ಈ ವೀಕೆಂಡ್ ಬೆಂಗಳೂರಲ್ಲಿ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಕಬ್ಬನ್ ಪಾರ್ಕ್ ಸೈಕ್ಲಿಂಗ್‌ನಿಂದ ಹಿಡಿದು ಚರ್ಚ್ ಸ್ಟ್ರೀಟ್ ಸುತ್ತಾಟದವರೆಗೆ, ಇಲ್ಲಿದೆ 5 ಮಸ್ತ್ ಐಡಿಯಾಗಳು. ಲಾಲ್‌ಬಾಗ್, ಮೈಕ್ರೋಬ್ರೂವರಿ, ಕೆ.ಆರ್. ಮಾರ್ಕೆಟ್ ಕೂಡ ಲಿಸ್ಟ್‌ನಲ್ಲಿದೆ.

ಬೆಂಗಳೂರು ಮಂದಿ, ವೀಕೆಂಡ್​ಗೆ ರೆಡಿಯಾ? ನಮ್ಮ ಡೈನಾಮಿಕ್ ಸಿಟಿ ವೀಕೆಂಡ್ ಬಂತು ಅಂದ್ರೆ ಸಾಕು, ಚಟುವಟಿಕೆಗಳಿಂದ ತುಂಬಿ ತುಳುಕುತ್ತೆ. ಬೋರಿಂಗ್ ಆಫೀಸ್ ಕೆಲಸವನ್ನೆಲ್ಲಾ ಮರೆತುಬಿಡಿ. ರಿಲ್ಯಾಕ್ಸ್, ಮಜಾ, ಅಡ್ವೆಂಚರ್... ಎಲ್ಲದಕ್ಕೂ ಇಲ್ಲಿ ಜಾಗವಿದೆ. ನಿಮಗಾಗಿ ಒಂದು ಸೂಪರ್ ಗೈಡ್ ಇಲ್ಲಿದೆ.

ಬೆಂಗಳೂರು ಅಂದ್ರೆ ಬರೀ ಭಾರತದ 'ಸಿಲಿಕಾನ್ ವ್ಯಾಲಿ' ಅಷ್ಟೇ ಅಲ್ಲ. ಇಲ್ಲಿ ಹಸಿರು ಪರಿಸರ ಮತ್ತು ನಗರದ ವೈಬ್ ಎರಡೂ ಮಿಕ್ಸ್ ಆಗಿದೆ. ಅದಕ್ಕೇ ಇದು ಪರ್ಫೆಕ್ಟ್ ವೀಕೆಂಡ್ ಎಸ್ಕೇಪ್. ಪ್ರತಿಯೊಬ್ಬರಿಗೂ, ಪ್ರತಿಯೊಂದು ಮೂಡ್‌ಗೂ ಇಲ್ಲಿ ಏನಾದರೊಂದು ಇದ್ದೇ ಇರುತ್ತೆ. ಅದಕ್ಕೆ, ಈ ವೀಕೆಂಡ್​ನಲ್ಲಿ ಮಾಡಲು 5 ಮಜವಾದ ಜಾಗಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪ್ರತಿಯೊಬ್ಬರ ಆಸಕ್ತಿಗೂ, ಪ್ರತಿಯೊಂದು ಮೂಡ್‌ಗೂ ಇಲ್ಲಿ ಏನಾದರೊಂದು ಸಿಗುತ್ತೆ. ಹಸಿರ ಮಡಿಲಲ್ಲಿ ಸುತ್ತಾಟ, ಸೈಕಲ್ ಸವಾರಿ

