MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • News
  • India News
  • GSLV-F17 Launch: ಇಸ್ರೋ ಮತ್ತೊಂದು ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!

GSLV-F17 Launch: ಇಸ್ರೋ ಮತ್ತೊಂದು ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!

ಶ್ರೀಹರಿಕೋಟಾ:ಇಸ್ರೋ(ISRO) ಮತ್ತೊಂದು ಸಾಧನೆ ಮಾಡಿದ್ದು, ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2:55 ಸುಮಾರಿಗೆ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV ರಾಕೆಟ್ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

2 Min read
Author : Ravi Janekal
Published : Sep 04 2026, 08:05 AM IST
Share this Photo Gallery
  • FB
  • TW
  • Linkdin
  • Whatsapp
15
ನಾಸಾ ಹಾದಿಯಲ್ಲಿ ಇಸ್ರೋ: GSLV F17 ರಾಕೆಟ್ ಉಡಾವಣೆ ಯಶಸ್ವಿ!
Image Credit : ISRO

ನಾಸಾ ಹಾದಿಯಲ್ಲಿ ಇಸ್ರೋ: GSLV-F17 ರಾಕೆಟ್ ಉಡಾವಣೆ ಯಶಸ್ವಿ!

ಶ್ರೀಹರಿಕೋಟಾ:ಇಸ್ರೋ(ISRO) ಮತ್ತೊಂದು ಸಾಧನೆ ಮಾಡಿದ್ದು, ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2:55 ಸುಮಾರಿಗೆ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV ರಾಕೆಟ್ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತದ ಮೊಟ್ಟಮೊದಲ ಇಮೇಜಿಂಗ್‌ ಸಾಟಲೈಟ್‌ ಆಗಿರುವ ಸುಧಾರಿತ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಸಬ್-ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ತಲುಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ISRO ಮುಖ್ಯಸ್ಥ ಡಾ.ವಿ.ನಾರಾಯಣನ್ ಹೇಳಿದ್ದೇನು?
Image Credit : Asianet News

ISRO ಮುಖ್ಯಸ್ಥ ಡಾ.ವಿ.ನಾರಾಯಣನ್ ಹೇಳಿದ್ದೇನು?

ಈ ಬಗ್ಗೆ ಇಸ್ರೋ ಮುಖ್ಯಸ್ಥ ಡಾ. ವಿ. ನಾರಾಯಣನ್ ಸಂತಸ ವ್ಯಕ್ತಪಡಿಸಿದ್ದು, GSLV-F15 ಉಡಾವಣಾ ರಾಕೆಟ್ ಸುಧಾರಿತ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಜಿಯೋ-ಇಮೇಜಿಂಗ್ ಉಪಗ್ರಹವನ್ನು ಕರಾರುವಕ್ಕಾಗಿ ಕಕ್ಷೆಗೆ ಯಶಸ್ವಿಯಾಗಿ ಸೇರಸಿದೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ'ಎಂದು ಹೇಳಿದ್ದಾರೆ. ಇನ್ನು GSLV-F15 ರಾಕೆಟ್ ಕಾರ್ಯಾಚರಣೆಯ ಮಿಷನ್ ನಿರ್ದೇಶಕ ಥಾಮಸ್ ಕುರಿಯನ್ ಅವರು ಕೂಡ, 'ಇದು GSLV ನಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾಗಿದೆ' ಎಂದು ಯಶಸ್ವಿಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Related image1
ISRO ಹೊಸ ಹೆಜ್ಜೆ, ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದತ್ತ.. NASA ಹಾದಿಯಲ್ಲಿ ಭಾರತ..!
Related image2
ಮತ್ತೆ ಮಳೆ ಬರುತ್ತಾ ಇದೆ.. ಎರಡು ದೈತ್ಯ ಮಳೆ ಮಾರುತದ ಫೋಟೋ ರಿಲೀಸ್‌ ಮಾಡಿ ಎಚ್ಚರಿಕೆ ಕೊಟ್ಟ ISRO
35
ISRO: ಈ ಸಾಧನೆ ನಮಗೆಲ್ಲ ಹೆಮ್ಮೆ
Image Credit : ISRO

ISRO: ಈ ಸಾಧನೆ ನಮಗೆಲ್ಲ ಹೆಮ್ಮೆ

ಇದು ನಮಗೆಲ್ಲರಿಗೂ ಬಹಳ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ ಎಂದ ಅವರು, GSLV ಯ ಯಶಸ್ಸು ತನ್ನ 19 ನೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ, ಈ ಕಾರ್ಯಾಚರಣೆಯು EOS-05 ಅನ್ನು ಹೊತ್ತೊಯ್ದಿದೆ. ಇದು ಅನನ್ಯವಾಗಿ ಕಾನ್ಫಿಗರ್ ಮಾಡಲಾದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ನೈಜ-ಸಮಯದ ಚಿತ್ರಣವನ್ನು ಹೊಂದಿದೆ. ಇದು GSLV ಯಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲ್ಪಟ್ಟ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಉಡಾವಣೆಯು ಕೆಲವೇ ನಿಮಿಷಗಳವರೆಗೆ ಇರುತ್ತದೆ, ಆದರೆ ಆ ಕೆಲವು ನಿಮಿಷಗಳ ಹಿಂದೆ ತಿಂಗಳುಗಳು ಮತ್ತು ವರ್ಷಗಳ ಕಠಿಣ ಪ್ರಯತ್ನವಿದೆ' ಎಂದು ಹೇಳಿದ್ದಾರೆ.

