ನಾಟಿ ಸ್ಟೈಲ್ ಟಗರು ಪಲ್ಯ ಸೂಪರ್ ಹಿಟ್: ವಿಜಯ ಯಾತ್ರೆಗೆ ಡಾಲಿ ಧನಂಜಯ್ ರೆಡಿ!

ಕನ್ನಡದ ಅಪ್ಪಟ ಹಳ್ಳಿ ಸೊಗಡಿನ ನಾಟಿ ಸ್ಟೈಲ್ ಟಗರು ಪಲ್ಯ ರುಚಿಗೆ ಕನ್ನಡ ಸಿನಿ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಎಷ್ಟೂ ತಿಂಗಳಾದ ಮೇಲೆ ನಮ್ಮ ನೇಚರ್ನ ಸಿನಿಮಾ ನೋಡಿದ್ವಪ್ಪ ಅಂತ ದಿಲ್ ಖುಷ್ ಆಗ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರೇಕ್ಷಕರು ಮುಗಿ ಬೀಳುತ್ತಿದ್ದು, ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿವೆ. 

Share this Video
  • FB
  • Linkdin
  • Whatsapp

ಕನ್ನಡದ ಅಪ್ಪಟ ಹಳ್ಳಿ ಸೊಗಡಿನ ನಾಟಿ ಸ್ಟೈಲ್ ಟಗರು ಪಲ್ಯ ರುಚಿಗೆ ಕನ್ನಡ ಸಿನಿ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಎಷ್ಟೂ ತಿಂಗಳಾದ ಮೇಲೆ ನಮ್ಮ ನೇಚರ್ನ ಸಿನಿಮಾ ನೋಡಿದ್ವಪ್ಪ ಅಂತ ದಿಲ್ ಖುಷ್ ಆಗ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರೇಕ್ಷಕರು ಮುಗಿ ಬೀಳುತ್ತಿದ್ದು, ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿವೆ. ಇದರ ಫಲ ಇಂದಿನಿಂದ ಮತ್ತೆ ಎಕ್ಸ್ಟ್ರಾ 50 ಶೋಗಳನ್ನ ಕರ್ನಾಟಕದಲ್ಲಿ ಹೆಚ್ಚಾಗಿದೆ. ಹೀಗಾಗಿ ಟಗರು ಪಲ್ಯ ನಿರ್ಮಾಪಕ ಡಾಲಿ ಧನಂಜಯ್ ತಮ್ಮ ಟಗರು ಪಲ್ಯ ತಂಡ ಕಟ್ಟಿಕೊಂಡು ಇಡೀ ಕರ್ನಾಟಕದಲ್ಲಿ ವಿಜಯ ಯಾತ್ರೆ ಹೊರಟಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಮೊದಲು ಅಬ್ಬರಿಸಲು ಸಜ್ಜಾಗುತ್ತಿದೆ. ಕೊಳ್ಳೇಗಾಲ, ಮಂಡ್ಯ ಸೇರಿ ಬೆಳಕವಾಡಿ, ಮಳವಳ್ಳಿ & ಮೈಸೂರು ಮಾರ್ಗವಾಗಿ ಮೊದಲಿಗೆ 'ಟಗರು ಪಲ್ಯ' ತಂಡದ ವಿಜಯಯಾತ್ರೆ ಸಾಗಲಿದೆ. ಟಗರು ಪಲ್ಯ ಚಿತ್ರದಲ್ಲಿ ನಾಗಭೂಷಣ್ ಅಮೃತಾ ಪ್ರೇಮ್, ರಂಗಾಯಣ ರಘು ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಮೇಶ್ ಕೆ ಕೃಪಾ ಆಕ್ಷನ್ ಕಟ್ ಹೇಳಿದ್ದಾರೆ. 

Related Video