10:23 PM (IST) Sep 03

India Latest News Live 3 September 202664 ಬಾಲ್‌ನಲ್ಲಿ 124 ರನ್ ಚಚ್ಚಿದ ಮಂಧಾನ - ಒಂದೇ ಪಂದ್ಯದಲ್ಲಿ ಎರಡು ಬೃಹತ್ ವಿಶ್ವ ದಾಖಲೆ

ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅವರು ಅತಿ ಹೆಚ್ಚು ಅಂತರಾಷ್ಟ್ರೀಯ ಶತಕಗಳು ಮತ್ತು ಅತಿ ಹೆಚ್ಚು ರನ್‌ಗಳ ವಿಶ್ವ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Read Full Story
10:16 PM (IST) Sep 03

India Latest News Live 3 September 2026ಮೀಸಲಾತಿಯನ್ನು ಬೆಂಬಲಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್​ - ಆದ್ರೆ ಇಲ್ಲೊಂದಿದೆ ಸಕತ್​ ಟ್ವಿಸ್ಟ್​

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಕೃತಕ ಬುದ್ಧಿಮತ್ತೆಯಿಂದ (AI) ಉಂಟಾಗುವ ಉದ್ಯೋಗ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಮನುಷ್ಯರಿಗೆ ಉದ್ಯೋಗಗಳನ್ನು ಖಚಿತಪಡಿಸಿಕೊಳ್ಳಲು 'ಮಾನವ ಮೀಸಲಾತಿ'ಯ ಪರಿಕಲ್ಪನೆಯನ್ನು ಅವರು ಪ್ರಸ್ತಾಪಿಸಿದ್ದು, ಇದು ಭಾರತದ ಸದ್ಯದ ಮೀಸಲಾತಿ ಚರ್ಚೆಯ ಹಿನ್ನೆಲೆಯಲ್ಲಿ ಹೊಸ ಆಯಾಮ ನೀಡಿದೆ.

Read Full Story
08:56 PM (IST) Sep 03

India Latest News Live 3 September 2026ಹಬ್ಬದ ತಯಾರಿ ನಡುವೆ, ನಡು ರಸ್ತೆಯಲ್ಲಿ ಧ್ವಂಸಗೊಂಡ ಗಣೇಶ ಮೂರ್ತಿ

ತೆಲಂಗಾಣದ ಸಿದ್ದಿಪೇಟೆಯಲ್ಲಿ ಗಣೇಶ ಚತುರ್ಥಿ ಸಂಭ್ರಮದ ನಡುವೆ ದುರ್ಘಟನೆಯೊಂದು ನಡೆದಿದೆ. ಮಂಟಪಕ್ಕೆ ಸಾಗಿಸುತ್ತಿದ್ದ ಬೃಹತ್ ಗಣೇಶ ವಿಗ್ರಹವಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ, ವಿಗ್ರಹವು ರಸ್ತೆಗೆ ಬಿದ್ದು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ಘಟನೆಯ ದೃಶ್ಯಗಳು ವೈರಲ್ ಆಗಿದ್ದು ಭಕ್ತರಲ್ಲಿ ವಿಷಾದ ಮೂಡಿಸಿದೆ.

Read Full Story
08:16 PM (IST) Sep 03

India Latest News Live 3 September 202620 ವರ್ಷ ಚಿಕ್ಕವಳಾದ ನೀನು ವಿಧವೆಯಂತೆ ಬಾಳೋದು ಇಷ್ಟವಿಲ್ಲ- ತಲಾಖ್​ ಕೊಡುವೆ - ಉಗ್ರ ಯಾಸಿನ್​​ ಮಲಿಕ್​ ಪತ್ರ

ಕಾಶ್ಮೀರಿ ಪಂಡಿತ ನರ್ಸ್ ಸರಳಾ ಭಟ್ ಹತ್ಯೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ, ಭಯೋತ್ಪಾದಕ ಯಾಸಿನ್ ಮಲಿಕ್ ತನ್ನ ಪತ್ನಿಗೆ ತಲಾಖ್ ನೀಡಲು ಮುಂದಾಗಿದ್ದಾನೆ. ಈಗಾಗಲೇ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈತ, ತನ್ನ ಪತ್ನಿಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.
Read Full Story
07:52 PM (IST) Sep 03

India Latest News Live 3 September 2026BCCI ಮೀಟಿಂಗ್‌ಗೂ ಮೊದಲು ಫುಲ್ ಖುಷ್, ಆಮೇಲೆ ಹೊರಬರುವಾಗ ಬೆಪ್ಪನಂತಾದ ಗಂಭೀರ್..! ವಿಡಿಯೋ ವೈರಲ್

