ಕೆಲವು ದಿನಗಳ ಹಿಂದಷ್ಟೇ ವಿನಯ್ ಗೌಡ ಅವರು ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಮೇಲೆ ಸ್ವಲ್ಪ ಗರಂ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಆದರೆ ಈಗ ಈ ಫೋನ್ ಗಿಫ್ಟ್ ಕೊಟ್ಟ ವಿಡಿಯೋ ವೈರಲ್ ಆಗ್ತಿದ್ದಂತೆ, ಟ್ರೋಲರ್‌ಗಳೆಲ್ಲಾ ಸೈಲೆಂಟ್ ಆಗಿದ್ದಾರೆ. ಏನಿದು ಹೊಸ ಕತೆ? ನೋಡಿ..
Vinay Gowda Bigg Boss-Priyanka Agniparikshe contestant-Vinay Gowda gifts phone to -riyanka-ನುಡಿದಂತೆ ನಡೆದು ತಂಗಿ ಮನಗೆದ್ದ ವಿನಯ್ ಗೌಡ!
ಬೆಂಗಳೂರು: ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6 ರಂದು ಗ್ರ್ಯಾಂಡ್ ಆಗಿ ಶೋ ಲಾಂಚ್ ಆಗಲಿದ್ದು, ಇಡೀ ರಾಜ್ಯವೇ ಈಗ 'ಕಿಚ್ಚ'ನ ಎಂಟ್ರಿಗಾಗಿ ಕಾಯುತ್ತಿದೆ. ಆದರೆ, ಈ ಬಾರಿ ಮನೆ ಒಳಗೆ ಹೋಗೋಕೆ ಮೊದಲೇ ದೊಡ್ಡ ಹಂಗಾಮಾ ಶುರುವಾಗಿದೆ! ಅದರಲ್ಲೂ ಬಿಗ್ ಬಾಸ್‌ನ 'ಅಗ್ನಿಪರೀಕ್ಷೆ' ಕಾರ್ಯಕ್ರಮವಂತೂ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ಈ ಅಗ್ನಿಪರೀಕ್ಷೆಯಲ್ಲಿ ಜಡ್ಜ್ ಆಗಿ ಕುಳಿತಿರೋದು ಬೇರೆ ಯಾರೂ ಅಲ್ಲ, ಬಿಗ್ ಬಾಸ್ ಇತಿಹಾಸದ ಪವರ್‌ಫುಲ್ ಕಂಟೆಸ್ಟೆಂಟ್, ನಮ್ಮ 'ಆನೆ' ವಿನಯ್ ಗೌಡ!
ಫೋನ್ ಒಡೆದ ಸಾಹಸ.. ಆನೆ ಕೊಟ್ಟ ಭರವಸೆ!
ಈಗ ವಿಷಯ ಏನಪ್ಪಾ ಅಂದ್ರೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬೇಕು ಅನ್ನೋ ಹಂಬಲದಲ್ಲಿ ಬಂದಿರೋ ಸ್ಪರ್ಧಿಗಳಿಗೆ ಜಡ್ಜ್‌ಗಳು ಸವಾಲುಗಳ ಮೇಲೆ ಸವಾಲು ಎಸೆಯುತ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಇಬ್ಬರು ಯುವತಿಯರಿಗೆ ಜಡ್ಜ್‌ಗಳು ಒಂದು ವಿಚಿತ್ರ ಕಂಡೀಷನ್ ಹಾಕಿದ್ದರು. ಅದೇನಪ್ಪಾ ಅಂದ್ರೆ, "ಬಿಗ್ ಬಾಸ್ ಮೇಲೆ ಅಷ್ಟೊಂದು ಕ್ರೇಜ್ ಇದ್ರೆ, ನಿಮ್ಮ ಕೈಯಲ್ಲಿರೋ ಫೋನ್ ಅನ್ನು ವೇದಿಕೆ ಮೇಲೆ ಹೊಡೆದು ಹಾಕಿ!" ಅಂದಿದ್ದರು. ಇಂದಿನ ಕಾಲದಲ್ಲಿ ಜೀವ ಹೋದ್ರೂ ಪರವಾಗಿಲ್ಲ ಫೋನ್ ಇರಬೇಕು ಅನ್ನೋ ಯುವತಿಯರ ನಡುವೆ, ಪ್ರಿಯಾಂಕಾ ಎನ್ನುವ ಸ್ಪರ್ಧಿ ಏನನ್ನೂ ಯೋಚಿಸದೆ ಧಡಾಮ್ ಅಂತ ತಮ್ಮ ಫೋನ್ ಒಡೆದು ಹಾಕಿದ್ದರು.
