- Home
- Entertainment
- 'ಪ್ರೀತಿ ಉಳಿಸಿಕೊಳ್ಳಲು ಅವನ ಕಾಲು ಹಿಡಿದು ಬೇಡಿಕೊಂಡಿದ್ದೆ': ಬಿಗ್ ಬಾಸ್ ನಟಿ ಬಿಚ್ಚಿಟ್ರು ಬ್ರೇಕಪ್ ನೋವು
'ಪ್ರೀತಿ ಉಳಿಸಿಕೊಳ್ಳಲು ಅವನ ಕಾಲು ಹಿಡಿದು ಬೇಡಿಕೊಂಡಿದ್ದೆ': ಬಿಗ್ ಬಾಸ್ ನಟಿ ಬಿಚ್ಚಿಟ್ರು ಬ್ರೇಕಪ್ ನೋವು
ಬಿಗ್ ಬಾಸ್ ಬಳಿಕ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಪ್ರೇಮ ವೈಫಲ್ಯದ ಬಗ್ಗೆ ನಟಿ ಹಾಗೂ ನಿರೂಪಕಿ ಆರ್ಯ ಬಡಾಯಿ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಒಂದು ಕಡೆ ಲಾಕ್‌ಡೌನ್, ಮತ್ತೊಂದು ಕಡೆ ಬ್ರೇಕಪ್‌ನಿಂದ ತೀವ್ರವಾಗಿ ಕುಸಿದು ಹೋಗಿದ್ದ ದಿನಗಳನ್ನು ಆರ್ಯ ನೆನಪಿಸಿಕೊಂಡಿದ್ದಾರೆ.

ನನ್ನನ್ನು ಬಿಟ್ಟು ಹೋಗಿದ್ದ
ಬಿಗ್ ಬಾಸ್ ನಂತರ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ದೊಡ್ಡ ಆಘಾತದ ಬಗ್ಗೆ ನಟಿ ಮತ್ತು ನಿರೂಪಕಿ ಆರ್ಯ ಬಡಾಯಿ ಈ ಹಿಂದೆ ಸಂದರ್ಶನಗಳಲ್ಲಿ ಮಾತನಾಡಿದ್ದರು. ಈಗ, ಆ ಪ್ರೀತಿಯ ವೈಫಲ್ಯ ತನ್ನ ಮೇಲೆ ಎಷ್ಟು ಪರಿಣಾಮ ಬೀರಿತು ಎಂಬುದನ್ನು ನಟಿ ಅಶ್ವತಿ ಅಶೋಕ್ ವಿಶಾಲ್ ಅವರ ಪಾಡ್‌ಕಾಸ್ಟ್‌ನಲ್ಲಿ ಆರ್ಯ ವಿವರಿಸಿದ್ದಾರೆ. ಬಿಗ್ ಬಾಸ್ ಮುಗಿಸಿ ವಾಪಸ್ ಬಂದಾಗ, ನನಗೆ ಸಪೋರ್ಟ್ ಆಗಿ ಜೊತೆಗಿರುತ್ತಾನೆ ಎಂದು ನಾನು ನಂಬಿದ್ದ ವ್ಯಕ್ತಿ ನನ್ನನ್ನು ಬಿಟ್ಟು ಹೋಗಿದ್ದ. ಒಂದು ಕಡೆ ಲಾಕ್‌ಡೌನ್, ಇನ್ನೊಂದು ಕಡೆ ಈ ಬ್ರೇಕಪ್. ಎರಡೂ ಸೇರಿ ದೊಡ್ಡ ಕಂದಕಕ್ಕೆ ಬಿದ್ದ ಹಾಗಾಗಿತ್ತು. ರಾತ್ರಿಯಿಡೀ ನಿದ್ದೆ ಬರುತ್ತಿರಲಿಲ್ಲ. ಸುಸ್ತಾಗಿ ಬೆಳಗ್ಗೆ ತಾನಾಗಿಯೇ ಪ್ರಜ್ಞೆ ತಪ್ಪುತ್ತಿದ್ದೆ. ಇದನ್ನು ಡಿಪ್ರೆಶನ್ ಅಂತ ಕರೆಯಬಹುದಾ ಗೊತ್ತಿಲ್ಲ ಎಂದು ಆರ್ಯ ಹೇಳಿದ್ದಾರೆ.
