ಹಾವೇರಿ ಜಿಲ್ಲೆಯಲ್ಲಿ, ವರಮಹಾಲಕ್ಷ್ಮಿ ಹಬ್ಬದಂದು ದೇವರ ಚಿನ್ನ ಕದ್ದ ಆರೋಪದ ಮೇಲೆ ನೀಲವ್ವ ಎಂಬ ಬಡ ಮಹಿಳೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ, ತೀವ್ರ ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾವೇರಿ (ಸೆ.13): ದೇವರ ಮೇಲಿನ ಚಿನ್ನ ಕದ್ದರೆಂಬ ಆರೋಪದ ಮೇಲೆ ಬಡ ಮಹಿಳೆಗೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ಟಾರ್ಚರ್ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಕರೆಂಟ್ ಶಾಕ್ ಟಾರ್ಚರ್‌ಗೆ ನೀಲವ್ವ ಎಂಬ ಮಹಿಳೆ ತೀವ್ರ ಅಸ್ವಸ್ಥಗೊಂಡು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಪಕ್ಕದ ಮನೆಗೆ ಹೋಗಿದ್ದೇ ತಪ್ಪಾಯ್ತು!
ದೇವರ ಮೇಲಿನ ಚಿನ್ನ ಕಳವು
ಕಳೆದ ವರಮಹಾಲಕ್ಷ್ಮಿ ಹಬ್ಬದ ದಿನ ಪಕ್ಕದ ಮನೆಯಲ್ಲಿ ಪೂಜೆ ಕಾರ್ಯಕ್ರಮ ಇತ್ತು. ಅಕ್ಕಪಕ್ಕದ ಮನೆಯವರು ಎಂದಮೇಲೆ ಪೂಜೆ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಸಾಮಾನ್ಯ. ಅದೇ ರೀತಿ ನಾಗರಾಜ್ ಸುಂಕದ ಎಂಬುವವರ ಮನೇಲಿ ವರಮಹಾಲಕ್ಷ್ಮಿ ಪೂಜೆ ಬರುವಂತೆ ಕರೆದಿದ್ದರಂತೆ. ಹೀಗಾಗಿ ನೀಲಮ್ಮ ಹಬ್ಬದ ದಿನ ಅವರ ಮನೆಗೆ ಹೋಗಿದ್ದಾರೆ. ನೀಲಮ್ಮ ಅಷ್ಟೇ ಅಲ್ಲದೆ ಆಕೆಯೊಂದಿಗೆ ನೆರೆ ಮನೆಯ ಸುಮಾರು 11 ಜನ ಮಹಿಳೆಯರು ಉಡಿ ತುಂಬಿಸಿಕೊಳ್ಳಲು ಹೋಗಿದ್ರು. ಆದ್ರೆ ಈಗ ಹೋಗಿದ್ದೇ ತಪ್ಪಾಯ್ತು ಅನ್ನಿಸುವಂತಿದೆ ನೀಲಮ್ಮ ಪರಿಸ್ಥಿತಿ.
ವಿಚಾರಣೆ ನೆಪದಲ್ಲಿ ಕರೆಂಟ್ ಶಾಕ್!
ನಾಗರಾಜ ಸುಂಕದ ಕುಟುಂಬಸ್ಥರು ನೆರೆಮನೆಯವರು ಸೇರಿ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಭಾಗಿಯಾಗಿದ್ರು. ಇಷ್ಟು ಜನರ ನಡುವೆ ದೇವರ ಮೇಲಿನ ಚಿನ್ನದ ಅಭರಣ ಕಳ್ಳತನವಾಗಿದೆ. ಯಾರು ಕದ್ದರೆಂದು ತಿಳಿದಿಲ್ಲ. ಆದರೆ ಈ ಬಗ್ಗೆ ನಾಗರಾಜ್ ಸುಂಕದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಂಕಾಪುರ ಪೊಲೀಸರಿಗೆ ಮನೆಗೆ ಬಂದಿದ್ದವರ ಹೆಸರು ಮನೆ ವಿಳಾಸ ಎಲ್ಲ ಮಾಹಿತಿ ನೀಡಿದ್ದಾರೆ. ಅದರಂತೆ ನೀಲವ್ವ ಹೋಗಿದ್ದರಿಂದ ಪೊಲೀಸರು ಅನುಮಾನಗೊಂಡು ಆಕೆಯನ್ನ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಕರೆಂಟ್ ಶಾಕ್ ಕೊಟ್ತಿದ್ದಾರೆ. ಕರೆಂಟು ಶಾಕ್ ನಾನು ಕದ್ದಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದಾರೆಂದು ಬಂಕಾಪುರ ಪೊಲೀಸರ ವಿರುದ್ಧ ನೀಲವ್ವ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಕರೆಂಟ್ ಶಾಕ್‌ನಿಂದ ನೀಲವ್ವ ಅಸ್ವಸ್ಥ
ಪಕ್ಕದ ಮನೆಯವರು ಕರೆದ್ರು ಅಂತಾ ವರಮಹಾಲಕ್ಹ್ಮಿ ಹಬ್ಬಕ್ಕೆ ಹೊಗಿ 'ಕಳ್ಳಿ' ಅನ್ನಿಸಿಕೊಳ್ಳಬೇಕಾಗಿದ್ದು ಒಂದು ಕಡೆ, ಚಿನ್ನ ಕಳ್ಳತನ ಮಾಡದಿದ್ರೂ ಅನುಮಾನಗೊಂಡ ಪೊಲೀಸರು ಬಡಪಾಯಿ ಮಹಿಳೆಗೆ ಕರೆಂಟ್ ಶಾಕ್ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ನೀಲವ್ವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಾನು ಚಿನ್ನ ಕದ್ದಿಲ್ಲ ಸ್ವಾಮಿ. ನಾವು ಬಡವರು, ಹಣ ಎಲ್ಲಿಂದ ತರಬೇಕು..? ಅಂತಾ ನೋವಿನಿಂದ ನೀಲ್ಲವ್ವ ಕಣ್ಣೀರು ಹಾಕುತ್ತಿದ್ದಾರೆ.