ಬಿಸಿಸಿಐ ಮಹತ್ವದ ಸಭೆ ನಡೆಸಿದ್ದು, ಟೀಂ ಇಂಡಿಯಾದ ಸರಣಿ ಸೋಲು ಮತ್ತು 2027ರ ವಿಶ್ವಕಪ್ ಸಿದ್ಧತೆ ಬಗ್ಗೆ ಚರ್ಚಿಸಿದೆ. ಸಭೆಯ ನಂತರ ಶುಭ್‌ಮನ್ ಗಿಲ್ ಮತ್ತು ಲಕ್ಷ್ಮಣ್ ನಗುತ್ತಿದ್ದರೆ, ಕೋಚ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ಮುಖದಲ್ಲಿ ಚಿಂತೆ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
Read Full Story
07:11 PM (IST) Sep 03

India Latest News Live 3 September 2026ನನ್ನ 6 ಅಂಕಿಯ ಸಂಬಳದ ಕೆಲಸ ಯಾಕೆ ತ್ಯಜಿಸಿದೆ ಎಂದರೆ.... ಭಾರತೀಯ ಟೆಕ್ಕಿಯ ಕಾರಣ ಕೇಳಿ ನೆಟ್ಟಿಗರು ಫಿದಾ!

ಬೃಹತ್ ಟೆಕ್ ಕಂಪನಿಯಲ್ಲಿದ್ದ ತಮ್ಮ ಲಕ್ಷಗಟ್ಟಲೆ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ ವೃತ್ತಿಪರರೊಬ್ಬರು, ತಮ್ಮದೇ ಆದ ದೃಷ್ಟಿಕೋನವನ್ನು ರೂಪಿಸುವ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ನಿರ್ಧಾರ ಕೈಗೊಂಡಿದ್ದಾರೆ. ಸಾಂಪ್ರದಾಯಿಕ ವೃತ್ತಿಜೀವನವನ್ನು ತೊರೆದು, ಸ್ವಾತಂತ್ರ್ಯ ಮತ್ತು ಜಾಗತಿಕ ಪೌರತ್ವ ಬಯಸುತ್ತಿರುವ ಅವರು, ತಮ್ಮ ಈ ಹೊಸ ಪಯಣವನ್ನು ಹಂಚಿಕೊಳ್ಳುತ್ತಿದ್ದಾರೆ.

Read Full Story
06:58 PM (IST) Sep 03

India Latest News Live 3 September 2026ನನ್ನ ಹತ್ತಿರ ಟಿಪ್ಸ್ ಪಡೆದು ಈಗ ನಮ್ಮ ವಿರುದ್ಧವೇ ಟ್ವೀಟ್ ಮಾಡ್ತಾನೆ - ಭಾರತೀಯ ಕ್ರಿಕೆಟಿಗನ ಮೇಲೆ ಅಕ್ರಮ್ ಆಕ್ರೋಶ

ಟೀಂ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟರ್ ಇರ್ಫಾನ್ ಪಠಾಣ್ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಕ್ರಮ್ ಆಕ್ರೋಶಕ್ಕೆ ಕಾರಣ ಏನು ಗೊತ್ತಾ? ಈ ಸ್ಟೋರಿಯಲ್ಲಿದೆ ವಿವರ.

Read Full Story
06:58 PM (IST) Sep 03

India Latest News Live 3 September 2026ಇಂದಿನ BCCI ಮಹತ್ವದ ಮೀಟಿಂಗ್‌ಗೆ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದೇಕೆ? ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್

ಭಾರತೀಯ ಕ್ರಿಕೆಟ್‌ನ ಕೆಲ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ಗುರುವಾರ ಬಿಸಿಸಿಐ ಸಭೆ ಕರೆದಿತ್ತು, ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಪ್ರವಾಸಗಳಲ್ಲಿ ಎದುರಾದ ವೈಫಲ್ಯದ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ವರದಿಯಾಗಿತ್ತು. ಈ ಸಭೆಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದಾರೆ.

Read Full Story
06:39 PM (IST) Sep 03

India Latest News Live 3 September 2026ಸನ್ಯಾಸತ್ವ ಹಾದಿ ಹಿಡಿದ ಬಿಲಿಯನೇರ್, ಐಸ್‌ಕ್ರೀಮ್ ಸಾಮ್ರಾಜ್ಯ ಮಾರಾಟ, ಕಾಡಿನ ವಾಸಕ್ಕೆ ಪತ್ನಿ ಮಗಳ ತೊರೆದ ಕೋಟಿಪತಿ!