ಸಣ್ಣ ಭರವಸೆಗಳನ್ನು ಕೊಡುತ್ತಿದ್ದ
ಅವನು ನನ್ನ ಜೊತೆ ಇದ್ದಾನೋ, ಇಲ್ಲವೋ ಅನ್ನೋದೇ ನನ್ನ ದೊಡ್ಡ ಗೊಂದಲವಾಗಿತ್ತು. ಅವನು ನೇರವಾಗಿ ಏನನ್ನೂ ಹೇಳುತ್ತಿರಲಿಲ್ಲ. ಆದರೆ, ಒಬ್ಬ ವ್ಯಕ್ತಿಯ ನಡವಳಿಕೆ ಬದಲಾದಾಗ ಆ ವ್ಯತ್ಯಾಸ ನನಗೆ ಗೊತ್ತಾಗುತ್ತಲ್ಲವೇ? ಸುಮಾರು ಒಂದು ವರ್ಷ ನಾನು ಇದಕ್ಕೊಂದು ಸ್ಪಷ್ಟತೆ ಸಿಗಲಿ ಅಂತ ಅಲೆದಾಡಿದೆ. ಒಂದು ಕಡೆ ಅವನು ನನಗೆ ಸಣ್ಣ ಸಣ್ಣ ಭರವಸೆಗಳನ್ನು ಕೊಡುತ್ತಿದ್ದ. ಅಷ್ಟೊಂದು ಪ್ರೀತಿಸುವಾಗ, ಯಾರಾದರೂ ಕೊಡುವ ಸಣ್ಣ ಭರವಸೆಯನ್ನೂ ನಾವು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ. ವಾಪಸ್ ಬರುತ್ತಾನೆ ಎಂದುಕೊಳ್ಳುತ್ತೇವೆ. ಒಂದು ಹಂತದಲ್ಲಿ, ದೇವರು ಕಣ್ಣ ಮುಂದೆ ತಂದು ನಿಲ್ಲಿಸಿದ ಹಾಗೆ ಕೆಲವು ವಿಷಯಗಳನ್ನು ನಾನೇ ಕಂಡುಹಿಡಿದೆ. ಕಣ್ಣಾರೆ ಕಂಡ ಸತ್ಯವನ್ನು ಇಲ್ಲ ಅಂತ ಹೇಳೋಕೆ ಆಗಲ್ವಲ್ಲ ಎಂದರು ಆರ್ಯ.
