ಮೈದಾನದಲ್ಲಿ ಸದಾ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗುವ ಈ ಧೈರ್ಯಶಾಲಿ ಬ್ಯಾಟರ್, ಇತ್ತೀಚೆಗೆ ಪ್ರಸಿದ್ಧ ಯೂಟ್ಯೂಬರ್ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಭಾವನಾತ್ಮಕ ಸತ್ಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆರಂಭಿಕ ಆಟಗಾರ್ತಿ ಮತ್ತು ಸಾಂಗ್ಲಿಯ ಹೆಮ್ಮೆಯ ಸೂಪರ್‌ಸ್ಟಾರ್ ಸ್ಮೃತಿ ಮಂಧಾನ ಪ್ರಸ್ತುತ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಲ್ಲಿದ್ದಾರೆ. ಏಷ್ಯಾ ಕಪ್ ಸೇರಿದಂತೆ ಪ್ರಮುಖ ಸರಣಿಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಲು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸ್ಮೃತಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಮೈದಾನದಲ್ಲಿ ಸದಾ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗುವ ಈ ಧೈರ್ಯಶಾಲಿ ಬ್ಯಾಟರ್, ಇತ್ತೀಚೆಗೆ ಪ್ರಸಿದ್ಧ ಯೂಟ್ಯೂಬರ್ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಭಾವನಾತ್ಮಕ ಸತ್ಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಾದ ಏರಿಳಿತಗಳು ಹಾಗೂ ಭಾವನೆಗಳನ್ನು ನಿಯಂತ್ರಿಸುವ ವಿಧಾನದ ಬಗ್ಗೆ ಅವರು ಸತ್ಯ ಬಿಚ್ಚಿಟ್ಟಿದ್ದಾರೆ.
ಏನಿದು 30 ನಿಮಿಷಗಳ ನೆನಪಿನ ನಿಯಮ?
ಸಂದರ್ಶನದಲ್ಲಿ ತಮ್ಮ ಭಾವನೆಗಳ ಬಗ್ಗೆ ಮಾತನಾಡಿದ ಸ್ಮೃತಿ, "ಸಾಮಾನ್ಯವಾಗಿ ನಾನು ಅತಿಯಾಗಿ ಭಾವುಕಳಾಗುವ ವ್ಯಕ್ತಿಯಲ್ಲ. ನನ್ನ ಸುತ್ತಲಿರುವ ಜನರು ಹೆಚ್ಚು ಭಾವನಾತ್ಮಕವಾಗಿ ಯೋಚಿಸಿದಾಗ, ನಾನು ತೀರಾ ಪ್ರಾಯೋಗಿಕವಾಗಿ (Practical) ಆಲೋಚಿಸುತ್ತೇನೆ. ಆದರೆ, ಅಪರೂಪಕ್ಕೊಮ್ಮೆ ನನ್ನೊಳಗಿನ ಭಾವನಾತ್ಮಕ ಜೀವಿಯೂ ಹೊರಬರುತ್ತದೆ. ಅಂತಹ ಸಂದರ್ಭಗಳಲ್ಲಿ ನಾನು '30 ನಿಮಿಷಗಳ ನಿಯಮ'ವನ್ನು (30-minute rule) ಅನುಸರಿಸುತ್ತೇನೆ" ಎಂದರು.
ಮೈದಾನದ ಹೊರಗಿನ ನೋವು ಹೊರಹಾಕಿದ ಸ್ಮೃತಿ!
ಮುಂದುವರಿದು ಮಾತನಾಡಿದ ಅವರು, "ಕೆಲವೊಮ್ಮೆ ಮನಸ್ಸಿಗೆ ಕಷ್ಟವಾಗಿ ಅಳಲೇಬೇಕು ಎನಿಸಿದರೆ, ನಾನು ಬಾತ್‌ರೂಮ್‌ಗೆ ಹೋಗಿ ಶವರ್ ಆನ್ ಮಾಡಿ ಕಣ್ಣೀರು ಸುರಿಸುತ್ತೇನೆ. ನನ್ನ ಜೀವನದಲ್ಲಿ ಕೆಲವೇ ಕೆಲವು ಅತ್ಯಂತ ಆಪ್ತರಿದ್ದಾರೆ, ಅವರ ಮುಂದೆ ಮಾತ್ರ ನನ್ನ ನಿಜವಾದ ಭಾವನೆಗಳು ಹೊರಬರುತ್ತವೆ ಎಂದು ಮೈದಾನದ ಹೊರಗಿನ ತಮ್ಮ ಏಕಾಂತದ ನೋವನ್ನು ಹೊರಹಾಕಿದರು.
ನನ್ನ ಜೀವನದ ಸಣ್ಣ ವಿಷಯಗಳಿಗೆ ನಾನು ಅಳುವುದಿಲ್ಲ!
ಪಾಡ್‌ಕ್ಯಾಸ್ಟ್‌ನಲ್ಲಿ ರಾಜ್ ಶಮಾನಿ ಅವರು 'ನೀವು ಕೊನೆಯ ಬಾರಿಗೆ ಯಾವಾಗ ಅತ್ತಿದ್ದೀರಿ?' ಎಂದು ಕೇಳಿದಾಗ, ಸ್ಮೃತಿ ಹಗುರವಾದ ನಗೆಯೊಂದಿಗೆ, "ಅದೊಂದು ಒಳ್ಳೆಯ ಪ್ರಶ್ನೆ. ನನಗೆ ಕಷ್ಟದ ದಿನಗಳಲ್ಲಿ ಅತ್ತಿದ್ದು ಅಷ್ಟಾಗಿ ನೆನಪಿಲ್ಲ. ನಾನು ಸಿನಿಮಾಗಳನ್ನು ನೋಡುವಾಗ ಮಾತ್ರ ಅಳುತ್ತೇನೆ. ನಿಜ ಜೀವನದ ಘಟನೆಗಳಿಗೆ ನಾನು ಎಂದಿಗೂ ಕಣ್ಣೀರಿಟ್ಟಿಲ್ಲ. ಇತ್ತೀಚೆಗೆ 'ಮುಸಾಫಿರ್ ಕೆಫೆ' ಚಿತ್ರವನ್ನು ವೀಕ್ಷಿಸಿದಾಗ ನನಗೆ ಅಳಬೇಕು ಎನಿಸಿತು" ಎಂದು ಉತ್ತರಿಸಿದರು.
ಹಿಂದಿನ ಘಟನೆಗಳಿಗೆ ಪಶ್ಚಾತ್ತಾಪವಿಲ್ಲ!
ತಮ್ಮ ಜೀವನದ ತತ್ತ್ವಶಾಸ್ತ್ರವನ್ನು ಹಂಚಿಕೊಂಡ ಸ್ಮೃತಿ ಮಂಧಾನ, "ನಾನು ಭೂತಕಾಲದ ಘಟನೆಗಳ ಬಗ್ಗೆ ಕುಳಿತು ಗೋಳಾಡುವ ವ್ಯಕ್ತಿಯಲ್ಲ. ಯಾರು ಭೂತಕಾಲದಿಂದ ಕಲಿಯಲು ಬಯಸುತ್ತಾರೋ, ಅವರು ಹಳೆಯ ವಿಷಯಗಳಿಗೆ ಪಶ್ಚಾತ್ತಾಪ ಪಡುವುದಿಲ್ಲ. ಒಂದೇ ವಿಷಯವನ್ನು ಹಿಡಿದುಕೊಂಡು ಅಳುತ್ತಾ ಕುಳಿತರೆ ಅದರಿಂದ ನಿಮಗೆ ಏನು ಸಿಗುತ್ತದೆ? ಅದರಿಂದ ನೀವು ಮುಂದಿನ ಸವಾಲುಗಳಿಗೆ ಸಿದ್ಧರಾಗುವುದಿಲ್ಲ ಮತ್ತು ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾನು ಯಾವುದೇ ಘಟನೆಗೂ ಹೆಚ್ಚು ಕಾಲ ವಿಷಾದಿಸುವುದಿಲ್ಲ, ಎಂದು ಸ್ಪಷ್ಟಪಡಿಸಿದರು.
ಪ್ರೇರಣಾದಾಯಿಕ ಪಯಣ!
ಸಾಂಗ್ಲಿಯ ಸರಳ ಹುಡುಗಿಯಿಂದ ಹಿಡಿದು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರ್ತಿಯಾಗಿ ಬೆಳೆದ ಸ್ಮೃತಿ ಮಂಧಾನ ಅವರ ಈ ಪ್ರಾಯೋಗಿಕ ಮನೋಭಾವ ಮತ್ತು ಮಾನಸಿಕ ದೃಢತೆ, ಇಂದು ಲಕ್ಷಾಂತರ ಅಭಿಮಾನಿಗಳಿಗೆ ಹಾಗೂ ಯುವ ಕ್ರೀಡಾಪಟುಗಳಿಗೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.