ಥೈಲ್ಯಾಂಡ್‌ನ ಪ್ರಸಿದ್ಧ 'ಹಾವೆಲ್ಸ್' ಐಸ್‌ಕ್ರೀಮ್ ಬ್ರ್ಯಾಂಡ್‌ನ ಮಾಲೀಕರಾದ ಸಿರಿಪಾಂಗ್ ಅಕ್ಕರಶ್ರೀಯುಕ್, ಸನ್ಯಾಸಿಯಾಗುವ ಉದ್ದೇಶದಿಂದ ತಮ್ಮ ₹47.36 ಕೋಟಿ ಮೌಲ್ಯದ ವ್ಯವಹಾರವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಬೌದ್ಧ ಧರ್ಮದಲ್ಲಿ 'ಅರಹಂತ' ಸ್ಥಿತಿ ತಲುಪುವ ಗುರಿಯೊಂದಿಗೆ, ಅವರು ತಮ್ಮ ಉದ್ಯಮವನ್ನು ಮುನ್ನಡೆಸಬಲ್ಲ ಸೂಕ್ತ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದಾರೆ.
Read Full Story
06:33 PM (IST) Sep 03

India Latest News Live 3 September 2026ಸಮೋಸಾ ಪ್ರಿಯರೇ ಎಚ್ಚರ - ಬೆಂಗಳೂರಿಗೆ ಸಪ್ಲೈ ಆಗುವ ಈ ಘಟಕ ನೋಡಿದ್ರೆ ಜೀವನದಲ್ಲಿ ತಿನ್ನೋದೇ ಇಲ್ಲ

ಸಮೋಸಾ ಪ್ರಿಯರು ಓದಲೇಬೇಕಾದ ಸ್ಟೋರಿ ಇದು. ನೀವು ಟೀ ಅಂಗಡಿಗಳ ಮುಂದೆ ನಿಂತು ತಿನ್ನುವ ಒಂದು ಸಮೋಸಾ ನಿಮ್ಮ ಆರೋಗ್ಯಕ್ಕೆ ಕಂಟಕವಾಗಬಹುದು. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಿಗುವ ಸಮೋಸಾ ಯಾವ ರೀತಿ ತಯಾರಾಗುತ್ತಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
06:29 PM (IST) Sep 03

India Latest News Live 3 September 2026'ಪ್ರೀತಿ ಉಳಿಸಿಕೊಳ್ಳಲು ಅವನ ಕಾಲು ಹಿಡಿದು ಬೇಡಿಕೊಂಡಿದ್ದೆ' - ಬಿಗ್ ಬಾಸ್ ನಟಿ ಬಿಚ್ಚಿಟ್ರು ಬ್ರೇಕಪ್ ನೋವು

ಬಿಗ್ ಬಾಸ್ ಬಳಿಕ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಪ್ರೇಮ ವೈಫಲ್ಯದ ಬಗ್ಗೆ ನಟಿ ಹಾಗೂ ನಿರೂಪಕಿ ಆರ್ಯ ಬಡಾಯಿ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಒಂದು ಕಡೆ ಲಾಕ್‌ಡೌನ್, ಮತ್ತೊಂದು ಕಡೆ ಬ್ರೇಕಪ್‌ನಿಂದ ತೀವ್ರವಾಗಿ ಕುಸಿದು ಹೋಗಿದ್ದ ದಿನಗಳನ್ನು ಆರ್ಯ ನೆನಪಿಸಿಕೊಂಡಿದ್ದಾರೆ.

Read Full Story
05:41 PM (IST) Sep 03

India Latest News Live 3 September 2026ಡೆಲ್ ಟೆಕ್ನಾಲಜೀಸ್ ಫೋರಮ್ 2026 - ಉದ್ಯೋಗಿಗಳ ಕೈಗೆ ಶಕ್ತಿಯುತ AI ಕಂಪ್ಯೂಟಿಂಗ್ ತಂದ ಡೆಲ್!