1. ಕಬ್ಬನ್ ಪಾರ್ಕ್ ಸೈಕ್ಲಿಂಗ್

ವೀಕೆಂಡ್ ಶುರು ಮಾಡೋಕೆ ಇದಕ್ಕಿಂತ ಒಳ್ಳೆ ದಾರಿ ಇನ್ನೊಂದಿಲ್ಲ. ಬೆಂಗಳೂರಿನ 'ಶ್ವಾಸಕೋಶ' ಅಂತಾನೇ ಫೇಮಸ್ ಆಗಿರೋ ಈ ಜಾಗ, ದಿನವನ್ನು ಫ್ರೆಶ್ ಆಗಿ ಶುರು ಮಾಡಲು ಬೆಸ್ಟ್. ನಿಮಗೆ ಶಾಂತವಾದ ವಾತಾವರಣ ಬೇಕಾ? ಹಾಗಿದ್ರೆ ಕಬ್ಬನ್ ಪಾರ್ಕ್‌ನಲ್ಲಿ ಸೈಕಲ್ ತುಳಿಯಿರಿ. ಶನಿವಾರ ಮತ್ತು ಭಾನುವಾರ ಇಲ್ಲಿಗೆ ಬರುವವರಿಗೆ ಸುಲಭವಾಗಿ ಬಾಡಿಗೆಗೆ ಸೈಕಲ್ ಸಿಗುತ್ತೆ. ಮರಗಳ ನೆರಳಿನಲ್ಲಿ, ಸ್ಮಾರಕಗಳನ್ನು ನೋಡುತ್ತಾ, ತಣ್ಣನೆಯ ಗಾಳಿ ಸೇವಿಸುತ್ತಾ ಸೈಕಲ್ ಓಡಿಸಬಹುದು. ನಗರದ ಹೃದಯ ಭಾಗದಲ್ಲೇ ಇರುವ ಈ ಹಸಿರು ತಾಣ, ನಿಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ಚೈತನ್ಯ ನೀಡುತ್ತೆ.

2. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ಸ್

ನಗರದ ಗದ್ದಲದಿಂದ ದೂರ ಹೋಗಿ ಸ್ವಲ್ಪ ಹೊತ್ತು ನೆಮ್ಮದಿಯಾಗಿರಬೇಕು ಅನಿಸಿದರೆ ಲಾಲ್‌ಬಾಗ್‌ಗೆ ಹೋಗಿ. 18ನೇ ಶತಮಾನದ ಈ ಐತಿಹಾಸಿಕ ತಾಣದಲ್ಲಿ ಸಾವಿರಾರು ಬಗೆಯ ಸಸ್ಯಗಳಿವೆ. ಇಲ್ಲಿನ ಭವ್ಯವಾದ ಗಾಜಿನ ಮನೆ (Glass House) ಮತ್ತು ಸುಂದರ ಪರಿಸರ ಕಣ್ಣಿಗೆ ಹಬ್ಬ. ಅಂದವಾಗಿ ನಿರ್ವಹಣೆ ಮಾಡಿರುವ ದಾರಿಗಳಲ್ಲಿ ಆರಾಮವಾಗಿ ವಾಕ್ ಮಾಡಬಹುದು. ಸಸ್ಯಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಅಥವಾ ಸುಮ್ಮನೆ ವಾಕ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಜಾಗ.

3. ಚರ್ಚ್ ಸ್ಟ್ರೀಟ್ ಹಾಪಿಂಗ್

ಎಂ.ಜಿ. ರೋಡ್ ಮೆಟ್ರೋದಿಂದ ಇಳಿದರೆ ಸಾಕು, ಈ ಐಕಾನಿಕ್ ರಸ್ತೆ ನಿಮ್ಮನ್ನು ಸ್ವಾಗತಿಸುತ್ತೆ. ಇದು ಅರ್ಬನ್ ಅಡ್ವೆಂಚರ್ ಇಷ್ಟಪಡೋರ ಹಾಟ್​ಸ್ಪಾಟ್. ಇಲ್ಲಿ ವೆರೈಟಿ ಕೆಫೆಗಳು, ವರ್ಲ್ಡ್ ಕ್ಲಾಸ್ ರೆಸ್ಟೋರೆಂಟ್‌ಗಳು, ವೈಬ್ರೆಂಟ್ ಪಬ್‌ಗಳು ಮತ್ತು ಪುಸ್ತಕದಂಗಡಿಗಳು ತುಂಬಿವೆ. ಜನರನ್ನು ನೋಡುತ್ತಾ, ಕಾಸ್ಮೋಪಾಲಿಟನ್ ವೈಬ್ ಎಂಜಾಯ್ ಮಾಡುತ್ತಾ ಸುತ್ತಾಡಿ. ಒಳ್ಳೆ ಊಟ, ಒಂದು ಕಪ್ ಕಾಫಿ ಅಥವಾ ಹೊಸ ಪುಸ್ತಕ... ಹೀಗೆ ಚರ್ಚ್ ಸ್ಟ್ರೀಟ್ ನಿಮಗೆ ಪಕ್ಕಾ ಬೆಂಗಳೂರು ಅನುಭವ ನೀಡುತ್ತೆ.