45
ಭಾರತದ ಮೊಟ್ಟಮೊದಲ ಇಮೇಜಿಂಗ್‌ ಸಾಟಲೈಟ್‌ EOS-05
Image Credit : ISRO/X

ಭಾರತದ ಮೊಟ್ಟಮೊದಲ ಇಮೇಜಿಂಗ್‌ ಸಾಟಲೈಟ್‌ EOS-05

EOS-05 ಭಾರತದ ಮೊಟ್ಟಮೊದಲ ಇಮೇಜಿಂಗ್ ಉಪಗ್ರಹವಾಗಿದ್ದು, ಭೂ-ಸಿಂಕ್ರೋನಸ್ ಕಕ್ಷೆಯಿಂದ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದಲ್ಲಿ ಸಬ್-GTO ಕಕ್ಷೆಯಿಂದ ಭಾರತದ ಭೌಗೋಳಿಕತೆ ಮೇಲೆ ನಿಗಾವಹಿಸಲಿದ್ದು, ಇದರ ನಿಯೋಜನೆಯು ಭೂಮಿಯ ವೀಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಲಿದೆ.

55
GSLV-F17 ದ ಎಷ್ಟು ಭಾರವಿದೆ?
Image Credit : Asianet News

GSLV-F17 ದ ಎಷ್ಟು ಭಾರವಿದೆ?

GSLV-F17 ಉಡಾವಣಾ ವಾಹನವು 51.7 ಮೀಟರ್ ಎತ್ತರ ಮತ್ತು 420.5 ಟನ್‌ಗಳಷ್ಟು ಉಡಾವಣಾ ತೂಕ ಹೊಂದಿದ್ದು, ಇದು ಭಾರತದ ಅತಿದೊಡ್ಡ ಕಾರ್ಯಾಚರಣಾ ಉಡಾವಣಾ ವಾಹನಗಳಲ್ಲಿ ಒಂದಾಗಿದೆ.

ಸಚಿವ ಜಿತೇಂದ್ರ ಸಿಂಗ್ ಶ್ಲಾಘನೆ

ಇಸ್ರೋದ ಜಿಎಸ್ಎಲ್ವಿ-ಎಫ್ 17 ರಾಕೆಟ್ ಮಿಷನ್ ಯಶಸ್ವಿ ಉಡಾವಣೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಶ್ಲಾಘಿಸಿದ್ದಾರೆ. ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳು ಹೊಸ ಎತ್ತರಕ್ಕೆ ಏರುತ್ತಲೇ ಇವೆ, ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, 'EOS-05 ಒಂದು ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಭೂ-ಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾಗಿದ್ದು, ಗೋಚರ, ಅತಿಗೆಂಪು, ಮಲ್ಟಿಸ್ಪೆಕ್ಟ್ರಲ್ ಮತ್ತು ಹೈಪರ್‌ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಸುಧಾರಿತ ಇಮೇಜಿಂಗ್ ಅನ್ನು ಸಕ್ರಿಯಗೊಳಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

ಇಸ್ರೋ ಮುಖ್ಯಸ್ಥ ಭಾಷಣದಲ್ಲಿ ಹೇಳಿದ್ದೇನು?

EOS-05 ಉಡಾವಣೆಯ ನಂತರ ಭಾಷಣ ಮಾಡಿದ ಇಸ್ರೋ ಮುಖ್ಯಸ್ಥ, ಈ ನಡುವೆ ಈ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಸಿಬ್ಬಂದಿರಹಿತ ಗಗನಯಾನ ಕಾರ್ಯಾಚರಣೆಯ ಉಡಾವಣೆಗೆ ಹೊಸ ಹುರುಪಿನಿಂದ ವ್ಯವಸ್ಥಿತ ಕೆಲಸ ನಡೆಯುತ್ತಿದೆ ಎಂದಿದ್ದಾರೆ. ಇದೇ ವೇಳೆ

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ನಾರಾಯಣನ್, ಈ ಹಣಕಾಸು ವರ್ಷದಲ್ಲಿ ನ್ಯಾವಿಗೇಷನ್ ಉಪಗ್ರಹ NVS-03 ಸೇರಿದಂತೆ ಇನ್ನೂ ಆರು ಉಡಾವಣೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಇಸ್ರೋ

Latest Videos
Recommended Stories
Recommended image1
ಬೈ ಅಪ್ಪಾ, ಅಮ್ಮಾ: ಹಾಸ್ಟೆಲ್​ ಅವಶೇಷದಡಿ ಸಿಲುಕಿದ ವಿದ್ಯಾರ್ಥಿಯ ಕಣ್ಣೀರು ತರಿಸುವ ವಿಡಿಯೋ- ಮುಂದಾಯ್ತು ಪವಾಡ
Recommended image2
ದೇಶದಾದ್ಯಂತ 15 ಕೋಟಿ ಜನಧನ ಖಾತೆಗಳು ನಿಷ್ಕ್ರಿಯ: ಆರ್‌ಟಿಐನಲ್ಲಿ ಬಯಲಾಯ್ತು ಸತ್ಯ!
Recommended image3
Monsoon Final Push: ದಕ್ಷಿಣ ಭಾರತ ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಉಪಗ್ರಹ ಚಿತ್ರ, ಈ ಪ್ರದೇಶಗಳಲ್ಲಿ ಭಾರೀ ಮಳೆ ಮುನ್ಸೂಚನೆ
Related Stories
Recommended image1
ISRO ಹೊಸ ಹೆಜ್ಜೆ, ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದತ್ತ.. NASA ಹಾದಿಯಲ್ಲಿ ಭಾರತ..!
Recommended image2
ಮತ್ತೆ ಮಳೆ ಬರುತ್ತಾ ಇದೆ.. ಎರಡು ದೈತ್ಯ ಮಳೆ ಮಾರುತದ ಫೋಟೋ ರಿಲೀಸ್‌ ಮಾಡಿ ಎಚ್ಚರಿಕೆ ಕೊಟ್ಟ ISRO
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved