ಠಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ವಂದೇ ಮಾತರಂ'ನ ಅನಧಿಕೃತ ಆವೃತ್ತಿ ಪ್ರಸಾರವಾಗಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವೇದಿಕೆಯಲ್ಲೇ ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.
- Home
- News
- India News
- India Latest News Live: ಲತಾ ಮಂಗೇಶ್ಕರ್ ಧ್ವನಿಯ 'ವಂದೇ ಮಾತರಂ' ಪ್ರಸಾರ - ಆಯೋಜಕರ ತಪ್ಪಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಚ್ಚರಿಕೆ!
India Latest News Live: ಲತಾ ಮಂಗೇಶ್ಕರ್ ಧ್ವನಿಯ 'ವಂದೇ ಮಾತರಂ' ಪ್ರಸಾರ - ಆಯೋಜಕರ ತಪ್ಪಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಚ್ಚರಿಕೆ!

ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಬಳಿಕ ಕಾಂಗ್ರೆಸ್- ಬಿಜೆಪಿ ನಡುವೆ ಶುರುವಾಗಿದ್ದ ‘ಬೌದ್ಧಿಕ ನಕ್ಸಲ್’ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ‘ನಾನು ಬೌದ್ಧಿಕ ನಕ್ಸಲ್ ಆಗಲು ಹೆಮ್ಮೆ ಪಡುತ್ತೇನೆ’ನೆಂಬ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿಕೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.
2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಮಾವೋವಾದಿಗಳ ಸಮಸ್ಯೆ ದೇಶ ಎದುರಿಸುತ್ತಿರುವ ಏಕೈಕ ಅತಿದೊಡ್ಡ ಆಂತರಿಕ ಭದ್ರತಾ ಸವಾಲು ಎಂದಿದ್ದರು. ಆದರೆ, ಈಗ ಚಿದಂಬರಂ ನಾನು ಬೌದ್ಧಿಕ ನಕ್ಸಲ್ ಆಗಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಕುಟುಂಬದ ಕ್ಷಮೆ ಯಾಚಿಸಬೇಕು ಎಂದು ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.
ತ್ರಿವೇದಿ ತಿರುಗೇಟು:
ಈ ನಡುವೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ಕಾಂಗ್ರೆಸ್ ಪಕ್ಷ ‘ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್’ ಎಂಬುದಾಗಿ ಅವರ ಪಕ್ಷದವರೇ ಬಯಲು ಮಾಡಿದ್ದರು. ಇದೀಗ ತಮ್ಮದು ‘ಬೌದ್ಧಿಕ ನಕ್ಸಲ್ ಕಾಂಗ್ರೆಸ್’ ಎಂದು ಹೇಳಿಕೊಳ್ಳುತ್ತಿದ್ದಾರೆ’ಎಂದು ವ್ಯಂಗ್ಯವಾಡಿದರು.
India Latest News Live 18 August 2026ಲತಾ ಮಂಗೇಶ್ಕರ್ ಧ್ವನಿಯ 'ವಂದೇ ಮಾತರಂ' ಪ್ರಸಾರ - ಆಯೋಜಕರ ತಪ್ಪಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಚ್ಚರಿಕೆ!
India Latest News Live 18 August 2026ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ - 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!
ಫೆರಾರಿಯ ಚೊಚ್ಚಲ ಎಲೆಕ್ಟ್ರಿಕ್ ಕಾರು 'ಫೆರಾರಿ ಲ್ಯೂಸ್ ಚಾಸಿಸ್ ಒ' ದಾಖಲೆಯ 382 ಕೋಟಿ ರೂಪಾಯಿಗೆ ಹರಾಜಾಗಿದೆ, ಇದು ವಿಶ್ವದ ಅತ್ಯಂತ ದುಬಾರಿ ಇವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಅಮೆರಿಕದ ಉದ್ಯಮಿ ಹರ್ಬರ್ಟ್ ವರ್ಥೈಮ್ ಖರೀದಿಸಿದ್ದಾರೆ.
