ಅವರು ಈಗಾಗಲೇ ಒಮ್ಮೆ ನೋಡಿ ಇಷ್ಟಪಟ್ಟು ಮತ್ತೆ ನೋಡೋಕೆ ಬಂದಿದಾರೆ.. ಯಾರೂ ಬೇರೆಯವರ ಒಪಿನಿಯನ್ ಕೇಳಿ, ಸಿನಿಮಾ ನೋಡದೇ ಇರಬೇಡಿ.. ನೀವು ಒಮ್ಮೆ ನೋಡಿ.. ಹಾಗೇ, ಎಲ್ಲರೂ ಥೇಟರ್‌ಗೇ ಹೋಗಿ ಈ ಮೂವಿ ನೋಡಿ..' ಎಂದು ಹೇಳಿದ್ದಾರೆ ರಕ್ಷಿತಾ ಪ್ರೇಮ್.
Rakshitha Prem-Yash Toxic Movie-Toxic Kannada Cinema-Rakshitha Prem Reaction-ಯಶ್ ಟಾಕ್ಸಿಕ್ ಸಿನಿಮಾ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಹೇಳಿದ್ದು ಇದು!
ಕನ್ನಡದ ನಟ, ಪ್ಯಾನ್ ವರ್ಲ್ಡ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಹಲವು ಕಡೆ ಟಾಕ್ಸಿಕ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದರೂ, ವಿದೇಶಗಳಲ್ಲಿ ಈ ಚಿತ್ರವು ದಿನದಿನಕ್ಕೂ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ದಿನದಿನಕ್ಕೂ ಕಲೆಕ್ಷನ್‌ನಲ್ಲಿ ಏರಿಕೆ ಆಗುತ್ತಲೇ ಇದೆ. ಕರ್ನಾಟಕ ಸೇರಿದಂತೆ ಭಾರತದ ಹಲವು ಕಡೆಗಳಲ್ಲಿ ಈ ಚಿತ್ರದ ಬಗ್ಗೆ ನೆಗೆಟಿವ್ ರೀವ್ಯೂ ಬರುತ್ತಿದ್ದಂತೆ, ಈ ಚಿತ್ರದ ಬಗ್ಗೆ ಇದೀಗ ಸಾಕಷ್ಟು ಪೊಸೆಟಿವ್ ಟಾಕ್ ಕೂಡ ಬರುತ್ತಿವೆ.
ಟಾಕ್ಸಿಕ್ ಚಿತ್ರದ ಬಗ್ಗೆ ಕನ್ನಡದ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮೆಚ್ಚುಗೆ
ನಿನ್ನೆ ಟಾಕ್ಸಿಕ್ ಚಿತ್ರದ ಬಗ್ಗೆ ಕನ್ನಡದ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರು ಈ ಚಿತ್ರವನ್ನು ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ ತಮ್ಮತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಯಶ್ ಹಾಗೂ ಚಿತ್ರತಂಡದ ಬೆನ್ನುತಟ್ಟುವ ಕೆಲಸ ಮಾಡಿದ್ದರು. ಇದೀಗ ಕನ್ನಡ ನಟಿ, ಒಂದು ಕಾಲದ ಸ್ಟಾರ್ ಹಿರೋಯಿನ್ ರಕ್ಷಿತಾ ಪ್ರೇಮ್ ಅವರು ಟಾಕ್ಸಿಕ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನ್ನಾಡಿ, ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ರಕ್ಷಿತಾ ಪ್ರೇಮ್ ಅದೇನು ಹೇಳಿದ್ದಾರೆ ನೋಡಿ..
ಟಾಕ್ಸಿಕ್ ಬಗ್ಗೆ ರಕ್ಷಿತಾ ಪ್ರೇಮ್ ಫಸ್ಟ್ ರಿಯಾಕ್ಷನ್:-
'ಜನ ಏನೇನೋ ಹೇಳ್ತಾರೆ, ನೀವ್ ಹೋಗಿ ಮೂವಿ ನೋಡಿ, ಆಮೇಲೆ ಮಾತಾಡಿ.. ಪ್ರಾಮಾಣಿಕವಾಗಿ ಹೇಳ್ತಾ ಇದೀನಿ, ಫಸ್ಟ್ ಆಫ್ ಮುಗಿದಿದೆ, ನನಗೆ ತುಂಬಾ ಈ ಸಿನಿಮಾ ತುಂಬಾ ಇಷ್ಟ ಆಯ್ತು.. ನನ್ನ ಜೊತೆ ನನ್ನ ಫ್ರೆಂಡ್ ರಘು ಕೂಡ ಈ ಸಿನಿಮಾ ನೋಡೋಕೆ ಬಂದಿದಾರೆ, ಅವರು ಈಗಾಗಲೇ ಒಮ್ಮೆ ನೋಡಿ ಇಷ್ಟಪಟ್ಟು ಮತ್ತೆ ನೋಡೋಕೆ ಬಂದಿದಾರೆ.. ಯಾರೂ ಬೇರೆಯವರ ಒಪಿನಿಯನ್ ಕೇಳಿ, ಸಿನಿಮಾ ನೋಡದೇ ಇರಬೇಡಿ.. ನೀವು ಒಮ್ಮೆ ನೋಡಿ.. ಹಾಗೇ, ಎಲ್ಲರೂ ಥೇಟರ್‌ಗೇ ಹೋಗಿ ಈ ಮೂವಿ ನೋಡಿ..' ಎಂದು ಹೇಳಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
