- Home
- Sports
- Cricket
- ಸಿಎಸ್‌ಕೆ ತಂಡದಲ್ಲಿ ನಾನು ಈ ರೋಲ್ ಮಾಡೊಲ್ಲವೆಂದ ಧೋನಿ..! ಹೊಸ ಬಾಂಬ್ ಸಿಡಿಸಿದ ಚೆನ್ನೈ ಮಾಜಿ ಕ್ರಿಕೆಟಿಗ
ಸಿಎಸ್‌ಕೆ ತಂಡದಲ್ಲಿ ನಾನು ಈ ರೋಲ್ ಮಾಡೊಲ್ಲವೆಂದ ಧೋನಿ..! ಹೊಸ ಬಾಂಬ್ ಸಿಡಿಸಿದ ಚೆನ್ನೈ ಮಾಜಿ ಕ್ರಿಕೆಟಿಗ
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಯ ರೋಲ್ ಬಗ್ಗೆ ಸದ್ಯ ಚರ್ಚೆಯಲ್ಲಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಮಾಜಿ ಐಪಿಎಲ್ ಕ್ರಿಕೆಟಿಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏನದು? ನೋಡೋಣ ಬನ್ನಿ.

ಧೋನಿ ಐಪಿಎಲ್ ಭವಿಷ್ಯ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು, ಧೋನಿಯನ್ನು ಅನ್‌ಕ್ಯಾಪ್ಡ್ ರೂಲ್ಸ್ ಬಳಸಿಕೊಂಡು ಕೇವಲ 4 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿತ್ತು. ಆದರೆ ಗಾಯದ ಸಮಸ್ಯೆಯಿಂದ ಧೋನಿ ಮೈದಾನಕ್ಕಿಳಿದಿರಲಿಲ್ಲ. ಇದೀಗ ಮುಂಬರುವ ಐಪಿಎಲ್ ಸೀಸನ್‌ನಲ್ಲೂ ಧೋನಿ ಆಡುವ ಬಗ್ಗೆ ಇನ್ನು ಯಾವುದೇ ಖಚಿತತೆ ಇಲ್ಲ.
ಧೋನಿಗೆ ಇಂಪ್ಯಾಕ್ಟ್ ಆಟಗಾರನಾಗಿರುವುದು ಇಷ್ಟವಿಲ್ಲ
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಯನ್ನು ಕೇವಲ ಇಂಪ್ಯಾಕ್ಟ್ ಆಟಗಾರನ ರೂಪದಲ್ಲಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ಧೋನಿಗೆ ಇಂಪ್ಯಾಕ್ಟ್ ಆಟಗಾರನ ರೋಲ್ ನಿಭಾಯಿಸುವುದು ಇಷ್ಟವಿಲ್ಲವೆಂದು ಸಿಎಸ್‌ಕೆ ತಂಡದ ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
20 ಓವರ್ ಮೈದಾನಕ್ಕಿಳಿಯಲು ಧೋನಿ ಒಲವು
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೈದಾನಕ್ಕಿಳಿದಾಗ ಧೋನಿ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬಯಸುತ್ತಾರೆ. ಕೇವಲ ಬ್ಯಾಟಿಂಗ್‌ಗಾಗಿ ಮಾತ್ರ ಆಟದಲ್ಲಿ ಭಾಗವಹಿಸುವ ಬದಲು, 20 ಓವರ್‌ಗಳ ಇನಿಂಗ್ಸ್‌ನಾದ್ಯಂತ ಮೈದಾನದಲ್ಲಿಯೇ ಇರುವುದು ಇದಕ್ಕೆ ಅಗತ್ಯವಾಗಿರುತ್ತದೆ. ಅದನ್ನೇ ಧೋನಿ ಹೆಚ್ಚು ಇಷ್ಟಪಡುತ್ತಾರೆ ಎಂದು ಬದ್ರಿನಾಥ್ ಹೇಳಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಮೈದಾನಕ್ಕಿಳಿಯಲು ಬಯಸುತ್ತಿರುವ ಧೋನಿ
ತಾನು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವುದಿಲ್ಲ ಎಂದು ಅವರು ಸ್ವತಃ ನನಗೆ ಹೇಳಿದ್ದಾರೆ. ಅವರು ತಮ್ಮನ್ನು ಪೂರ್ಣಾವಧಿಯ ವಿಕೆಟ್-ಕೀಪರ್ ಆಗಿ ಪರಿಗಣಿಸುತ್ತಾರೆ; ಅಂದರೆ, ಅವರು ಪಂದ್ಯದ ಪೂರ್ತಿ 20 ಓವರ್‌ಗಳ ಕಾಲ ಮೈದಾನದಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ಇಂಪ್ಯಾಕ್ಟ್ ಆಟಗಾರನ ಪಾತ್ರ ನಿಭಾಯಿಸಲು ಬಯಸುತ್ತಿಲ್ಲ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮೈದಾನದಲ್ಲಿದ್ರೆ ಸಿಎಸ್‌ಕೆ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಇಂಪ್ಯಾಕ್ಟ್ ಆಟಗಾರನಾಗಿರುವ ಬಗ್ಗೆ ಬದ್ರಿನಾಥ್ ಮಾತು
ಅವರ ದೇಹವು ದೀರ್ಘಕಾಲದ ಆಟದ ಒತ್ತಡವನ್ನು ತಡೆದುಕೊಳ್ಳಲಾರದು ಎಂದು ಸ್ವತಃ ಫ್ಲೆಮಿಂಗ್ ಕೂಡ ಹೇಳಿದ್ದಾರೆ. ಅವರು ಕೇವಲ 16ನೇ ಓವರ್‌ನ ನಂತರ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ ಮತ್ತು ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಹೀಗೆ ಅವರ ಪಾತ್ರ ಸೀಮಿತವಾಗಿರುವುದರಿಂದ, 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಅವರು ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದು ಬದ್ರಿನಾಥ್ ಹೇಳಿದ್ದಾರೆ.
ಹೊಸ ಸಂಚಲನ ಮೂಡಿಸಿದ ಬದ್ರಿನಾಥ್ ಹೇಳಿಕೆ
ಒಂದು ಕಡೆ ಸಿಎಸ್‌ಕೆ ತಂಡದಲ್ಲಿ ಧೋನಿ ಪಾಲು ಕೇಳಿದ್ದಾರೆ. ಸಿಎಸ್‌ಕೆ ಹಾಗೂ ಧೋನಿ ನಡುವಿನ ಬಾಂಧವ್ಯ ಹಳಸಿದೆ ಎನ್ನುವ ಚರ್ಚೆ ಜೋರಾಗಿರುವ ಬೆನ್ನಲ್ಲೇ ಬದ್ರಿನಾಥ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಧೋನಿ ಮುಂದಿನ ಸೀಸನ್ ಐಪಿಎಲ್‌ನಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಕಣಕ್ಕಿಳಿಯುತ್ತಾರೋ ಅಥವಾ ಇಂಪ್ಯಾಕ್ಟ್ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

