12:01 AM (IST) Aug 30

Karnataka News Live 29th August:ಟಾಕ್ಸಿಕ್ ಬಗ್ಗೆ ರಕ್ಷಿತಾ ಪ್ರೇಮ್ ಫಸ್ಟ್ ರಿಯಾಕ್ಷನ್; ಜನ ಏನೇನೋ ಹೇಳ್ತಾರೆ, ನೀವ್ ಹೋಗಿ ಮೂವಿ ನೋಡಿ, ಆಮೆಲೆ ಮಾತಾಡಿ

ಅವರು ಈಗಾಗಲೇ ಒಮ್ಮೆ ನೋಡಿ ಇಷ್ಟಪಟ್ಟು ಮತ್ತೆ ನೋಡೋಕೆ ಬಂದಿದಾರೆ.. ಯಾರೂ ಬೇರೆಯವರ ಒಪಿನಿಯನ್ ಕೇಳಿ, ಸಿನಿಮಾ ನೋಡದೇ ಇರಬೇಡಿ.. ನೀವು ಒಮ್ಮೆ ನೋಡಿ.. ಹಾಗೇ, ಎಲ್ಲರೂ ಥೇಟರ್‌ಗೇ ಹೋಗಿ ಈ ಮೂವಿ ನೋಡಿ..' ಎಂದು ಹೇಳಿದ್ದಾರೆ ರಕ್ಷಿತಾ ಪ್ರೇಮ್.

Read Full Story
11:40 PM (IST) Aug 29

Karnataka News Live 29th August:ಯಮುನಾ ನದಿ ಅಳುತ್ತಿದೆ, ಯಾಕೆ ಗೊತ್ತಾ? ಅಕ್ಬರ್‌ ಮನ ಗೆದ್ದ ಬೀರಬಲ್‌ನ ಜಾಣ್ಮೆಯ ಉತ್ತರ!

ಅಕ್ಬರ್-ಬೀರಬಲ್ ಕಥೆಗಳಲ್ಲಿ ಬೀರಬಲ್‌ನ ಚಾಣಾಕ್ಷತನಕ್ಕೆ ಮತ್ತೊಂದು ಉದಾಹರಣೆ ಈ ಯಮುನಾ ನದಿ ಕಥೆ. ಮಳೆಗಾಲದ ಒಂದು ರಾತ್ರಿ ಯಮುನಾ ನದಿಯ ಭೋರ್ಗರೆತ ಅಕ್ಬರ್‌ಗೆ ಅಳುವಿನಂತೆ ಕೇಳಿಸುತ್ತದೆ. ಮರುದಿನ ದರ್ಬಾರ್‌ನಲ್ಲಿ ಅಕ್ಬರ್ ಇದೇ ಪ್ರಶ್ನೆಯನ್ನು ಸಭಿಕರ ಮುಂದಿಡುತ್ತಾರೆ.

Read Full Story
11:07 PM (IST) Aug 29

Karnataka News Live 29th August:ನನಗೆ ಜೀಪ್ ಬೇಕು ಅಂಕಲ್, ವಿಶೇಷ ಚೇತನ ಬಾಲಕನ ಮನವಿಗೆ ತಕ್ಷಣ ಸ್ಪಂದಿಸಿದ ಹೆಚ್‌ಡಿ ಕುಮಾರಸ್ವಾಮಿ

ವಿಶೇಷ ಚೇತನ ಬಾಲಕ ತನ್ನ ತಾಯಿ ಜೊತೆ ಸಲಕರಣೆ ಪಡೆಯಲು ಆಗಮಿಸಿದ್ದರು. ಈ ವೇಳೆ ಬಾಲಕನ ಜೊತೆ ಹೆಚ್‌ಡಿ ಕುಮಾರಸ್ವಾಮಿ ಮಾತನಾಡುತ್ತಾ ಏನು ಬೇಕು ನಿನಗೆ ಎಂದು ಕೇಳಿದ್ದಾರೆ. ಬಾಲಕನ ಮಂದಿಟ್ಟ ಮನವಿಗೆ ತಕ್ಷಣ ಸ್ಪಂದಿಸಿದ ಘಟನೆ ನಡೆದಿದೆ.

