ಮಂಡ್ಯ: ಹೊಳೆ ಆಂಜನೇಯ ಸ್ವಾಮಿ ದರ್ಶನ ಪಡೆದ ನಟ ವಶಿಷ್ಠಸಿಂಹ, ಹರಿಪ್ರಿಯಾ

ಕಾರ್ತಿಕ ಮಾಸದ ಕಡೆಯ ಸೋಮವಾರ ಹಿನ್ನೆಲೆ ವಸಿಷ್ಠ ಸಿಂಹ-ಹರಿಪ್ರಿಯಾ ದೀಪೋತ್ಸವದ ಅಂಗವಾಗಿ  ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
 

Share this Video
  • FB
  • Linkdin
  • Whatsapp

ಮಂಡ್ಯ : ಇಲ್ಲಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ(Anjaneya Swamy temple) ನಟ ವಸಿಷ್ಠ ಸಿಂಹ(Vasishta N Simha), ನಟಿ ಹರಿಪ್ರಿಯಾ(Haripriya) ದಂಪತಿ ಭೇಟಿ ನೀಡಿ, ದೇವರ ದರ್ಶನ ಪಡೆದರು. ಕಾರ್ತಿಕ ಮಾಸದ ಕಡೆ ಸೋಮವಾರ ಹಿನ್ನಲೆ ದೇವಾಲಯಕ್ಕೆ ದಂಪತಿ ‌ಭೇಟಿ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ದೇವಾಲಯ ಇದೆ. ಕಾರ್ತಿಕ ಮಾಸದ ದೀಪಸೇವೆಯನ್ನು(Dipotsava) ವಸಿಷ್ಠ ಸಿಂಹ, ಹರಿಪ್ರಿಯಾ ನೆರವೇರಿಸಿದ್ದಾರೆ. ಕಡೆ ಸೋಮವಾರದ ಅಂಗವಾಗಿ ಅಲ್ಲಿ ದೀಪೋತ್ಸವ ನಡೆಯಿತು. ದೀಪ ಹಚ್ಚಿ ಆಂಜನೇಯಸ್ವಾಮಿ‌ ದರ್ಶನವನ್ನು ದಂಪತಿ ಪಡೆದರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಸುತ್ತಾಟ ನಡೆಸುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಕುಮಾರಸ್ವಾಮಿ ಹೇಳಿದಂತೆ 50-60 ಶಾಸಕರು ಬಿಜೆಪಿಗೆ ಬರ್ತಾರಾ..? ಹೆಚ್‌ಡಿಕೆ ಹೇಳಿದ ಆ ಪ್ರಭಾವಿ ಸಚಿವ ಯಾರು..?

Related Video