4. ಮೈಕ್ರೋಬ್ರೂವರಿಗಳಲ್ಲಿ ಬಿಯರ್ ಹಾಪಿಂಗ್!

ಬೆಂಗಳೂರನ್ನು ಭಾರತದ 'ಪಬ್ ಕ್ಯಾಪಿಟಲ್' ಅಂತ ಸುಮ್ನೆ ಕರೆಯಲ್ಲ. ಇತ್ತೀಚೆಗೆ ಈ ಟ್ರೆಂಡ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ನಗರದಲ್ಲಿ ಅಸಂಖ್ಯಾತ ಮೈಕ್ರೋಬ್ರೂವರಿಗಳಿವೆ, ಪ್ರತಿಯೊಂದೂ ತನ್ನದೇ ಆದ ವಿಶೇಷ ಆಂಬಿಯನ್ಸ್ ಹೊಂದಿದೆ. ಹಾಪಿ IPAಗಳಿಂದ ಹಿಡಿದು ರಿಚ್ ಸ್ಟೌಟ್‌ಗಳವರೆಗೆ, ಪ್ರತಿಯೊಬ್ಬರ ಟೇಸ್ಟ್‌ಗೂ ಇಲ್ಲಿ ಬಿಯರ್ ಸಿಗುತ್ತೆ. ಸ್ನೇಹಿತರ ಜೊತೆ ಹ್ಯಾಂಗೌಟ್ ಮಾಡಲು, ರಿಲ್ಯಾಕ್ಸ್ ಆಗಲು ಮತ್ತು ಬೆಂಗಳೂರಿನ ಮಾಡರ್ನ್ ಕಲ್ಚರ್ ಅನುಭವಿಸಲು ಇದು ಸೂಪರ್ ದಾರಿ.

5. ಕೆ.ಆರ್. ಮಾರ್ಕೆಟ್ (ಕೃಷ್ಣ ರಾಜೇಂದ್ರ ಮಾರುಕಟ್ಟೆ)

ಈ ಜಾಗ ಯಾವಾಗ್ಲೂ ಜನರಿಂದ ತುಂಬಿರುತ್ತೆ. ಇಲ್ಲಿ ತಾಜಾ ಹೂವು, ಹಣ್ಣು, ತರಕಾರಿಗಳು ಸೇರಿದಂತೆ ನೂರಾರು ಬಗೆಯ ವಸ್ತುಗಳ ವ್ಯಾಪಾರ ಜೋರಾಗಿ ನಡೆಯುತ್ತೆ. ಕೆ.ಆರ್. ಮಾರ್ಕೆಟ್ ಕೇವಲ ಒಂದು ಮಾರುಕಟ್ಟೆಯಲ್ಲ, ಇದು ಬೆಂಗಳೂರಿನ ಪರಂಪರೆ ಮತ್ತು ದೈನಂದಿನ ಬದುಕಿನ ಜೀವಂತ ಸಾಕ್ಷಿ. ನಗರದ ನಾಡಿಮಿಡಿತವನ್ನು ನೇರವಾಗಿ ಅನುಭವಿಸಲು ಇದೊಂದು ಸರಳ ಮತ್ತು ಅತ್ಯುತ್ತಮ ವೀಕೆಂಡ್ ಪ್ಲ್ಯಾನ್.