India Latest News Live 18 August 2026"ಗಂಡಸರಿಲ್ಲದೆ ನಿಮಗಿದು ಸಾಧ್ಯವಿಲ್ಲ" ಎಂದವರಿಗೆ ದಿಟ್ಟ ಉತ್ತರ, ಮೈನಸ್ ಡಿಗ್ರಿ ಚಳಿ 2 ಧ್ರುವ ದಾಟಿದ ಮೊದಲ ಮಹಿಳೆ ಕಥೆ!
India Latest News Live 18 August 2026ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಜಡೇಜಾ.. 84 ಬಾರಿ ಮಿಸ್ಟೇಕ್ಸ್..!
2021 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್ (84) ಎಸೆದ ಸ್ಪಿನ್ನರ್ ಎಂಬ ಬೇಡದ ದಾಖಲೆ ರವೀಂದ್ರ ಜಡೇಜಾ ಹೆಸರಿಗೆ ಸೇರಿದೆ. ಈ ನಡುವೆ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ.
India Latest News Live 18 August 2026'ತೀವ್ರ ಮುಟ್ಟಿನ ನೋವಿದೆ..ಆಫೀಸ್‌ಗೆ ಬರಲ್ಲ..' GenZ ಯುವತಿಯ ನೇರ ಇಮೇಲ್ ಶೇರ್ ಮಾಡಿ ಮೆಚ್ಚಿದ ಸಿಇಒ!
ಗುರುಗ್ರಾಂನಲ್ಲಿ, ಜೆನ್ ಜಿ ಉದ್ಯೋಗಿಯೊಬ್ಬರು ತೀವ್ರ ಮುಟ್ಟಿನ ನೋವಿನ ಕಾರಣ ನೀಡಿ ತಮ್ಮ ಸಿಇಒಗೆ ರಜೆ ಕೋರಿ ಇಮೇಲ್ ಮಾಡಿದ್ದಾರೆ. ಈ ಇಮೇಲ್ ಅನ್ನು ಸಿಇಒ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
India Latest News Live 18 August 2026ಆಸ್ಟ್ರೇಲಿಯಾದಲ್ಲಿ 5 ನಿಮಿಷ ಸ್ನಾನ ಮಾಡಿದ್ದಕ್ಕೆ ಭಾರತೀಯ ಯುವತಿಗೆ ₹1.30 ಲಕ್ಷ ದಂಡ! ಸಂಬಳ ಅದಕ್ಕೇ ಹೋಯ್ತು!
India Latest News Live 18 August 2026ಸೇನೆಯ ಕನಸು ಕಂಡಿದ್ದ 21ರ ಹುಡುಗ ಇಂಡಿಯನ್ ಮಿಲಿಟರಿ ಅಕಾಡೆಮಿಯ ತರಬೇತಿ ವೇಳೆಯಲ್ಲೇ ಕುಸಿದು ಬಿದ್ದು ಸಾವು!
ಡೆಹ್ರಾಡೂನ್‌ನ 'ಇಂಡಿಯನ್ ಮಿಲಿಟರಿ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಕೆಡೆಟ್ ನಿಶಾಂತ್ ಧನ್‌ಕರ್, ಜಂಗಲ್ ಕ್ಯಾಂಪ್ ತರಬೇತಿ ವೇಳೆ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
India Latest News Live 18 August 2026ಕ್ಯಾರೆಟ್ನಲ್ಲಿ ಸಿಕ್ಕಿತು ವಜ್ರದ ಉಂಗುರ! ಸಿನಿಮಾ ಸ್ಟೋರಿ ಮೀರಿಸೋ ರೋಚಕ ನೈಜ ಘಟನೆ
India Latest News Live 18 August 2026ಹವಾಯಿಯ ಮೌನಾ ಕಿಯಾ ಕಾಡಿಗೆ ಶಾಪವಾದ ಯುರೋಪಿಯನ್ ಕುರಿಗಳು, ಪಲಿಲಾ ಹಕ್ಕಿಯ ಮೌನರೋಧನೆ, ಇದು ಕಾಡು ನಾಶದ ರಿಯಲ್ ಕಥೆ!
India Latest News Live 18 August 2026ಗಣೇಶೋತ್ಸವಕ್ಕೆ ದಾಖಲೆಯ ₹508 ಕೋಟಿ ವಿಮೆ - ಕಳೆದ ವರ್ಷಕ್ಕಿಂತ 34 ಕೋಟಿ ಹೆಚ್ಚು!
ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿಯಾದ ಮುಂಬೈನ 'ಜಿಎಸ್‍ಬಿ ಸೇವಾ ಮಂಡಳ' ಈ ಬಾರಿಯ ಗಣೇಶೋತ್ಸವಕ್ಕಾಗಿ ₹508 ಕೋಟಿ ಮೊತ್ತದ ದಾಖಲೆಯ ವಿಮೆ ಪಡೆಯಲು ಮುಂದಾಗಿದೆ. ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಿಂದಾಗಿ ವಿಮಾ ಮೊತ್ತ ಹೆಚ್ಚಾಗಿದೆ.
India Latest News Live 18 August 2026ಇಮ್ರಾನ್ ಖಾನ್ ತೀವ್ರ ಅನಾರೋಗ್ಯ, ಜೈಲಿನಿಂದ ತತ್‌ಕ್ಷಣ ಆಸ್ಪತ್ರೆಗೆ ಸೇರಿಸಲು ಸುಪ್ರೀಂ ಖಡಕ್ ಆದೇಶ!
India Latest News Live 18 August 2026ಜಮೀನು, ಚಿನ್ನಾಭರಣ, ನಗದು ಎಲ್ಲಾ ಸೇರಿ 100 ಕೋಟಿ ಆಸ್ತಿ ಸರ್ಕಾರಕ್ಕೆ ಬರೆದು ಕೊಟ್ಟ ಡಾಕ್ಟರ್
India Latest News Live 18 August 2026ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ- ಕೆಲವು ರದ್ದು; ಡಿಟೇಲ್ಸ್ ಇಲ್ಲಿದೆ
ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಕಾಮಗಾರಿಯಿಂದಾಗಿ, ಆಗಸ್ಟ್ 19 ರಿಂದ 26 ರವರೆಗೆ ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
India Latest News Live 18 August 2026ರಾಜಸ್ಥಾನ ರಾಯಲ್ಸ್‌ಗೆ ಯಶಸ್ವಿ ಜೈಸ್ವಾಲ್ ಗುಡ್ ಬೈ? ಹಾರ್ದಿಕ್ ಪಾಂಡ್ಯ ಜೊತೆ ಬಿಗ್ ಟ್ರೇಡ್ ಡೀಲ್ ನಿಜಾನಾ?
India Latest News Live 18 August 2026ಡಾಕ್ಟರ್‌ಗಳಿಗೂ ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟ ವ್ಯಕ್ತಿ - ಫೋರ್ಕ್ ಬೇಡ, ಕೈಯೇ ಮೇಲು ಅಂದ್ರು ನೆಟ್ಟಿಗರು!
India Latest News Live 18 August 2026Snake Repellent Plants - ಅಂಗಳದಲ್ಲಿ ಈ ಗಿಡಗಳನ್ನು ನೆಡಿ, ಮಳೆಗಾಲದಲ್ಲಿ ಹಾವುಗಳು ಮನೆಯ ಹತ್ತಿರಕ್ಕೂ ಸುಳಿಯಲ್ಲ!
ಮಳೆಗಾಲದಲ್ಲಿ ಹಾವುಗಳು ತಮ್ಮ ಬಿಲಗಳಿಂದ ಹೊರಬಂದು ಒಣ ಜಾಗಗಳನ್ನು ಹುಡುಕಿಕೊಂಡು ಮನೆಗಳತ್ತ ಬರುತ್ತವೆ. ಆದರೆ, ಮನೆಯ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕೆಲವು ವಿಶೇಷ ಗಿಡಗಳನ್ನು ಬೆಳೆಸುವುದರಿಂದ ಹಾವುಗಳು ಬರದಂತೆ ತಡೆಯಬಹುದು.
India Latest News Live 18 August 202616 ವರ್ಷ, 275 ಕೆಜಿ! ಸ್ಪೆಷಲ್ ಸರ್ಜರಿ ಮಾಡಿ ಬಾಲಕನಿಗೆ ಮರುಜೀವ ಕೊಟ್ಟ ದೆಹಲಿ ವೈದ್ಯರು
ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.