Asianet Suvarna News Asianet Suvarna News

ಪಾಪರಾಜಿಗಳಿಗೆ ಸ್ಮೈಲ್ ಮಾಡುತ್ತಾ ಹೊರಟ ಕಿಯಾರಾ; ಇಲ್ಲಿದೆ ವಿಡಿಯೋ

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾಣಿ ಸಕ್ಸಸ್ ಫುಲ್ ಜರ್ನಿಯಲ್ಲಿದ್ದಾರೆ. ಕಿಯಾರಾ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿವೆ. ಇತ್ತೀಚಿಗಷ್ಟೆ ಕಿಯಾರಾ ಅಡ್ವಾನಿ ಜಗ್ ಜಗ್ ಜಿಯೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ರಿಲೀಸ್ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಕಿಯಾರಾ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರ ಜೊತೆ ವಿದೇಶಕ್ಕೆ ಹಾರಿದ್ದರು. 

Aug 9, 2022, 1:34 PM IST

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾಣಿ ಸಕ್ಸಸ್ ಫುಲ್ ಜರ್ನಿಯಲ್ಲಿದ್ದಾರೆ. ಕಿಯಾರಾ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿವೆ. ಇತ್ತೀಚಿಗಷ್ಟೆ ಕಿಯಾರಾ ಅಡ್ವಾನಿ ಜಗ್ ಜಗ್ ಜಿಯೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ರಿಲೀಸ್ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಕಿಯಾರಾ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರ ಜೊತೆ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕಿಯಾರಾ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಕಿಯಾರಾ ಕ್ರೋಮ್ ಸ್ಟೂಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಂದ್ರದ ಸ್ಟೂಡಿಯೋದಲ್ಲಿ ಕಾಣಿಸಿಕೊಂಡಿರುವ ಕಿಯಾರಾ ಪಾಪರಾಜಿಗಳ ಮುಂದೆ ಹಾಜರಾಗಿದ್ದರು. ಬಳಿಕ ಕಿಯಾರಾ ಕ್ಯಾಮರಾ ಕಡೆ ಕೈ ಬೀಸುತ್ತಾ ಅಲ್ಲಿಂದ ಹೊರಟರು.    
 

Video Top Stories