ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಲೇಖನವು ಗುರುವಿನ ಮಹತ್ವವನ್ನು ಸಾರುವುದರ ಜೊತೆಗೆ, ಈ ವಿಶೇಷ ದಿನದಂದು ನಿಮ್ಮ ಗುರುಗಳಿಗೆ ಕಳುಹಿಸಬಹುದಾದ ಸುಂದರ ಸಂದೇಶಗಳು ಮತ್ತು ಶುಭಾಶಯಗಳನ್ನು ಒಳಗೊಂಡಿದೆ.

ಅಜ್ಞಾನದ ಕತ್ತಲೆಯನ್ನು ಓಡಿಸಿ, ಸುಜ್ಞಾನದ ಬೆಳಕನ್ನು ಚೆಲ್ಲಿ, ಬದುಕಿನ ಸರಿಯಾದ ಹಾದಿಯನ್ನು ತೋರಿಸುವ ಪವಿತ್ರ ವೃತ್ತಿ ಎಂದರೆ ಅದು ಬೋಧನೆ. ಸಮಾಜಕ್ಕೆ ನೈತಿಕ ಹಾಗೂ ಬೌದ್ಧಿಕ ಅಡಿಪಾಯ ಹಾಕುವ ಗುರುಗಳನ್ನು ಸ್ಮರಿಸಿ, ಗೌರವಿಸುವ ಸುದಿನವೇ ಶಿಕ್ಷಕರ ದಿನಾಚರಣೆ. ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಅತ್ಯಂತ ಆದರ-ಗೌರವಗಳಿಂದ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆ

ಭಾರತದ ಮಾಜಿ ರಾಷ್ಟ್ರಪತಿ, ಶ್ರೇಷ್ಠ ಶಿಕ್ಷಣ ತಜ್ಞ ಹಾಗೂ 'ಭಾರತರತ್ನ' ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಡಾ. ರಾಧಾಕೃಷ್ಣನ್ ಅವರು ತತ್ವಜ್ಞಾನಿಯಾಗಿ ಮತ್ತು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರೂ, ತಮ್ಮನ್ನು ಕೊನೆಯವರೆಗೂ ಒಬ್ಬ ಶಿಕ್ಷಕನೆಂದೇ ಗುರುತಿಸಿಕೊಳ್ಳಲು ಬಯಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆ ಹಾಗೂ ಶಿಕ್ಷಕ ವೃತ್ತಿಗೆ ತಂದಿತ್ತ ಗೌರವವನ್ನು ಚಿರಸ್ಥಾಯಿಗೊಳಿಸಲು ಅವರ ಜನ್ಮದಿನವನ್ನು ದೇಶಾದ್ಯಂತ ಈ ರೀತಿ ಆಚರಿಸಿಕೊಂಡು ಬರಲಾಗುತ್ತಿದೆ.

ಸುಂದರ ಸಂದೇಶಗಳು

"ಪ್ರಪಂಚದಲ್ಲಿ ನೂರಾರು ವೃತ್ತಿಗಳಿರಬಹುದು; ಆದರೆ ಆ ಎಲ್ಲಾ ವೃತ್ತಿಗಳನ್ನು ಸೃಷ್ಟಿಸುವ ಏಕೈಕ ಪವಿತ್ರ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ." ಇಲ್ಲಿ ಅಂತ ಶಿಕ್ಷಕನಿಗೆ ವಿದ್ಯಾರ್ಥಿಗಳು ಶುಭಾಶಯ ತಿಳಿಸುವ ಸುಂದರ ಸಂದೇಶಗಳನ್ನು ನೀಡಲಾಗಿದೆ.

ಗುರು ಎಂದರೆ ಕೇವಲ ನಾಲ್ಕು ಭೌತಿಕ ಗೋಡೆಗಳ ಮಧ್ಯೆ ಪಾಠ ಮಾಡುವ ವ್ಯಕ್ತಿಯಷ್ಟೇ ಅಲ್ಲ; ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ಯುವ ದಿವ್ಯ ಶಕ್ತಿ.

ಜ್ಞಾನದ ದೀಪವ ಹಚ್ಚಿದವರು, ಬದುಕಿನ ಹಾದಿಯ ತೋರಿಸಿದವರು, ಅಕ್ಷರ ಜ್ಞಾನವ ಕಲಿಸಿದ ಗುರುಗೆ, ನಮ್ಮ ಮನದ ನಮನ .