ಕಾಲು ಹಿಡಿದು ಬೇಡಿಕೊಂಡಿದ್ದೆ
ಆಗಲೂ ನಾನು ಅವನ, ಕಾಲು ಹಿಡಿದು ನನ್ನನ್ನು ಬಿಟ್ಟು ಹೋಗಬೇಡ ಅಂತ ಬೇಡಿಕೊಂಡಿದ್ದೆ. ಯಾಕಂದ್ರೆ, ನನಗೆ ತುಂಬಾ ಭಯಗಳಿದ್ದವು. ನಾನೊಬ್ಬಳು ಸಿಂಗಲ್ ಮದರ್, ವಿಚ್ಛೇದನ ಪಡೆದವಳು. ನ್ಯಾಷನಲ್ ಲೆವೆಲ್‌ನ ದೊಡ್ಡ ಶೋನಲ್ಲಿ ನನ್ನ ರಿಲೇಶನ್‌ಶಿಪ್ ಬಗ್ಗೆ ಖುಷಿಯಿಂದ ಮಾತನಾಡಿದ್ದೆ. ವಾಪಸ್ ಹೋದ ಮೇಲೆ ಮದುವೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದೆ. ಅದು ಮುರಿದು ಬಿತ್ತು. ಅಷ್ಟೇ ಅಲ್ಲ, ಶೋನಿಂದ ಹೊರಬಂದಾಗ ಜನ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದರು. ಇದರ ಜೊತೆಗೆ ಇದೂ ಸೇರಿದರೆ, ಜನ ಏನೆಲ್ಲಾ ಮಾತಾಡುತ್ತಾರೆ ಅನ್ನೋ ಭಯ. 'ಇವಳ ಬಿಗ್ ಬಾಸ್ ನಡವಳಿಕೆ ನೋಡಿಯೇ ಅವನು ಬಿಟ್ಟು ಹೋಗಿರಬೇಕು' ಅಂತ ಈಗಲೂ ಕೆಲವರು ಹೇಳ್ತಾರೆ. ಈ ಭಯದಿಂದಲೇ ನಾನು ಅಂದು ಅವನ ಕಾಲು ಹಿಡಿದು ಬೇಡಿಕೊಂಡಿದ್ದು ಎಂದು ಆರ್ಯ ತಮ್ಮ ನೋವನ್ನು ತೋಡಿಕೊಂಡರು.
ನನ್ನನ್ನೇ ನಾನು ಪ್ರಶ್ನಿಸಿಕೊಂಡೆ
ಕೊನೆಗೆ, ಹಲವು ಬಾರಿ ಕುಸಿದುಬಿದ್ದ ನಂತರ, ಆ ಸಂಬಂಧವನ್ನು ಮುಗಿಸಲು ನಾನೇ ನಿರ್ಧರಿಸಿದೆ. ಆ ಸಮಯ ತುಂಬಾ ಕಷ್ಟಕರವಾಗಿತ್ತು. ಬೆಳಗ್ಗೆ ಎದ್ದ ತಕ್ಷಣ ಫೋನ್ ತೆಗೆದು ಅವನ ಮೆಸೇಜ್ ಅಥವಾ ಕಾಲ್ ಬಂದಿದೆಯಾ ಅಂತ ನೋಡುತ್ತಿದ್ದೆ. ಅವನ ಸೋಶಿಯಲ್ ಮೀಡಿಯಾ ಸ್ಟಾಕ್ ಮಾಡುತ್ತಿದ್ದೆ. ಒಂದು ಹಂತಕ್ಕೆ ಈ ಸ್ಟಾಕಿಂಗ್ ನನಗೆ ಸಹಾಯ ಮಾಡಿತು. ಯಾಕಂದ್ರೆ, ನಾನು ಇಲ್ಲಿ ಕುಸಿದು ಕೂತಿದ್ದರೆ, ಅವನು ಖುಷಿಯಾಗಿ ವೆಕೇಶನ್‌ಗೆ ಹೋಗುತ್ತಿರುವ ಫೋಟೋ, ಸ್ಟೇಟಸ್‌ಗಳನ್ನು ನೋಡಲಾರಂಭಿಸಿದೆ. ಅವನು ತನ್ನ ಜೀವನದಲ್ಲಿ ಮುಂದೆ ಸಾಗುತ್ತಿದ್ದಾನೆ, ನೀನು ಏನು ಮಾಡುತ್ತಿದ್ದೀಯಾ ಅಂತ ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ಹೀಗೆ ನಿಧಾನವಾಗಿ ನನ್ನ ಕಡೆ ಗಮನ ಹರಿಸಲು ಶುರು ಮಾಡಿದೆ. ಹಂತ ಹಂತವಾಗಿ ನನ್ನನ್ನು ನಾನೇ ಪ್ರೀತಿಸಲು ಆರಂಭಿಸಿದೆ ಎಂದು ಆರ್ಯ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