Read Full Story
10:38 PM (IST) Aug 29

Karnataka News Live 29th August:PDO - ಲೋಕಾ ಪೊಲೀಸರ ಡಿಜಿಟಲ್ ಟ್ರ್ಯಾಪ್; ಲಂಚಕ್ಕೆ ಬೇಡಿಕೆಯಿಟ್ಟು ಜೈಲು ಪಾಲಾದ ಗ್ರಾಪಂ ಪಿಡಿಒ ಅಧಿಕಾರಿ!

ಪಿಡಿಒ ಮೆಹಬೂಬ್ ಪಟೇಲ್, ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಫೋನ್ ಪೇ ಮೂಲಕ ₹12,000 ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಡಿಜಿಟಲ್ ಸಾಕ್ಷ್ಯದೊಂದಿಗೆ ಅಧಿಕಾರಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

Read Full Story
09:52 PM (IST) Aug 29

Karnataka News Live 29th August:FSSAI ಕಟ್ಟುನಿಟ್ಟಿನ ಕ್ರಮ; ಕಲಬೆರಕೆ ಶಂಕೆಯ ಹಿನ್ನೆಲೆ ಖ್ಯಾತ ಸಂಸ್ಥೆಯ ಮಸಾಲೆ ಮಾರಾಟಕ್ಕೆ ನಿಷೇಧ!

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI)ವು 'ಎವರೆಸ್ಟ್' ಮತ್ತು 'ಲಾಲ್ಜಿ ಗೋಧು' ಕಂಪನಿಗಳ ಇಂಗು ಉತ್ಪನ್ನಗಳನ್ನು ಕಳಪೆ ಗುಣಮಟ್ಟ ಮತ್ತು ತಪ್ಪು ಬ್ರಾಂಡಿಂಗ್ ಕಾರಣದಿಂದ ನಿಷೇಧಿಸಿದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಈ ಇಂಗಿನಲ್ಲಿ ನಿಗದಿತ ಸಾರ ಇಲ್ಲದಿರುವುದು ಮತ್ತು ಪಿಷ್ಟವನ್ನು ಕಲಬೆರಕೆ ಮಾಡಿರುವುದು ದೃಢಪಟ್ಟಿದೆ.

Read Full Story
09:05 PM (IST) Aug 29

Karnataka News Live 29th August:ಅಗ್ನಿಪರೀಕ್ಷೆ ಸ್ಪರ್ಧಿಗೆ ಅಣ್ಣನಾದ 'ಬಿಗ್‌ ಬಾಸ್‌ ಆನೆ'.. ಪ್ರಾಮಿಸ್ ಉಳಿಸಿಕೊಂಡ ವಿನಯ್ ಗೌಡ!

ಕೆಲವು ದಿನಗಳ ಹಿಂದಷ್ಟೇ ವಿನಯ್ ಗೌಡ ಅವರು ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಮೇಲೆ ಸ್ವಲ್ಪ ಗರಂ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಆದರೆ ಈಗ ಈ ಫೋನ್ ಗಿಫ್ಟ್ ಕೊಟ್ಟ ವಿಡಿಯೋ ವೈರಲ್ ಆಗ್ತಿದ್ದಂತೆ, ಟ್ರೋಲರ್‌ಗಳೆಲ್ಲಾ ಸೈಲೆಂಟ್ ಆಗಿದ್ದಾರೆ. ಏನಿದು ಹೊಸ ಕತೆ? ನೋಡಿ..

Read Full Story
08:55 PM (IST) Aug 29

Karnataka News Live 29th August:LPG - ಗ್ಯಾಸ್ ಸಿಲಿಂಡರ್ ಇರುವವರು ತಕ್ಷಣ ಗಮನಿಸಿ - ಡೆಡ್‌ಲೈನ್‌ಗೆ ಉಳಿದಿದೆ 3 ದಿನ; ಕೂಡಲೇ ಈ ಪ್ರಕ್ರಿಯೆ ಮುಗಿಸಿ!