ಕೃತಕ ಬುದ್ಧಿಮತ್ತೆಯ (AI) ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದಿಸಿ, ಡೆಲ್ ಟೆಕ್ನಾಲಜೀಸ್ ಭಾರತದಲ್ಲಿ ತನ್ನ ಹೊಸ ವಾಣಿಜ್ಯ ಸಾಧನಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ಪೋರ್ಟ್‌ಫೋಲಿಯೊದಲ್ಲಿ ಡೆಲ್ ಪ್ರೊ ಲ್ಯಾಪ್‌ಟಾಪ್‌ಗಳು, ಪ್ರಿಸಿಶನ್ ವರ್ಕ್‌ಸ್ಟೇಷನ್‌ಗಳು, ಮತ್ತು ಸುಧಾರಿತ ಮಾನಿಟರ್‌ಗಳು ಸೇರಿದ್ದು, ಇವು 'ಆನ್-ಡಿವೈಸ್ AI' ಸಾಮರ್ಥ್ಯಗಳೊಂದಿಗೆ ಉದ್ಯಮಗಳ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿವೆ.
Read Full Story
05:38 PM (IST) Sep 03

India Latest News Live 3 September 2026ಮತ್ತೊಂದು ಮಹತ್ವದ ಟೂರ್ನಿಯಿಂದಲೂ ಗೌತಮ್ ಗಂಭೀರ್ ಔಟ್? ತೆರೆ ಮರೆಗೆ ಸರಿತಾರಾ ಟೀಂ ಇಂಡಿಯಾ ಹೆಡ್‌ ಕೋಚ್‌?

ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಸದ್ಯ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಟೀಂ ಇಂಡಿಯಾ, ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದೆ. ಈ ಟೂರ್ನಿಗೆ ಹೆಡ್‌ ಕೋಚ್ ಆಗಿ ಗಂಭೀರ್ ಇರುವುದಿಲ್ಲ..!

Read Full Story
05:31 PM (IST) Sep 03

India Latest News Live 3 September 2026ಡಿವಿಡೆಂಡ್‌ ಮೂಲಕ ನಿಮ್ಮ ಸಂಪತ್ತು ಹೆಚ್ಚಿಸುವ ದೇಶದ ಟಾಪ್ 10 ಷೇರುಗಳು ಇವು, ಶೇ.20ರವರೆಗೆ ಸಿಗುತ್ತೆ ಲಾಭಾಂಶ

ರೇಲಿಗೇರ್ ಬ್ರೋಕಿಂಗ್ ವರದಿಯ ಪ್ರಕಾರ, ಸೆಪ್ಟೆಂಬರ್ 2026ಕ್ಕೆ ಅನ್ವಯಿಸುವಂತೆ ಅಧಿಕ ಡಿವಿಡೆಂಡ್ ನೀಡುವ ಟಾಪ್ 10 ಷೇರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪಿಟಿಸಿ ಇಂಡಿಯಾ ಅಗ್ರಸ್ಥಾನದಲ್ಲಿದೆ.

Read Full Story
05:16 PM (IST) Sep 03

India Latest News Live 3 September 2026ರಿಂಕು ಸಿಂಗ್ ವೃತ್ತಿ ಬದುಕಿಗೆ BCCI ಕೊನೆ ಮೊಳೆ; ಚೆನ್ನಾಗಿ ಆಡ್ತಿದ್ದರೂ ಯಾಕೆ ಆಯ್ಕೆ ಮಾಡ್ತಿಲ್ಲ, ಅಸಲಿ ಕತೆ ಇಲ್ಲಿದೆ

ಟೀಂ ಇಂಡಿಯಾದ ಗ್ರೇಟ್ ಫಿನಿಶರ್ ರಿಂಕು ಸಿಂಗ್ ವೃತ್ತಿ ಬದುಕಿಗೆ ಬಿಸಿಸಿಐ ಕೊನೆ ಮೊಳೆ ಹೊಡೆಯಿತಾ ಎಂಬ ಪ್ರಶ್ನೆ ಮೂಡಿದೆ. ದೇಶಿ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರೂ ಬಿಸಿಸಿಐ ಆಯ್ಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.

Read Full Story
04:48 PM (IST) Sep 03

India Latest News Live 3 September 2026ಸಿಎಸ್‌ಕೆ ತಂಡದಲ್ಲಿ ನಾನು ಈ ರೋಲ್ ಮಾಡೊಲ್ಲವೆಂದ ಧೋನಿ..! ಹೊಸ ಬಾಂಬ್ ಸಿಡಿಸಿದ ಚೆನ್ನೈ ಮಾಜಿ ಕ್ರಿಕೆಟಿಗ

ಬೆಂಗಳೂರು: ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಯ ರೋಲ್ ಬಗ್ಗೆ ಸದ್ಯ ಚರ್ಚೆಯಲ್ಲಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಮಾಜಿ ಐಪಿಎಲ್ ಕ್ರಿಕೆಟಿಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏನದು? ನೋಡೋಣ ಬನ್ನಿ.

