ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದ ನಂತರ, ಅಮೆರಿಕವು ಭಾರತ ಸೇರಿದಂತೆ ಇರಾನ್‌ಗೆ ಸಹಾಯ ಮಾಡುವ ದೇಶಗಳಿಗೆ ಎಚ್ಚರಿಕೆ ನೀಡಿದೆ. ಇರಾನ್‌ಗೆ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡುವ ಯಾವುದೇ ದೇಶದ ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆ.
ಅಮೆರಿಕ-ಇರಾನ್ ಸಂಘರ್ಷ ಇನ್ನೂ ಮುಗಿದಿಲ್ಲ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭೇಟಿಯಾಗಿದ್ದ ವಿಚಾರಕ್ಕೆ ಭಾರತದ ವಿರುದ್ಧ ಅಮೆರಿಕ ಕೋಪಗೊಂಡಿದೆ. ಪ್ರಧಾನಿ ಮೋದಿ ಇರಾನ್ ಅಧ್ಯಕ್ಷ ಭೇಟಿ ಮಾಡಿದ ಕೆಲವೇ ದಿನಗಳಲ್ಲಿ ಇರಾನ್ ಜೊತೆ ವ್ಯವಹಾರ ನಡೆಸುತ್ತಿರುವ, ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಟೆಹ್ರಾನ್‌ಗೆ ಸಹಾಯ ಮಾಡಬಹುದಾದ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಅಮೆರಿಕ ಎಚ್ಚರಿಕೆ ನೀಡಿದೆ.
ಇರಾನ್‌ಗೆ ಯಾವುದೇ ದೇಶ ಸಹಾಯ ಮಾಡಲು ಸಾಧ್ಯವಿಲ್ಲ
ಇರಾನ್‌ಗೆ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಯಾವುದೇ ದೇಶ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಯಾವುದೇ ದೇಶವು ಇರಾನ್‌ಗೆ ಹಣ ಗಳಿಸಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡಿದರೆ ಮತ್ತು ಆ ಹಣವನ್ನು ಭಯೋತ್ಪಾದನೆಯನ್ನು ಬೆಂಬಲಿಸಲು ಅಥವಾ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಬಳಸಿದರೆ, ಅಂತಹ ದೇಶಗಳ ಮೇಲೂ ಅಮೆರಿಕ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.
ಪ್ರಧಾನಿ ಮೋದಿ ಮತ್ತು ಪೆಜೆಶ್ಕಿಯಾನ್ ಭೇಟಿ ಬಗ್ಗೆ ರುಬಿಯೊ ಹೇಳಿದ್ದೇನು?
'ದಿ ಬ್ರಿಯಾನ್ ಕಿಲ್ಮೀಡ್ ಶೋ' ಕಾರ್ಯಕ್ರಮದಲ್ಲಿ ಬ್ರಿಯಾನ್ ಕಿಲ್ಮೀಡ್ ಅವರೊಂದಿಗಿನ ರುಬಿಯೊ ಸಂದರ್ಶನ ವೇಳೆ ಪ್ರಧಾನಿ ಮೋದಿ ಮತ್ತು ಪೆಜೆಶ್ಕಿಯಾನ್ ನಡುವಿನ ಭೇಟಿ ಹಾಗೂ ಇದರಿಂದ ಭಾರತ ಮತ್ತು ಇರಾನ್ ನಡುವಿನ ಹೊಸ ವ್ಯಾಪಾರ ಒಪ್ಪಂದದ ಸಾಧ್ಯತೆಯ ಬಗ್ಗೆ ಪ್ರಶ್ನಿಸಿಲಾಯ್ತು. ಆಗ ರುಬಿಯೊ 'ಭಾರತ ಮತ್ತು ಇರಾನ್ ನಡುವೆ ಯಾವುದೇ ವ್ಯಾಪಾರ ಒಪ್ಪಂದವಿಲ್ಲ ಎಂದು ರೂಬಿಯೊ ಹೇಳಿದರು. ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಒಪ್ಪಂದವಿದೆ ಎಂದು ನಾನು ನಂಬುವುದಿಲ್ಲ. ಆದಾಗ್ಯೂ, ದೇಶಗಳು ತಮ್ಮದೇ ಆದ ವಿದೇಶಾಂಗ ನೀತಿಯನ್ನು ನಿರ್ಧರಿಸುವ ಮತ್ತು ಇರಾನ್‌ನೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿವೆ ಎಂದು ಅವರು ಒಪ್ಪಿಕೊಂಡರು. ಡೊನಾಲ್ಡ್ ಟ್ರಂಪ್ ಆಡಳಿತವು ಇರಾನ್ ಮೇಲೆ ಆರ್ಥಿಕ ನಿರ್ಬಂಧ ತೀವ್ರವಾಗಿ ಹೆಚ್ಚಿಸಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಟೆಹ್ರಾನ್‌ನೊಂದಿಗೆ ವ್ಯವಹಾರವನ್ನು ಮುಂದುವರಿಸುವ ದೇಶಗಳು ಮತ್ತು ಕಂಪನಿಗಳ ವಿರುದ್ಧ ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿದೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಆಗಸ್ಟ್ 24 ರಂದು ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್ ಅನ್ನು ಪ್ರಾರಂಭಿಸಿದರು. ಇರಾನ್‌ನ ಉಳಿದ ಆರ್ಥಿಕ ಜೀವನಾಡಿಗಳನ್ನು ಕಡಿತಗೊಳಿಸಲು ಈ ಕಾರ್ಯಾಚರಣೆಯನ್ನು ಆರ್ಥಿಕ ಡಿ-ಡೇ ಎಂದು ಅವರು ಬಣ್ಣಿಸಿದ್ದರು.
ಭಾರತಕ್ಕೆ ರೂಬಿಯೊ ಎಚ್ಚರಿಕೆ ಏನು?
ಪ್ರಪಂಚದಾದ್ಯಂತದ ಅನೇಕ ದೇಶಗಳು ಇರಾನ್‌ನೊಂದಿಗೆ ಸಂಪರ್ಕದಲ್ಲಿವೆ ಎಂದು ಅಮೆರಿಕಕ್ಕೆ ತಿಳಿದಿದೆ. ಹಿಂದಿನ ಚರ್ಚೆಗಳಲ್ಲಿ ಅಮೆರಿಕ ಸ್ವತಃ ಇರಾನಿನ ಪ್ರತಿನಿಧಿಗಳನ್ನು ಸಂಪರ್ಕಿಸಿದೆ. ಇರಾನ್ ಆಡಳಿತದ ಕೆಲವು ಪ್ರತಿನಿಧಿಗಳೊಂದಿಗೆ ಅಮೆರಿಕವು ಸಂವಾದ ಮತ್ತು ಸಂಪರ್ಕದಲ್ಲಿ ತೊಡಗಿದೆ. ಆದರೆ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಯಾವುದೇ ದೇಶವು ಇರಾನ್‌ಗೆ ಅಮೆರಿಕದ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡಬಾರದು. ಇರಾನ್ ಹಣ ಸಂಪಾದಿಸಲು ಮತ್ತು ನಂತರ ಆ ಹಣವನ್ನು ಭಯೋತ್ಪಾದನೆಯನ್ನು ಬೆಂಬಲಿಸಲು ಅಥವಾ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಬಳಸಲು ಅನುಮತಿಸುವ ವ್ಯವಸ್ಥೆಯನ್ನು ರಚಿಸಲು ಯಾವುದೇ ದೇಶವು ಇರಾನ್‌ಗೆ ಸಹಾಯ ಮಾಡಬಾರದು. ಯಾವುದೇ ದೇಶ ಹಾಗೆ ಮಾಡಿದರೆ, ಅಮೆರಿಕವು ಆ ದೇಶದ ಮೇಲೆಯೂ ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ರುಬಿಯೊ ಸ್ಪಷ್ಟಪಡಿಸಿದರು.
ಬಿಷ್ಕೆಕ್‌ನಲ್ಲಿ ಮೋದಿ-ಪೆಗೆಶ್ಕಿಯನ್ ಭೇಟಿ ಏಕೆ?
ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಬಿಷ್ಕೆಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭೇಟಿಯಾದರು. ಭಾರತ ಮತ್ತು ಇರಾನ್ ನಡುವಿನ ಸಂಬಂಧಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸುವ ಯೋಜನೆಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ವಾಣಿಜ್ಯ ಹಡಗುಗಳು ಮತ್ತು ನಾವಿಕರ ಸುರಕ್ಷತೆಯ ಬಗ್ಗೆಯೂ ಅವರು ಚರ್ಚಿಸಿದ್ದರು.