ಇಂಡೇನ್, ಭಾರತ್ ಮತ್ತು ಹೆಚ್‌ಪಿ ಗ್ಯಾಸ್ ಗ್ರಾಹಕರು ಆಗಸ್ಟ್ 31, 2026 ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ನಿಯಮ ಪಾಲಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳುವ ಮತ್ತು ಸಿಲಿಂಡರ್ ಬುಕಿಂಗ್‌ನಲ್ಲಿ ಅಡಚಣೆಯಾಗುವ ಸಾಧ್ಯತೆಯಿದೆ. ನಕಲಿ ಸಂಪರ್ಕಗಳನ್ನು ತಡೆಯಲು ಜಾರಿಗೆ ತಂದಿರುವ ಈ ಪ್ರಕ್ರಿಯೆಯನ್ನು ಮೊಬೈಲ್ ಆಪ್ ಮೂಲಕವೇ ಸುಲಭವಾಗಿ ಪೂರ್ಣಗೊಳಿಸಬಹುದು.
Read Full Story
08:31 PM (IST) Aug 29

Karnataka News Live 29th August:Toxic ಮಧ್ಯೆ ಯಶ್ ಇನ್‌ಸ್ಟಾಗ್ರಾಮ್ ಬಯೋ ವೈರಲ್ - ‘ಒರಿಜಿನಲ್’ ಸಾಲುಗಳೇ ಈಗ ಟ್ರೋಲಿಗರಿಗೆ ಕೌಂಟರ್!

‘ಟಾಕ್ಸಿಕ್’ ಸಿನಿಮಾ ಕುರಿತ ಟ್ರೋಲ್‌ಗಳ ನಡುವೆ ಯಶ್ ಇನ್‌ಸ್ಟಾಗ್ರಾಮ್ ಬಯೋದಲ್ಲಿನ ‘Original’ ಸಾಲು ವೈರಲ್ ಆಗಿದೆ. ಫ್ಯಾನ್ಸ್ ಈ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಶೇರ್ ಮಾಡುತ್ತಿದ್ದಾರೆ.

Read Full Story
08:19 PM (IST) Aug 29

Karnataka News Live 29th August:ಚರ್ಮದ ಆರೋಗ್ಯಕ್ಕೆ ಗಂಜಿ ನೀರು ಕುಡಿಯಿರಿ; ಇದರಲ್ಲಿರೋ ಅದ್ಭುತ ಸತ್ವಗಳು ನಿಮ್ಗೆ ಗೊತ್ತಿಲ್ಲ!

ಅನ್ನ ಬಸಿದ ಗಂಜಿಯನ್ನು ಸುಮ್ಮನೆ ಚೆಲ್ಲುತ್ತೇವೆ. ಆದರೆ ಗಂಜಿ ನೀರಿನಲ್ಲಿ ಹಲವಾರು ಪ್ರಯೋಜನಗಳಿವೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ತುಂಬಾ ಒಳ್ಳೆಯದು. ಇದರ ಪ್ರಯೋಜನಗಳೇನು ಎಂದು ತಿಳಿಯೋಣ.

Read Full Story
07:49 PM (IST) Aug 29

Karnataka News Live 29th August:ವೀಕೆಂಡ್ ಪ್ಲ್ಯಾನ್ ಮಾಡ್ತಿದ್ದೀರಾ? ಬೆಂಗಳೂರಿನ ಈ 5 ಪರ್ಫೆಕ್ಟ್ ಜಾಗ ಮಿಸ್ ಮಾಡ್ಬೇಡಿ!

ಈ ವೀಕೆಂಡ್ ಬೆಂಗಳೂರಲ್ಲಿ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಕಬ್ಬನ್ ಪಾರ್ಕ್ ಸೈಕ್ಲಿಂಗ್‌ನಿಂದ ಹಿಡಿದು ಚರ್ಚ್ ಸ್ಟ್ರೀಟ್ ಸುತ್ತಾಟದವರೆಗೆ, ಇಲ್ಲಿದೆ 5 ಮಸ್ತ್ ಐಡಿಯಾಗಳು. ಲಾಲ್‌ಬಾಗ್, ಮೈಕ್ರೋಬ್ರೂವರಿ, ಕೆ.ಆರ್. ಮಾರ್ಕೆಟ್ ಕೂಡ ಲಿಸ್ಟ್‌ನಲ್ಲಿದೆ.

