50 ಲಕ್ಷ ನಗದು, 1 ಕೆಜಿ ಚಿನ್ನ ಕೊಟ್ಟು ಅದ್ಧೂರಿ ಮದ್ವೆ, ಎರಡೇ ತಿಂಗ್ಳಲ್ಲಿ ವೈದ್ಯೆಗೆ ಇಂಜಿನಿಯರ್ ​ ಶಾಕ್​!

ಮೊದಲನೇ ಹೆಂಡ್ತಿಗೆ ಗೊತ್ತಾಗದೇ ಎರಡನೇ ಮದುವೆ. ವೈದ್ಯೆ ಬಳಿ ಕೇಜಿ ಕೇಜಿ ಚಿನ್ನ, 50 ಲಕ್ಷ  ವರದಕ್ಷಿಣೆ ಪಡೆದು ವಂಚನೆ ಮಾಡಿದ ಭೂಪ

Share this Video
  • FB
  • Linkdin
  • Whatsapp

ಬಳ್ಳಾರಿ, (ಸೆಪ್ಟೆಂಬರ್.04): ಗಣಿ ನಾಡು ಬಳ್ಳಾರಿಯಲ್ಲಿ ವರದಕ್ಷಿಣೆ ವಂಚನೆ ಪ್ರಕರಣವೊಂದು ಬಯಲಿಗೆ ಬಂದಿದೆ. ಹೈದರಾಬಾದ್​ ಮೂಲದ ವೈದ್ಯೆಗೆ ಮೋಸ ಮಾಡಿ ಮದುವೆಯಾದ ಬಳ್ಳಾರಿ ಮೂಲದ ಇಂಜಿನಿಯರ್​, ಇದೀಗ ಮತ್ತೊಂದು ಮದುವೆ ಆಗುವ ಮೂಲಕ ವೈದ್ಯೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಪ್ರಿಯಕರ ಮೇಲಿನ ಮೋಹ: ಗಂಡನನ್ನೇ ಬೆಂಗಳೂರಲ್ಲಿ ಹತ್ಯಗೈದು ಮಂಡ್ಯದಲ್ಲಿ ಸಿಕ್ಕಿ ಬಿದ್ಲು

ಹೈದರಾಬಾದ್​ ಮೂಲದ ವೈದ್ಯೆ ಮೌನಿಕಾ ಅವರು ‌ಬಳ್ಳಾರಿ ಮೂಲದ ಇಂಜಿನಿಯರ್ ರಘುರಾಮ ರೆಡ್ಡಿ ಜೊತೆ 2019ರಲ್ಲಿ ಮದುವೆ ಆಗಿದ್ದರು. ಆಸ್ಟ್ರೇಲಿಯಾದಲ್ಲಿ ‌ಕೆಲಸ ಮಾಡುತ್ತಿರುದಾಗಿ ಸುಳ್ಳು ಹೇಳಿ 50 ಲಕ್ಷ ನಗದು, ಒಂದು ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ರುಘುರಾಮ್​ ವರದಕ್ಷಿಣೆ ಪಡೆದುಕೊಂಡಿದ್ದ. ಮದುವೆ ಆಗಿ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ಹಣಕ್ಕಾಗಿ ಹೆಂಡ್ತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇತ್ತ ಮೊದಲನೇ ಹೆಂಡ್ತಿಗೆ ಗೊತ್ತಾಗದೇ ಎರಡನೇ ಮದುವೆಯಾಗಿ ವಂಚನೆ ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದವರ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

Related Video