ಅಜ್ಞಾನದ ಕತ್ತಲು ಹರಿಸಿ, ಸತ್ಪ್ರಜೆಯಾಗಿ ಬಾಳಲು ಹರಿಸಿ, ತಾಯಿಯಂತೆ ಕೈಹಿಡಿದು ನಡೆಸುವ ಗುರುವಿಗೆ ಸಾಟಿಯಿಲ್ಲ ಈ ಜಗದಲ್ಲಿ.

ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು,ಗುರು ಬದುಕಿಗೆ ದಾರಿ, ಜೀವನಕ್ಕೆ ಶಕ್ತಿ.ತಪ್ಪನ್ನು ತಿದ್ದಿ, ಒಳಿತನ್ನು ಮೆಚ್ಚಿ,ನಮ್ಮನ್ನು ಬೆಳೆಸಿದ ದೇವರಿವರು

ನನ್ನ ಜೀವನದಲ್ಲಿ ಜ್ಞಾನ ಮತ್ತು ದಯೆಯಿಂದ ತುಂಬಿದ ಮಾರ್ಗದರ್ಶಕನಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವ ಶಕ್ತಿಯೇ ಗುರು.

ಒಂದು ಸಾಧಾರಣ ಕಲ್ಲನ್ನು ತಮ್ಮ ವಿಶಿಷ್ಟವಾದ, ನಯವಾದ, ನಾಜುಕಾದ ಕೆತ್ತನೆಯ ಮೂಲಕ ಒಂದು ಸುಂದರವಾದ ಮೂರ್ತಿಯನ್ನು ಮಾಡುವ ಗುರುಗಳ ಚರಣಕಮಲಗಳಿಗೆ ನನ್ನ ವಂದನೆ.

ಅಜ್ಞಾನ ತುಂಬಿದ ಬಾಳಿನಲ್ಲಿ ಜ್ಞಾನವೆಂಬ ಸುಧಯ ಚೆಲ್ಲಿ, ವಿನಯವೆಂಬ ಜ್ಯೋತಿ ಮೂಡಿಸಿ, ದೇಶಕ್ಕೆ ಸತ್ಪಜೆಯನ್ನಾಗಿ ಮಾಡಿಸಿ, ನಮ್ಮನ್ನು ಕಾಯುವ ಗುರುಗಳಿಗೆ ಮನದಾಳದ ನುಡಿನಗಳು

'ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ: ತತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ನಮ್ಮೆಲ್ಲಾ ಗುರುಗಳನ್ನು ನೆನೆಯುತ್ತಾ ಅವರ ಪಾದ ಪದ್ಮದಲಿ ನಮಿಸೋಣ.'

ಪ್ರಪಂಚದಲ್ಲಿ ನೂರು ವೃತ್ತಿಗಳು ಇದ್ದರೂ ಅವರೆಲ್ಲರನ್ನು ತಯಾರಿಸುವ ವೃತ್ತಿ ಎಂದರೆ ಶಿಕ್ಷಕ

ಅಜ್ಞಾನದ ಕತ್ತಲನ್ನು ಹೊಡೆದು, ಜ್ಞಾನದ ಬೆಳಕನ್ನು ತೋರುವ ಗುರು ಮತ್ತು ಶಿಷ್ಯರ ಪವಿತ್ರ ಸಂಬಂಧಕ್ಕೆ ನಮ್ಮ ಹೃತ್ಪೂರ್ವಕ ನಮನ

ಅಕ್ಷರ ಕಲಿಸಿ, ಬದುಕು ರೂಪಿಸಿದ ಎಲ್ಲಾ ಗುರುಗಳಿಗೂ ಶುಭಾಶಯ

ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡಿ, ಜೀವನದ ಮೌಲ್ಯಗಳನ್ನು ಕಲಿಸಿದ ಗುರುಗಳು

ದೊಡ್ಡ ಕನಸು ಕಾಣಲು ಮತ್ತು ಕಷ್ಟಪಟ್ಟು ಕೆಲಸ ಮಾಡಲು ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ನಿಮ್ಮ ತಾಳ್ಮೆ, ಮಾರ್ಗದರ್ಶನ ಮತ್ತು ಬೆಂಬಲ ನನ್ನನ್ನು ಬೆಳೆಯಲು ಸಹಾಯ ಮಾಡಿದೆ. ನಿಮ್ಮ ಪಾಠಗಳು ಎಂದೆಂದಿಗೂ ನನ್ನೊಂದಿಗೆ ಇರುತ್ತವೆ

ಗುರುಬ್ರಹ್ಮ ಗುರುವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||