ಪ್ರಿಯಕರ ಮೇಲಿನ ಮೋಹ: ಗಂಡನನ್ನೇ ಬೆಂಗಳೂರಲ್ಲಿ ಹತ್ಯಗೈದು ಮಂಡ್ಯದಲ್ಲಿ ಸಿಕ್ಕಿ ಬಿದ್ಲು

ಗಂಡನನ್ನ ಬೆಂಗಳೂರಲ್ಲಿ ಕೊಲೆ ಮಾಡಿ ಮಂಡ್ಯದಲ್ಲಿ ಹೆಂಡತಿ ಸಿಕ್ಕಿ ಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. 

Share this Video
  • FB
  • Linkdin
  • Whatsapp

ಮಂಡ್ಯ/ಬೆಂಗಳೂರು, (ಸೆಪ್ಟೆಂಬರ್.04): ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನ ಬೆಂಗಳೂರಲ್ಲಿ ಕೊಲೆ ಮಾಡಿ ಮಂಡ್ಯದಲ್ಲಿ ಹೆಂಡತಿ ಸಿಕ್ಕಿ ಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮಹೇಶ್ ಕೊಲೆಯಾದ ದುರ್ದೈವಿ ಪತಿ. 

Bengaluru Crime: ಪ್ರೇಯಸಿಗಾಗಿ ಸ್ನೇಹಿತನನ್ನೇ ಕೊಂದ ಬಾಲ್ಯಸ್ನೇಹಿತ

ಕೋಣನಕುಂಟೆ ಪೊಲೀಸರು ಮಹೇಶ್ ಪತ್ನಿ ಶಿಲ್ಪಾ ಮತ್ತು ಆಕೆಯ ತಾಯಿಯನ್ನು ಬಂಧಿಸಿದ್ದಾರೆ. ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾ ದಂಪತಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಶಿಲ್ಪಾ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಕಟ್ಟಿಕೊಂಡು ಗಂಡನನ್ನೇ ಕೊಂದಿದ್ದಾಳೆ. ಬಳಿಕ ಕಥೆ ಕಟ್ಟಿದ್ದಾಳೆ. ಇದರಿಂದ ಅನುಮಾನಗೊಂಡು ಮೃತ ಮಹೇಶನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Related Video