Read Full Story
04:47 PM (IST) Sep 03

India Latest News Live 3 September 2026ನಿಮ್ಮ ಮೆದುಳು ಶಾರ್ಪ್‌ ಆಗಬೇಕೇ? AIIMS ತಜ್ಞ ವೈದ್ಯರು ಶಿಫಾರಸು ಮಾಡಿದ ಈ ಐದು ಆಹಾರ ಸೇವಿಸಿ

ನಾವು ಸೇವಿಸುವ ಆಹಾರವು ನಮ್ಮ ಮೆದುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದೆಯೇ? ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಮತ್ತು ಏಮ್ಸ್ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದಿರುವ ಖ್ಯಾತ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಮೆದುಳಿನ ಕಾರ್ಯಕ್ಷಮತೆ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ 5 ಅದ್ಭುತ ಆಹಾರಗಳನ್ನು ಹಂಚಿಕೊಂಡಿದ್ದಾರೆ.

Read Full Story
04:40 PM (IST) Sep 03

India Latest News Live 3 September 2026Viral Content - ಮೆಟ್ರೋದಲ್ಲಿ ಅದೊಂದು 'ನಿಗೂಢ' ಕೆಲಸ, ಜಸ್ಟ್ 20 ಗಂಟೆಯಲ್ಲಿ 6.5 ಕೋಟಿ ವಿವ್ಯೂಸ್ ಪಡೆದ ಯುವಕ!

ದೆಹಲಿ ಮೆಟ್ರೋದಲ್ಲಿ ಯುವಕನೋರ್ವ ತನ್ನ ಮೊಬೈಲ್ ಅನ್ನು ಕಿಟಕಿಗೆ ಅಂಟಿಸಿ ವಿಡಿಯೋ ಮಾಡಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾನೆ. ಸಿನಿಮಾ ಶೈಲಿಯ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ವೀಕ್ಷಣೆ ಪಡೆದು ವೈರಲ್ ಆಗಿದ್ದು, ಫೋನ್ ವಾಪಸ್ ಪಡೆದಿದ್ದು ಹೇಗೆ ಎಂಬುದು ನಿಗೂಢವಾಗಿದೆ.
Read Full Story
03:48 PM (IST) Sep 03

India Latest News Live 3 September 2026ಭಯಪಡಿಸಿ, ನಗಿಸಿ ₹180 ಕೋಟಿ ಬಾಚಿದ ಹಾರರ್ ಸಿನಿಮಾ - ಈಗಲೂ ಒಟಿಟಿಯಲ್ಲಿ ಫುಲ್ ಟ್ರೆಂಡಿಂಗ್!

2018ರಲ್ಲಿ ಬಿಡುಗಡೆಯಾದ ಹಾರರ್-ಕಾಮಿಡಿ ಸಿನಿಮಾ. ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ಈ ಚಿತ್ರ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಹಲವು ವರ್ಷಗಳ ಬಳಿಕವೂ ಸಿನಿಮಾ ಒಟಿಟಿಯಲ್ಲಿ ಟ್ರೆಂಡಿಂಗ್ ಆಗಿದೆ.

Read Full Story
03:35 PM (IST) Sep 03

India Latest News Live 3 September 2026ಡ್ರೈವಿಂಗ್ ಲೈಸೆನ್ಸ್ ನೆಪ ಹೇಳಿ ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಮಾಡೋ ಹಾಗಿಲ್ಲ - ಪಶ್ಚಿಮ ಬಂಗಾಳ ಕೋರ್ಟ್ ಮಹತ್ವದ ತೀರ್ಪು!

ಡ್ರೈವಿಂಗ್ ಲೈಸೆನ್ಸ್‌ನಲ್ಲಿನ ದೋಷಗಳ ಕಾರಣ ನೀಡಿ ವಾಹನ ವಿಮಾ ಕ್ಲೇಮ್‌ಗಳನ್ನು ಏಕಾಏಕಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಗ್ರಾಹಕ ಆಯೋಗ ಮಹತ್ವದ ತೀರ್ಪು ನೀಡಿದೆ. ಚಾಲಕನ ಬಳಿ ಎರಡು ಲೈಸೆನ್ಸ್‌ಗಳಿದ್ದ ಪ್ರಕರಣವೊಂದರಲ್ಲಿ, ವಿಮಾ ಕಂಪನಿಯ ವಾದವನ್ನು ತಳ್ಳಿಹಾಕಿದ ಆಯೋಗ, ಪಾಲಿಸಿದಾರರಿಗೆ ₹3.5 ಲಕ್ಷ ಪರಿಹಾರ ಮತ್ತು ಬಡ್ಡಿ ಪಾವತಿಸುವಂತೆ ಆದೇಶಿಸಿದೆ.
Read Full Story