Read Full Story
07:34 PM (IST) Aug 29

Karnataka News Live 29th August:ನೈಋತ್ಯಕ್ಕೆ ಮಂಗಳೂರು ವಿವಾದದ ನಡುವೆಯೇ ಕೊಂಕಣ ರೈಲ್ವೆ ವಿಲೀನ ಪ್ರಸ್ತಾಪ, ಕರಾವಳಿಯ ರೈಲ್ವೆ ಭವಿಷ್ಯ ಸವಾಲು!

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗಿದೆ, ಇದು ಪ್ರತ್ಯೇಕ ಮಂಗಳೂರು ವಿಭಾಗ ರಚನೆಯ ಮೊದಲ ಹೆಜ್ಜೆಯಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯು ಷೇರುದಾರ ರಾಜ್ಯಗಳೊಂದಿಗಿನ ಮಾತುಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುತ್ತಿದೆ.
Read Full Story
07:28 PM (IST) Aug 29

Karnataka News Live 29th August:ವಿಶ್ವದಾದ್ಯಂತ ರಿಲೀಸ್, ಭಾರತದಲ್ಲಿ ಪ್ರಕಟಣೆಗೆ ತಡೆ; ಸೋನಿಯಾ ಗಾಂಧಿ ಪುಸ್ತಕದ ಸುತ್ತ ವಿವಾದವೇಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಸೋನಿಯಾ ಗಾಂಧಿಯವರ ಮುಂಬರುವ ಆತ್ಮಕಥೆ "ಬಿಲಾಂಗಿಂಗ್; ಎ ಜರ್ನಿ ಆಫ್ ಲವ್" ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಕಾರಣವಾಗಿದೆ. ಪುಸ್ತಕದಲ್ಲಿನ ಚೀನಾ ಗಡಿ, ಪ್ರಧಾನಿ ಮೋದಿ, ಮತ್ತು ಆರ್‌ಎಸ್‌ಎಸ್ ಕುರಿತ ಸೂಕ್ಷ್ಮ ಭಾಗಗಳನ್ನು ಬದಲಾಯಿಸಲು ಸೋನಿಯಾ ನಿರಾಕರಿಸಿದ ಕಾರಣ, ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆಯು ಭಾರತದಲ್ಲಿ ಇದನ್ನು ಪ್ರಕಟಿಸಲು ನಿರಾಕರಿಸಿದೆ.

Read Full Story
07:24 PM (IST) Aug 29

Karnataka News Live 29th August:ಶಿವಣ್ಣನ ಬಾಲಿವುಡ್ ಎಂಟ್ರಿಗೆ ಸಿಕ್ಕಿದೆ ಈ ಮಾಸ್ ಟೈಟಲ್ - ‘ಒರಿಜಿನಲ್‌ ಮಾನ್‌ಸ್ಟರ್‌’ ಹಿಂದೆ ಏನಿದೆ?

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅವರ ಮೊದಲ ಬಾಲಿವುಡ್ ಸಿನಿಮಾಗೆ ‘ಒರಿಜಿನಲ್‌ ಮಾನ್‌ಸ್ಟರ್‌’ ಎಂದು ಟೈಟಲ್ ಇಡಲಾಗಿದೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರಕ್ಕೆ ‘ಓಎಂ’ ಎಂಬ ಶಾರ್ಟ್ ಟೈಟಲ್ ಬಳಸಲಾಗುತ್ತಿದೆ.

Read Full Story
06:31 PM (IST) Aug 29

Karnataka News Live 29th August:Vinayakan Heartbreaking Story - 'ಮನೆಗೆ ಹೋದರೆ ಮಾತನಾಡಿಸಲು ಯಾರೂ ಇಲ್ಲ'.. ಗುಹೆಯಲ್ಲಿ ಈಗ 'ಸಿಂಹ' ಏಕಾಂಗಿ!

