- Home
- Sports
- Cricket
- ಇಂದಿನ BCCI ಮಹತ್ವದ ಮೀಟಿಂಗ್‌ಗೆ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದೇಕೆ? ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್
ಇಂದಿನ BCCI ಮಹತ್ವದ ಮೀಟಿಂಗ್‌ಗೆ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದೇಕೆ? ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್
ಭಾರತೀಯ ಕ್ರಿಕೆಟ್‌ನ ಕೆಲ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ಗುರುವಾರ ಬಿಸಿಸಿಐ ಸಭೆ ಕರೆದಿತ್ತು, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಗಳಲ್ಲಿ ಎದುರಾದ ವೈಫಲ್ಯದ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ವರದಿಯಾಗಿತ್ತು. ಈ ಸಭೆಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದಾರೆ.

ಮುಂಬೈನಲ್ಲಿಂದು ಬಿಸಿಸಿಐ ಪರಾಮರ್ಶನಾ ಸಭೆ
ಐರ್ಲೆಂಡ್ ಎದುರಿನ ಟಿ20 ಹಾಗೂ ಇಂಗ್ಲೆಂಡ್ ಎದುರಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಸೋತು ಬರಿಗೈನಲ್ಲಿ ಭಾರತ ತಂಡವು ತವರಿಗೆ ವಾಪಾಸ್ಸಾಗಿತ್ತು. ಈ ಬಗ್ಗೆ ಪರಾಮರ್ಶೆ ಮಾಡಲು ಬಿಸಿಸಿಐ ಮುಂಬೈನಲ್ಲಿಂದು ಸಭೆ ಕರೆದಿತ್ತು. ಈ ಮಹತ್ವದ ಸಭೆಯಲ್ಲಿ ಭಾರತ ತಂಡದ ಕೋಚ್ ಗೌತಮ್ ಗಂಭೀರ್, ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್, ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಇರಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಜಿತ್ ಅಗರ್ಕರ್ ಈ ಸಭೆಗೆ ಗೈರಾಗಿದ್ದಾರೆ.
ಬಿಸಿಸಿಐ ಮಹತ್ವದ ಸಭೆಗೆ ಅಗರ್ಕರ್ ಗೈರು
ಇನ್ನು ಇದೇ ವೇಳೆ ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ತಂಡದ ಸಿದ್ಧತೆ, ರೋಹಿತ್ ಶರ್ಮಾರ ಭವಿಷ್ಯದ ಬಗ್ಗೆಯೂ ಗಂಭೀರ ಚರ್ಚೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿತ್ತು. ಆದರೆ ಇದೆಲ್ಲದರ ನಡುವೆ ಅಜಿತ್ ಅಗರ್ಕರ್ ಈ ಮಹತ್ವದ ಸಭೆಯಿಂದ ಹೊರಗುಳಿದಿದ್ದು ಏಕೆ ಎನ್ನುವುದರ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಶುರುವಾಗಿದೆ.
ರೋಹಿತ್-ಅಗರ್ಕರ್ ನಡುವೆ ಮುಸುಕಿನ ಗುದ್ದಾಟ
ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ರೋಹಿತ್ ಶರ್ಮಾ ಅವರನ್ನು ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸದಿರಲು ಹಾಗೂ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರ ನಿವೃತ್ತಿ ಪಡೆಯಲು ಆಯ್ಕೆ ಸಮಿತಿ ಮೂಲಗಳು ಸೂಚಿಸಿದ್ದವು ಎನ್ನಲಾಗಿತ್ತು. ಆದರೆ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.
ಅಜಿತ್ ಅಗರ್ಕರ್ ತಲೆದಂಡಕ್ಕೆ ಬಿಸಿಸಿಐ ಪ್ಲಾನ್
ಇದೀಗ ನ್ಯೂಸ್ 24 ವರದಿಯ ಪ್ರಕಾರ, ಬಿಸಿಸಿಐ ಇದೀಗ ಅಜಿತ್ ಅಗರ್ಕರ್ ಅವರ ತಲೆದಂಡ ಮಾಡಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬಿಸಿಸಿಐ ಇದೀಗ ಹೊಸ ಚೀಫ್ ಸೆಲೆಕ್ಟರ್ ಹುಡುಕಾಟದಲ್ಲಿದೆ. ಇದೇ ಕಾರಣಕ್ಕೆ ಅಜಿತ್ ಅಗರ್ಕರ್ ಅವರನ್ನು ಹೊರಗಿಟ್ಟು ಈ ಸಭೆ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ವೈಯುಕ್ತಿಕ ಕಾರಣ ನೀಡಿ ಮೀಟಿಂಗ್‌ಗೆ ಅಗರ್ಕರ್ ಚಕ್ಕರ್
ಅಜಿತ್ ಅಗರ್ಕರ್ ಸದ್ಯ ವೈಯುಕ್ತಿಕ ಕಾರಣ ನೀಡಿ ಈ ಸಭೆಗೆ ಗೈರಾಗಿದ್ದಾರೆ. ಇದೇ ಸೆಪ್ಟೆಂಬರ್‌ನಲ್ಲಿ ಅಜಿತ್ ಅಗರ್ಕರ್ ಅವರ ಜತೆಗಿನ ಬಿಸಿಸಿಐ ಕಾಂಟ್ರ್ಯಾಕ್ಟ್ ಕೊನೆಯಾಗಲಿದೆ. ಸದ್ಯದ ಮಾಧ್ಯಮಗಳ ವರದಿಗಳ ಪ್ರಕಾರ ಬಿಸಿಸಿಐ, ಅಜಿತ್ ಅಗರ್ಕರ್ ಅವರ ಕಾಂಟ್ರ್ಯಾಕ್ಟ್ ವಿಸ್ತರಿಸದಿರಲು ತೀರ್ಮಾನಿಸಿದೆ ಎನ್ನಲಾಗಿದೆ. ಇನ್ನು ಮತ್ತೊಂದು ಮೂಲಗಳ ಪ್ರಕಾರ ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಗೂ ಮುನ್ನವೇ ಹೊಸ ಚೀಫ್ ಸೆಲೆಕ್ಟರ್ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ರೋಹಿತ್ ಶರ್ಮಾ ಕ್ರಿಕೆಟ್ ಭವಿಷ್ಯದ ಬಗ್ಗೆ
ಇನ್ನು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಆಯ್ಕೆಯ ಕುರಿತಂತೆ ಹೊಸ ಚೀಫ್ ಸೆಲೆಕ್ಟರ್ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಫಿಟ್ನೆಸ್ ಹಾಗೂ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಹೊಸ ಚೀಫ್ ಸೆಲೆಕ್ಟರ್ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

