ಕುಮಾರಸ್ವಾಮಿ ಹೇಳಿದಂತೆ 50-60 ಶಾಸಕರು ಬಿಜೆಪಿಗೆ ಬರ್ತಾರಾ..? ಹೆಚ್‌ಡಿಕೆ ಹೇಳಿದ ಆ ಪ್ರಭಾವಿ ಸಚಿವ ಯಾರು..?

ಪ್ರಭಾವಿ ಸಚಿವ ಕಾಂಗ್ರೆಸ್ ಪಕ್ಷ ತೊರೆದು ಬರಲಿದ್ದಾರೆ 
50 ರಿಂದ 60 ಶಾಸಕರೊಂದಿಗೆ ಬಿಜೆಪಿ ಸೇರಬಹುದು
ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ನೀಡಿದ ಕುಮಾರಸ್ವಾಮಿ
 

Share this Video
  • FB
  • Linkdin
  • Whatsapp

ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್‌(Congress) ಸರ್ಕಾರ ಪತನದ ಬಗ್ಗೆ ಮತ್ತೊಮ್ಮೆ ಹೆಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಕುಮಾರಸ್ವಾಮಿ(HD Kumaraswamy) ಶಾಕ್ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನಮ್ಮ ಪರ ಇದ್ದಾರೆ. ತಮ್ಮ ವಿರುದ್ಧದ ಕೇಸ್‌ಗಳಿಂದ ಪಾರಾಗಲು ಯತ್ನಿಸಿದ್ದಾರೆ. ಬಿಜೆಪಿಯ(BJP) ಕೇಂದ್ರ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಪ್ರಭಾವಿ ಸಚಿವ ಕಾಂಗ್ರೆಸ್ ಪಕ್ಷ ತೊರೆದು ಬರಲಿದ್ದಾರೆ. 50 ರಿಂದ 60 ಶಾಸಕರೊಂದಿಗೆ ಬಿಜೆಪಿ ಸೇರಬಹುದು ಎಂದು ಹೊಸ ಬಾಂಬ್‌ವೊಂದನ್ನು ಹೆಚ್‌.ಡಿ.ಕುಮಾರಸ್ವಾಮಿ ಸಿಡಿಸಿದ್ದಾರೆ. ಹೆಚ್‌ಡಿಕೆ ಹೇಳಿದ ಆ ಪ್ರಭಾವಿ ಸಚಿವ ಯಾರು..? , ಕುಮಾರಸ್ವಾಮಿ ಹೇಳಿದಂತೆ 50-60 ಶಾಸಕರು ಬಿಜೆಪಿಗೆ ಬರ್ತಾರಾ..? ಕುಮಾರಸ್ವಾಮಿ ಹೇಳಿಕೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಅಧಿವೇಶನದಲ್ಲಿ ಒಗ್ಗಟ್ಟಾಗಬೇಕಿದ್ದ ಬಿಜೆಪಿಯಲ್ಲೇ ತಪ್ಪಿದ ತಾಳ: ಉ.ಕರ್ನಾಟಕಕ್ಕೆ ಸ್ಥಾನ ಸಿಗೋವರೆಗೂ ಸಭೆಗೆ ಹೋಗಲ್ಲ- ಯತ್ನಾಳ್

Related Video