ಪ್ರಿಯಾಂಕಾ ಅವರ ಈ ಧೈರ್ಯ ನೋಡಿ ಸ್ವತಃ ವಿನಯ್ ಗೌಡ ಅವರೇ ಬೆರಗಾಗಿದ್ದರು. ಅಷ್ಟೇ ಅಲ್ಲ, "ನೀವು ಫೋನ್ ಒಡೆದಿದ್ದಕ್ಕೆ ಬೇಸರ ಮಾಡ್ಕೋಬೇಡಿ, ನಾನು ನಿಮಗೆ ಹೊಸ ಫೋನ್ ಕೊಡಿಸ್ತೀನಿ" ಅಂತ ವೇದಿಕೆ ಮೇಲೆ ಮಾತು ಕೊಟ್ಟಿದ್ದರು.
ನುಡಿದಂತೆ ನಡೆದ ವಿನಯ್ ಗೌಡ: ರಕ್ಷಾಬಂಧನದ ಸ್ಪೆಷಲ್ ಗಿಫ್ಟ್!
ಸಾಮಾನ್ಯವಾಗಿ ಟಿವಿಯಲ್ಲಿ ಕೊಟ್ಟ ಮಾತುಗಳನ್ನು ವೇದಿಕೆ ಮೇಲೆಯೇ ಮರೆತು ಬಿಡೋದು ಹೆಚ್ಚು. ಆದರೆ ವಿನಯ್ ಗೌಡ ಅವರದ್ದು 'ಆನೆ' ನಡಿಗೆ! ಕೊಟ್ಟ ಮಾತನ್ನ ಉಳಿಸಿಕೊಳ್ಳೋಕೆ ಅವರು ರಕ್ಷಾಬಂಧನದ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದರು. ಇತ್ತೀಚೆಗೆ ಕಾರಿನಿಂದ ಫುಲ್ ರಗಡ್ ಆಗಿ ಇಳಿದು ಬಂದ ವಿನಯ್ ಗೌಡ, ನೇರವಾಗಿ ಮೊಬೈಲ್ ಶಾಪ್‌ಗೆ ಹೋಗಿ ಪ್ರಿಯಾಂಕಾಗೆ ಹೊಸ ಬ್ರ್ಯಾಂಡೆಡ್ ಫೋನ್ ಕೊಡಿಸಿದ್ದಾರೆ.
ಈ ವೇಳೆ ಪ್ರಿಯಾಂಕಾ ಅವರು ವಿನಯ್ ಗೌಡ ಅವರಿಗೆ ಹೂವು ಕೊಟ್ಟು ಸ್ವಾಗತಿಸಿ, ಕೈಗೆ ರಾಖಿ ಕಟ್ಟಿ, ಹಣೆಗೆ ಕುಂಕುಮವಿಟ್ಟು "ನನ್ನ ಅಣ್ಣ" ಅಂತ ಸಂಭ್ರಮಿಸಿದ್ದಾರೆ. ಪ್ರಿಯಾಂಕಾ ಅವರ ಮುಖದಲ್ಲಿನ ಆ ಖುಷಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಟ್ರೋಲ್ ಮಾಡೋವ್ರ ಬಾಯಿ ಮುಚ್ಚಿಸಿದ 'ಆನೆ'!
ಕೆಲವು ದಿನಗಳ ಹಿಂದಷ್ಟೇ ವಿನಯ್ ಗೌಡ ಅವರು ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಮೇಲೆ ಸ್ವಲ್ಪ ಗರಂ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಆದರೆ ಈಗ ಈ ಫೋನ್ ಗಿಫ್ಟ್ ಕೊಟ್ಟ ವಿಡಿಯೋ ವೈರಲ್ ಆಗ್ತಿದ್ದಂತೆ, ಟ್ರೋಲರ್‌ಗಳೆಲ್ಲಾ ಸೈಲೆಂಟ್ ಆಗಿದ್ದಾರೆ. "ವಿನಯ್ ಅಣ್ಣ ಅಂದ್ರೆ ಆನೆ ಇದ್ದಂತೆ, ಕೊಟ್ಟ ಮಾತು ಯಾವತ್ತೂ ತಪ್ಪಲ್ಲ" ಅಂತ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳ ಮಳೆ ಸುರಿಸುತ್ತಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 13 ಶುರುವಾಗೋ ಮೊದಲೇ ಸೋದರ-ಸೋದರಿಯ ಬಾಂಧವ್ಯಕ್ಕೆ ವೇದಿಕೆಯಾಗಿದೆ. ಇನ್ನು ಸೆಪ್ಟೆಂಬರ್ 6 ರಂದು ನಡೆಯಲಿರೋ ಗ್ರ್ಯಾಂಡ್ ಲಾಂಚ್‌ನಲ್ಲಿ ಕಿಚ್ಚ ಸುದೀಪ್ ಅವರು ಈ ಬಾರಿ ಯಾವೆಲ್ಲಾ ಸರ್‌ಪ್ರೈಸ್ ನೀಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕು!