ಜೈಲರ್ ಚಿತ್ರದ ಯಶಸ್ಸಿನ ನಂತರ ಈ ನಟನಿಗೆ ಬೇಡಿಕೆ ಹೆಚ್ಚಿದೆ, ಕೈತುಂಬಾ ಸಿನಿಮಾಗಳಿವೆ. ಆದರೆ, "ಮನೆಗೆ ಹೋದರೆ ಮಾತನಾಡಿಸಲು ಯಾರೂ ಇಲ್ಲ" ಎನ್ನುವ ಅವರ ಮಾತುಗಳು ಯಶಸ್ಸಿನ ಹಿಂದಿರುವ ಕರಾಳ ಸತ್ಯವನ್ನು ಬಿಚ್ಚಿಟ್ಟಿವೆ. ಆದರೆ, ಗಂಡ-ಹೆಂಡ್ತಿ ಬೇರಾಗಿದ್ದು ಏಕೆ ಗೊತ್ತೇ? ಈ ಸ್ಟೋರಿ ನೋಡಿ..

Read Full Story
06:25 PM (IST) Aug 29

Karnataka News Live 29th August:ಪೊಲೀಸರಿಗೆ ಹೆದರಿ ಓಡುವಾಗ ಘೋರ ದುರಂತ.. ಅನ್ಯಾಯವಾಗಿ ಪ್ರಾಣಬಿಟ್ಟ ರಮೇಶ್‌

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹೆದರಿ ಓಡುತ್ತಿದ್ದ ರಮೇಶ್ ಎಂಬಾತ ಜಾರಿ ಬಿದ್ದು ತಲೆ ಬಂಡೆಗೆ ಒಡೆದು ಮೃತಪಟ್ಟಿದ್ದಾನೆ. ರಾತ್ರಿಯಿಂದ ನಾಪತ್ತೆಯಾಗಿದ್ದ ರಮೇಶ್ ಅವರ ಶವ ಇಂದು ಅರಣ್ಯ ಹಾಗೂ ಕಾಫಿ ತೋಟದ ಪ್ರದೇಶದಲ್ಲಿ ತೀವ್ರ ರಕ್ತಸ್ರಾವವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story
05:52 PM (IST) Aug 29

Karnataka News Live 29th August:Hubli- Dharwad - ಎನ್. ಶಶಿಕುಮಾರ್ ದಿಢೀರ್ ಎಕ್ಸಿಟ್, ಸ್ಥಳ ರಹಿತ ವರ್ಗಾವಣೆ; ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಭೂಷಣ್ ಗುಲಾಬರಾವ್ ಕಮಿಷನರ್

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಸ್ಥಳ ನಿಯೋಜಿಸದೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ನೂತನ ಕಮಿಷನರ್ ಆಗಿ ನೇಮಿಸಲಾಗಿದೆ. ಸೈಬರ್ ಕ್ರೈಮ್, ಡ್ರಗ್ಸ್ ಜಾಲದಂತಹ ಸವಾಲುಗಳನ್ನು ಎದುರಿಸಲಿರುವ ಗುಲಾಬರಾವ್ ಅವರ ಮೇಲೆ ಅವಳಿ ನಗರದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.
Read Full Story
04:50 PM (IST) Aug 29

Karnataka News Live 29th August:Nepal Flood - ಪ್ರವಾಹದಿಂದ ಅನಾಥವಾದ ಮಗುವಿಗೆ ತಾಯಿಯ ಮಡಿಲಾದ ಸೇನಾ ಸಿಬ್ಬಂದಿ; ಪರಿಸ್ಥಿತಿ ಹುಟ್ಟುಹಾಕಿದ ಮಾತೃ ಪ್ರೀತಿ!

ನೇಪಾಳದ ಭೀಕರ ಪ್ರವಾಹದ ನಡುವೆ, ತನ್ನ ಕುಟುಂಬದಿಂದ ಬೇರ್ಪಟ್ಟ ಪುಟ್ಟ ಬಾಲಕನೊಬ್ಬ ರಕ್ಷಣಾ ಸಿಬ್ಬಂದಿಗೆ ಸಿಕ್ಕಿದ್ದಾನೆ. ಭಯದಿಂದ ಅಳುತ್ತಿದ್ದ ಆ ಕಂದನಿಗೆ ನೇಪಾಳ ಸೇನೆಯ ಮಹಿಳಾ ಸಿಬ್ಬಂದಿಯೊಬ್ಬರು ತಾಯಿಯ ಮಮತೆಯಿಂದ ಅಪ್ಪಿಕೊಂಡು ಆರೈಕೆ ಮಾಡಿದ ಹೃದಯಸ್ಪರ್ಶಿ ಘಟನೆ ಇದು. ಈ ದೃಶ್ಯವು ವಿಪತ್ತಿನ ಸಮಯದಲ್ಲಿಯೂ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ಸಾರುತ್ತದೆ.
Read Full Story
04:40 PM (IST) Aug 29

Karnataka News Live 29th August:ಸೌತ್ ಸಿನಿಮಾಗಳಿಗೆ ದೊಡ್ಡ ಕಂಡೀಷನ್ - 'ರಾಕಾ' ಬಳಿಕ ಜಾನ್ವಿ ಕಪೂರ್ ಮುಂದಿನ ಹೆಜ್ಜೆ ಏನು?

ಸದ್ಯ ಅಲ್ಲು ಅರ್ಜುನ್ ಜೊತೆಗಿನ 'ರಾಕಾ' ಸಿನಿಮಾ ಬಿಟ್ಟರೆ ನಟಿ ಜಾನ್ವಿ ಕಪೂರ್ ಬೇರೆ ಯಾವುದೇ ದಕ್ಷಿಣ ಭಾರತದ ಚಿತ್ರಕ್ಕೆ ಸಹಿ ಹಾಕಿಲ್ಲ ಎನ್ನಲಾಗಿದೆ. ಅವರು ಬಲವಾದ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Read Full Story
04:02 PM (IST) Aug 29

Karnataka News Live 29th August:ಜಿಮ್‌ನಲ್ಲಿ ಮ್ಯೂಜಿಕ್‌ ಹಾಕೋದು ಯಾಕೆ? ಇಲ್ಲಿದೆ ಆಸಕ್ತಿದಾಯಕ 5 ಕಾರಣಗಳು

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಸಂಗೀತ ಕೇಳುವುದು ದೈಹಿಕ ಆಯಾಸದ ಮೇಲಿರುವ ಗಮನವನ್ನು ಕಡಿಮೆ ಮಾಡುತ್ತದೆ ಮತ್ತು ವರ್ಕೌಟ್ ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತದೆ. ವ್ಯಾಯಾಮದ ಅವಧಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಸುರಕ್ಷತೆಯ ದೃಷ್ಟಿಯಿಂದ ಹೆಡ್‌ಫೋನ್ ಸೌಂಡ್ ಮಿತವಾಗಿಡಬೇಕು.

Read Full Story
03:40 PM (IST) Aug 29

Karnataka News Live 29th August:MS Dhoni - ಮೈದಾನದಿಂದ ಹೊರಗಿದ್ದರೂ ಕೋಟಿ ಕೋಟಿ ಗಳಿಕೆ; ಕ್ಯಾಪ್ಟನ್‌ ಕೂಲ್ ಧೋನಿ ತಿಂಗಳ ಆದಾಯ ಎಷ್ಟು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಎಂಎಸ್ ಧೋನಿ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ. ಬಿಸಿಸಿಐನಿಂದ ಮಾಸಿಕ ಪಿಂಚಣಿ, ಐಪಿಎಲ್ ಸಂಬಳ, ಮತ್ತು ಬ್ರಾಂಡ್ ಅನುಮೋದನೆಗಳಿಂದ ಅವರ ಆದಾಯ ಹರಿದುಬರುತ್ತಿದೆ. ನಿವೃತ್ತಿಯ ನಂತರವೂ ಅವರು ತಿಂಗಳಿಗೆ ಎಷ್ಟು ಗಳಿಸುತ್ತಿದ್ದಾರೆ ಗೊತ್ತಾ? ಈ ಕುರಿತು ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ.

Read Full Story