ನೋಡಿ ಫ್ಯಾನ್ಸ್ ಶಾಕ್!
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಸಿನಿಮಾದ ಸೆಟ್‌ನದ್ದು ಎನ್ನಲಾದ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಡೈನೋಸಾರ್, ದೈತ್ಯ ಜೀವಿ, ದೇವಸ್ಥಾನಗಳು ಇವೆ. ಈ ಫೋಟೋ ನಿಜಾನಾ? ಸಿನಿಮಾ ಕಥೆಯೇನು? ಇಲ್ಲಿದೆ ಮಾಹಿತಿ.
Karnataka News Live 13 September 2026ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಗಿದ್ದೇ ತಪ್ಪಾಯ್ತು, ಚಿನ್ನ ಕದ್ದಳೆಂದ ಆರೋಪಕ್ಕೆ ಬಡಪಾಯಿ ನೀಲವ್ವಗೆ ಪೊಲೀಸರಿಂದ ಕರೆಂಟ್ ಶಾಕ್!
ಹಾವೇರಿ ಜಿಲ್ಲೆಯಲ್ಲಿ, ವರಮಹಾಲಕ್ಷ್ಮಿ ಹಬ್ಬದಂದು ದೇವರ ಚಿನ್ನ ಕದ್ದ ಆರೋಪದ ಮೇಲೆ ನೀಲವ್ವ ಎಂಬ ಬಡ ಮಹಿಳೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ, ತೀವ್ರ ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
Karnataka News Live 13 September 2026Cricket - ಬೀದಿಯಲ್ಲಿದ್ದವನನ್ನು ಬೆಳೆಸಿ ಕ್ರಿಕೆಟ್ ಹೀರೋ ಮಾಡಿದ; ಕೊನೆಗೆ ಅದೇ ಆಟಗಾರನಿಂದ ಸಿಕ್ಕಿದ್ದೇನು ಗೊತ್ತಾ?
ಭಾರತೀಯ ಕ್ರಿಕೆಟಿಗನ ಕೋಚ್ ಒಬ್ಬರು ಯಶಸ್ಸು ಗಳಿಸಿದ ನಂತರ ತಮ್ಮ ಶಿಷ್ಯ ತನ್ನನ್ನು ಬೆಳೆಸಿದ ಗುರುವಿನಿಂದ ದೂರವಾಗಿದ್ದು, ಈ ಬಗ್ಗೆ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 13 September 202615 ವರ್ಷಗಳಿಂದ ಆ ಕಟ್ಟಡಕ್ಕೆ ಯಾರೂ ಹೋಗಿಲ್ಲ - ಪ್ರಶಾಂತ್ ನೀಲ್ ಅರ್ಪಿಸುವ '418' ರೂಮ್‌ನಲ್ಲೇನಿದೆ?
‘418’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ಅರ್ಪಿಸುತ್ತಿರುವ ಈ ಕನ್ನಡ ಹಾರರ್ ಥ್ರಿಲ್ಲರ್‌ಗೆ ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. 15 ವರ್ಷಗಳಿಂದ ಮುಚ್ಚಿರುವ ರಹಸ್ಯಮಯ ಕಟ್ಟಡ ಮತ್ತು ರೂಮ್ ನಂಬರ್ 418ರ ಸುತ್ತ ಕಥೆ ಸಾಗುತ್ತದೆ.
Karnataka News Live 13 September 2026Bengaluru - ನದಿ ಸ್ವಚ್ಛಗೊಳಿಸಿ ಖ್ಯಾತಿ ಪಡೆದಿದ್ದ ಬಿಟ್ಟು ತಬಾಹಿಗೆ ಶಾಕ್! ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಏನಾಯ್ತು?
Karnataka News Live 13 September 2026ಅಚ್ಚರಿ ಮೂಡಿಸಿದ ಕೊಹ್ಲಿ ನಡೆ, ದಿಢೀರ್ ಉಪಮುಖ್ಯಮಂತ್ರಿ ಭೇಟಿಯಾಗಿ ಮಹತ್ವದ ಮಾತುಕತೆ
ವಿರಾಟ್ ಕೊಹ್ಲಿ ಹಾಗೂ ಏಕನಾಥ್ ಶಿಂಧೆ ಲಂಡನ್‌ನಲ್ಲಿ ದಿಢೀರ್ ಭೇಟಿಯಾಗಿದ್ದಾರೆ. ಇಬ್ಬರು ಗಣ್ಯರ ಭೇಟಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಕೊಹ್ಲಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನ್ನಾಡಿರುವ ಏಕನಾಥ್ ಶಿಂಧೆ.. ಕೊಹ್ಲಿಯನ್ನ ಗುಣಗಾನ ಮಾಡಿದರು.
Karnataka News Live 13 September 2026ಈ ಜಿಲ್ಲೆಯ ಗಣೇಶ ವಿಗ್ರಹಗಳಿಗೆ ಆಂಧ್ರ, ತೆಲಂಗಾಣದಲ್ಲೂ ಭರ್ಜರಿ ಬೇಡಿಕೆ - ಇಲ್ಲಿದೆ ಕಾರಣ!
ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಗ್ರಹ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.
Karnataka News Live 13 September 2026Mysuru - ಯಾವ ಬೀದಿಯೂ ನಿಷೇಧಿತವಲ್ಲ, ಯಾವನ್ ಏನ್ ಮಾಡ್ಕೊಳ್ತಾನೋ ನೋಡ್ತೀವಿ; ಖಾಕಿ ವರ್ಸಸ್ ಖಾದಿ ಸಮರಕ್ಕೆ ಸಿ.ಟಿ. ರವಿ ಎಂಟ್ರಿ!
Karnataka News Live 13 September 2026R Ashok - ಡಿಕೆಶಿ ನೀನು ಹಿಂದೂ ಹೌದೋ ಅಲ್ವೋ? ಈಗ ಬಂದು ತೋರಿಸು.. ಸಿಎಂಗೆ ಆರ್ ಅಶೋಕ್ ಹಾಕಿದ ಸವಾಲೇನು?
T Narasipur: ಟಿ.ನರಸೀಪುರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ಪಾಕಿಸ್ತಾನದಲ್ಲಿದ್ದೀವಾ ಎಂದು ಪ್ರಶ್ನಿಸಿದ ಅವರು, ಗಣೇಶ ಮೆರವಣಿಗೆಗೆ ನಿರ್ಬಂಧ ಖಂಡಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Karnataka News Live 13 September 2026Bagalakote - ಮಾಳಿಂಗರಾಯನ ಪವಾಡ, ಹಿಂದಿನ ದಾಖಲೆಗಳು ಉಡೀಸ್! ಲಕ್ಷ ಲಕ್ಷಕ್ಕೆ ಸೇಲ್ ಆಯ್ತು ಪವಿತ್ರ ತೆಂಗಿನಕಾಯಿ!
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
Karnataka News Live 13 September 2026ಜಾರಕಿಹೊಳಿ ಮೇಲಿನ ED ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ - ಯತ್ನಾಳ್ ಹೀಗ್ಯಾಕೆ ಹೇಳಿದರು?
ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ. ಓದಿ..